ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಮೃತಪಟ್ಟ ಯೋಧರಿಗೆ ಶ್ರದ್ಧಾಂಜಲಿ ಹಾಗೂ ನುಡಿ ನಮನ ಕಾರ್ಯಕ್ರಮ ಮಾಣಿ ಜಂಕ್ಷನ್‌ನಲ್ಲಿ ಮಾಣಿ ಹಿಂದೂ ಜಾಗರಣ ವೇದಿಕೆ ಹಾಗೂ ಶಾರದಾ ಯುವ ವೇದಿಕೆ ವತಿಯಿಂದ ನಡೆಯಿತು.
ಮೊಂಬತ್ತಿ ಹಚ್ಚುವುದರ ಮೂಲಕ ಯೋಧರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ನುಡಿನಮನ ಸಲ್ಲಿಸಿ ಮಾತನಾಡಿದ ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ್ಯ ಕಾರ್ಯದರ್ಶಿ ರಾಧಾಕೃಷ್ಣ ಅಡ್ಯಂತಾಯ ಅವರು ಕಾಶ್ಮೀರದಲ್ಲಿ ಉಗ್ರರು ತಯಾರಾಗುತ್ತಿದ್ದು, ಅವರಿಗೆ ಭಾರತ ವಿರುದ್ಧ ದ್ವೇಷ ಪಡುವಂತೆ ಪೋಷಿಸಲಾಗುತ್ತಿದೆ. ಪಾಕಿಸ್ತಾನಕ್ಕೆ ನೇರವಾಗಿ ಯುದ್ಧ ಮಾಡಿ ಗೆಲ್ಲಲು ಅಸಾಧ್ಯವೆಂಬ ಕಾರಣಕ್ಕೆ ಹಿಂದಿನಿಂದ ಯುದ್ಧಕ್ಕೆ ಬರುತ್ತಿದ್ದಾರೆ. ಭಾರತದ ವಿರುದ್ಧದ ಯುದ್ಧದಲ್ಲಿ ಮರಣ ಹೊಂದಿದ ಉಗ್ರರಿಗೆ ಸ್ವರ್ಗ ಸಿಗುತ್ತದೆ ಎಂಬುದಾಗಿ ಅವರ ತಲೆಗೆ ತುಂಬಿಸಲಾಗುತ್ತಿದೆ. ಕಾಶ್ಮೀರದಲ್ಲಿ ನಡೆದ ಕೃತ್ಯ ಖಂಡನೀಯವಾಗಿದೆ. ಉಗ್ರರಿಗೆ ತಕ್ಕ ಪಾಠ ಕಲಿಸುವ ಅನಿವಾರ್ಯತೆ ಇದೆ ಎಂದರು.
ನಿವೃತ್ತ ಸೈನಿಕ ಮಾಧವ ಕುಲಾಲು, ಗ್ರಾಮ ಪಂಚಾಯಿತಿ ಸದಸ್ಯ ನಾರಾಯಣ ಶೆಟ್ಟಿ, ರಮಣಿ, ಮಾಣಿ ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷ ಭರತ್ ಶೆಟ್ಟಿ, ವಿಟ್ಲ ತಾಲ್ಲೂಕು ಜಾಗರಣ ವೇದಿಕೆಯ ಅಧ್ಯಕ್ಷ ನರಸಿಂಹ ಶೆಟ್ಟಿ ಮಾಣಿ, ಬಾಬು ಶೆಟ್ಟಿ ಮಾಣಿ, ಮಧುಸೂಧನ್ ಭಟ್, ಸುಬ್ರಾಯ ನಾಯಕ್, ಸಂದೀಪ್ ಪೂಜಾರಿ ಮಾಣಿ ಮೊದಲಾದವರು ಭಾಗವಹಿಸಿದ್ದರು.