ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಬಂಟ್ವಾಳ: ಮೂಲತ್ವ ಫೌಂಡೇಷನ್ ಚಾರಿಟೇಬಲ್ ಟ್ರಸ್ಟ್ ಐದನೇ ಮೂಲತ್ವ ವಿಶ್ವಪ್ರಶಸ್ತಿ ಪ್ರಧಾನ ಸಮಾರಂಭ ಕಾವಳಕಟ್ಟೆಯ ಬೆಂಗತ್ತೋಡಿಯಲ್ಲಿ ನಡೆಯಿತು. ಮ್ಯಾಗಸ್ಸೆಸೆ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮಹಾರಾಷ್ಟ್ರದ ಲೋಕ ಬಿರಾದರ್ ಪ್ರಕಲ್ಪದ ಡಾ. ಪ್ರಕಾಶ್ ಆಮ್ಟೆ, ಮತ್ತು ಡಾ. ಮಂದಾಕಿನಿ ಆಮ್ಟೆ ದಂಪತಿಗಳಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಕಾಶ್ ಆಮ್ಟೆ, ಮತ್ತು ಡಾ. ಮಂದಾಕಿನಿ ಆಮ್ಟೆ ದಂಪತಿಗಳು ದೀಪಪ್ರಜ್ವಲಿಸಿದರು. ಬಳಿಕ ಮಾತನಾಡಿದ ಪ್ರಕಾಶ್ ಆಮ್ಟೆ ಉತ್ತಮವಾದ ಶಿಕ್ಷಣದಿಂದ ದೇಶದ ಅಭಿವೃದ್ದಿ ಸಾಧ್ಯವಾಗುತ್ತದೆ, ನಾಗರೀಕತೆಯ ಅರಿವಿರದ ತೀರಾ ಗ್ರಾಮೀಣ ಪ್ರದೇಶಗಳಲ್ಲಿ ಮೂಭೂತ ಸೌಲಭ್ಯಗಳ ಜೊತೆ ಉತ್ತಮ ಶಿಕ್ಷಣ ದೊರಕುವಂತಾಗಬೇಕು ಎಂದರು. ಕ್ರೂರ ಕಾಡು ಪ್ರಾಣಿಗಳು ಪ್ರೀತಿ ತೋರಿದರೆ ಶಾಂತಿಯಿಂದಿರುತ್ತದೆ, ದಯೆ, ಮನುಷ್ಯತ್ವ ಮಾನವನಲ್ಲಿ ಬೇಕಾಗಿದೆ. ಫಲಾಪೇಕ್ಷೆ ಇಲ್ಲದೆ ಮಾಡುವ ನಿಸ್ವಾರ್ಥ ಸೇವೆ ಮನಸ್ಸಿಗೆ ಸಂತಸ ನೀಡುತ್ತದೆ ಎಂದು ತಿಳಿಸಿದರು.
ನಿಟ್ಟೆ ವಿವಿಯ ಕುಲಪತಿ ಎನ್. ವಿನಯ ಹೆಗ್ಡೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಡಾ. ಪ್ರಕಾಶ್ ಆಮಟೆಯವರದ್ದು ವಿಮರ್ಶೆಗೆ ನಿಲುಕದ ವ್ಯಕ್ತಿತ್ವ ಎಂದು ಬಣ್ಣಿಸಿದರು. ನಾಗರೀಕ ಸಮಾಜದ ಸಂಪರ್ಕವೇ ಇಲ್ಲದ ಕಾಡು ಜನರಿಗೆ ಶಿಕ್ಷಣ ಹಾಗೂ ಆರೋಗ್ಯವನ್ನು ನೀಡಿ ಅವರನ್ನು ಮುಖ್ಯವಾಹಿನಿಗೆ ತರುವಲ್ಲಿ ಡಾ. ಆಮ್ಟೆಯವರ ಪಾತ್ರ ಮಹತ್ವದ್ದು. ಅವರ ಸಮಾಜ ಸೇವೆ ಯುವ ಸಮುದಾಯಕ್ಕೆ ಮಾದರಿ. ಅವರ ಒಟ್ಟು ಕೆಲಸದ ಒಂದು ಅಂಶವನ್ನು ಮಾಡಿದರೂ ನಮ್ಮ ಜೀವನ ಸಾರ್ಥಕ ಎಂದರು.
ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ. ತುಕರಾಮ ಪೂಜಾರಿ, ಬೆಂಗಳೂರಿನ ಬಿ.ವಿ.ಕಾರಂತ್ ರಂಗ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಎಮ್. ಜಯರಾಮ್ ಪಾಟೀಲ್, ನಿವೃತ್ತ ಸೇನಾನಿ ಅಣ್ಣಪ್ಪ ಎಚ್., ವಗ್ಗದ ವೈದ್ಯೆ ಡಾ.ರಿಯೋನಾ ಸೆರಾ, ಪ್ರಗತಿರ ಕೃಷಿಕ ಅಮೈ ಮಹಾಲಿಂಗ ನಾಯ್ಕ್, ಕಾವಳಪಡೂರು ಗ್ರಾ.ಪಂ. ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಸದಸ್ಯ ಚಂದ್ರಶೇಖರ ಕರ್ಣ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ನಿವೃತ್ತ ಪ್ರಾಂಶುಪಾಲ ಡಾ. ರಾಜ್‌ಮೋಹನ್ ರಾವ್ ಸ್ವಾಗತಿಸಿದರು, ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್‌ನ ಸಂಸ್ಥಾಪಕ ಪ್ರಕಾಶ್ ಮೂಲತ್ವ ಪ್ರಕಾಶ್ ಮೂಲತ್ವ ಪ್ರಸ್ತಾವಿಸಿದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.