ಬಂಟ್ವಾಳ: ಬಂಟ್ವಾಳ ಯುವಮೋರ್ಚಾದ ವತಿಯಿಂದ ಪುಲ್ವಾಮದಲ್ಲಿ ಪ್ರಾಣಾರ್ಪಣೆಗೈದ ಹುತಾತ್ಮರಿಗೆ ನುಡಿನಮನ ಮತ್ತು ಪುಷ್ಪಾಂಜಲಿ ಕಾರ್ಯಕ್ರಮ ಬಿ.ಸಿ.ರೋಡ್ ಬಿಜೆಪಿ ಕಚೇರಿಯಲ್ಲಿ ನಡೆಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಯುವಮೋರ್ಚಾ ಅಧ್ಯಕ್ಷರಾದ ವಜ್ರನಾಥ ಕಲ್ಲಡ್ಕ ಕುದಿವ ರಕ್ತದ ಬಿಸಿ ಆರುವ ಮುನ್ನ ಪ್ರತಿಕಾರದ ಕೆಲಸ ನಡೆಯಲಿ, ಹುತಾತ್ಮ ಸೈನಿಕರಿಗೆ ಬಾವಪೂರ್ಣ ಶ್ರದ್ದಾಂಜಲಿ ಅಲ್ಲದೆ ಮತ್ತೇನು ನೀಡಲು ಸಾದ್ಯ ಎಂದರು
ನ್ಯಾಯವಾದಿ ಪ್ರಸಾದ್ ಕುಮಾರ್ ನುಡಿನಮನ ಸಲ್ಲಿಸಿ ಸೈನಿಕ ಸಹೋದರರ ಸಾವನ್ನು ಸಂಭ್ರಮಿಸುವವರ ಬಗ್ಗೆ ಸಮಾಜ ಎಚ್ಚರವಾಗಿರಬೇಕು. ತಾಯಿ ಭಾರತಿಯ ರಕ್ಷಣೆಗಾಗಿ ಮನೆ ಮನೆಯಲ್ಲಿ ಮಾತೃಶಕ್ತಿಗಳು ಜಾಗೃತವಾದಗ ಸುಭದ್ರ ಮತ್ತು ಪರಮವೈಭವದ ಭಾರತ ಮರುಸ್ಥಾಪಿಸುವುದರ ಜೊತೆಗೆ ದೇವಸಾಯೂಜ್ಯ ಹೊಂದಿದ ಸೈನಿಕರ ಕುಟುಂಬಕ್ಕೆ ಸಾವಿನ ದುಖಃವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಹೇಳಿದರು.
ಬಲಿದಾನವಾದ ವೀರ ಸೇನಾನಿಗಳ ಆತ್ಮಕ್ಕೆ ಚಿರಶಾಂತಿಯನ್ನು ಕೋರಿ ಹಣತೆಯನ್ನು ಹಚ್ಚಿ ಪುಷ್ಪನಮನ ಸಲ್ಲಿಸಲಾಯಿತು. ಈ ದೇಶಭಕ್ತಿಯ ಕಾರ್ಯಕ್ರಮದಲ್ಲಿ ಕ್ಷೇತ್ರ ಬಿಜೆಪಿ ಅಧ್ಯಕ್ಷರಾದ ದೇವದಾಸ್ ಶೆಟ್ಟಿ, ಎಸ್ ಸಿ ಮೋರ್ಚಾ ಜಿಲ್ಲಾಧ್ಯಕ್ಷರಾದ ದಿನೇಶ್ ಅಮ್ಟೂರು, ರೈತ ಮೋರ್ಚಾದ ಅಧ್ಯಕ್ಷರಾದ ತನಿಯಪ್ಪ ಗೌಡ, ನರಿಕೊಂಬು ಪಂಚಾಯತ್ ಅಧ್ಯಕ್ಷರಾದ ಯಶೋದರ ಕರ್ಬೆಟ್ಟು, ಪ್ರಮೋದ್ ಕುಮಾರ್ ಬೀಸಿರೋಡ್, ರಮಾನಾಥ ರಾಯಿ, ಯುವಮೋರ್ಚಾ ಪ್ರಮುಖರಾದ ಸುದರ್ಶನ್ ಬಜ, ರೂಪೇಶ್ ಆಚಾರ್ಯ, ದಿನೇಶ್ ದಂಬೆದಾರ್, ಸುರೇಶ್ ಕೋಟ್ಯಾನ್, ಕರುಣಾಕರ ಮೆಲ್ಕಾರ್ ಯತೀನ್ ಕುಮಾರ್ ಕಲ್ಲಡ್ಕ, ತಿರುಲೇಶ್, ನಾರಾಯಣ ಪೂಜಾರಿ ಉಪಸ್ಥಿತರಿದ್ದರು.