Categories: ಕಲ್ಲಡ್ಕ

ಕಲ್ಲಡ್ಕ ಶ್ರೀ ಉಮಾಶಿವ ಕ್ಷೇತ್ರ ಬ್ರಹ್ಮಕಲಶದ ಷಷ್ಠಮ ಪ್ರತಿಷ್ಠಾ ವರ್ಧಂತ್ಯುತ್ಸವ

ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ

ಕಲ್ಲಡ್ಕ: ಶ್ರೀ ಉಮಾಶಿವ ಕ್ಷೇತ್ರದ ಶ್ರೀ ದೇವರ ಪ್ರತಿಷ್ಠಾ ಬ್ರಹ್ಮಕಲಶದ ಷಷ್ಠಮ ವರ್ಧಂತ್ಯುತ್ಸವ ಕಾರ್ಯಕ್ರಮ ಶ್ರೀರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಮಾರ್ಗದರ್ಶನದಲ್ಲಿ ಶನಿವಾರ ಫೆ.16ರಂದು ಶ್ರೀ ಕ್ಷೇತ್ರದಲ್ಲಿ ನಡೆಯಿತು.

ಜಾಹೀರಾತು

ವೈದಿಕ ಕಾರ್ಯಕ್ರಮಗಳಾದ ಪುಣ್ಯಾಹವಾಚನ, ಗಣಪತಿ ಹವನ, ನವಕ ಪ್ರತಿಷ್ಠೆ, ಶತರುದ್ರ ಜಪ, ನಾಗ ರಕ್ತೇಶ್ವರಿ ತಂಬಿಲ, ಸಾಮೂಹಿಕ ಕುಂಕುಮಾರ್ಚನೆ, ನವಕ ಕಲಶಾಭಿಷೇಕ, ಮಹಾಪೂಜೆ ಮಂಗಳೂರು ಹವ್ಯಕ ಮಂಡಲ ವೈದಿಕ ಪ್ರಧಾನ ಅಮೈ ಶಿವಪ್ರಸಾದ್ ಭಟ್ ನೇತೃತ್ವದಲ್ಲಿ ಸೇವಾ ಸಮಿತಿಯ ಗೌರವಾಧ್ಯಕ್ಷ ಸಿ.ವಿ.ಗೋಪಾಲಕೃಷ್ಣ, ಅಧ್ಯಕ್ಷ ರಾಕೋಡಿ ಈಶ್ವರ ಭಟ್, ಕಾರ್ಯದರ್ಶಿ ಕೆ.ಟಿ.ಗಣೇಶ, ಕೋಶಾಧಿಕಾರಿ ಎನ್.ಎಸ್.ಶ್ರೀಕಾಂತ್, ಸಮಿತಿ ಸದಸ್ಯರಾದ ಯತಿನ್ ಕುಮಾರ್ ಯೇಳ್ತಿಮಾರ್, ಶ್ಯಾಮ ಭಟ್ ಪಂಜಿಗದ್ದೆ, ಅಡ್ಕತಿಮಾರು ರಾಮಚಂದ್ದ್ರ ಭಟ್, ನೆಕ್ರಾಜೆ ಈಶ್ವರ ಭಟ್ ಮೊದಲಾದವರ ಉಪಸ್ಥಿತಿಯಲ್ಲಿ ನಡೆಯಿತು.

ಇದೇ ವೇಳೆ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ತಂತ್ರಿಗಳಾದ ವೇ.ಮೂ. ಶಂಕರನಾರಾಯಣ ಭಟ್ ನಡಿಬೈಲು, ಕ್ಷೇತ್ರದ ಹಿನ್ನೆಲೆಯಂತೆ ಇಲ್ಲಿ ಅನ್ನಸಂತರ್ಪಣೆಗೆ ಮಹತ್ವವಿದ್ದು, ದೇವರ ಸಾನ್ನಿಧ್ಯಕ್ಕೆ ಭಕ್ತರ ಆಗಮನವೂ ಪ್ರಾಮುಖ್ಯತೆ ಪಡೆಯುತ್ತದೆ. ಧಾರ್ಮಿಕ ಕ್ಷೇತ್ರಗಳಲ್ಲಿ ಎಲ್ಲರಿಗೂ ಪ್ರಾಧಾನ್ಯತೆಯಿದ್ದು, ದೇವರ ಮುಂದೆ ಎಲ್ಲ ರೀತಿಯ ಸೇವೆಗಳೂ ಸಮಾನ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಹವ್ಯಕ ಮಹಾಮಂಡಲದ ಉಲ್ಲೇಖ ವಿಭಾಗ ಪ್ರಧಾನ ಗೋವಿಂದ ಭಟ್ ಬಳ್ಳಮೂಲೆ ಮಾತನಾಡಿ, ಇಂದು ಯುವಜನರು ಹಾಗೂ ಮಕ್ಕಳು ಧಾರ್ಮಿಕ ಆಚರಣೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ಭವಿಷ್ಯದ ದೃಷ್ಟಿಯಿಂದ ಪ್ರಾಮುಖ್ಯತೆ ಪಡಯುತ್ತದೆ ಎಂದರು.

ಅತಿಥಿಗಳಾಗಿ ಆಗಮಿಸಿದ ಮಾಜಿ ಸೈನಿಕ ರಾಮಯ್ಯ ಶೆಟ್ಟಿ ಸಂಪಿಲ ಮಾತನಾಡಿ, ಸೈನಿಕ ಮತ್ತು ರೈತ ದೇಶವನ್ನು ಉಳಿಸುತ್ತಾನೆ, ದೇವತಾ ಸನ್ನಿಧಿಗಳು ಈರ್ವರನ್ನೂ ಕಾಪಾಡುವಂತೆ ಪ್ರಾರ್ಥಿಸಬೇಕು ಎಂದರು. ವೇದಿಕೆಯಲ್ಲಿ ಸೇವಾ ಸಮಿತಿ ಗೌರವಾಧ್ಯಕ್ಷ ಸಿ.ವಿ.ಗೋಪಾಲಕೃಷ್ಣ, ಹವ್ಯಕ ಮಹಾಮಂಡಲದ ಮುಷ್ಠಿ ಭಿಕ್ಷಾ ಪ್ರಧಾನರಾದ ಮಲ್ಲಿಕಾ ಜಿ.ಭಟ್, ಹವ್ಯಕ ವಲಯ ಅಧ್ಯಕ್ಷ ಯು.ಎಸ್.ಚಂದ್ರಶೇಖರ ಭಟ್ ನೆಕ್ಕಿತರವು ಉಪಸ್ಥಿತರಿದ್ದರು. ಕೇಪು ಹವ್ಯಕ ವಲಯದ ಅಧ್ಯಕ್ಷ ಜನಾರ್ದನ ಭಟ್ ಅಮೈ ವಂದಿಸಿದರು. ವಿಟ್ಲ ಹವ್ಯಕ ವಲಯದ ಕೋಶಾಧಿಕಾರಿ ಮುರಳೀ ಕುಕ್ಕಿಲ ಕಾರ್ಯಕ್ರಮ ನಿರೂಪಿಸಿದರು. ಮಾನಸ ನೆಕ್ರಾಜೆ ಪ್ರಾರ್ಥಿಸಿದರು. ಕಾಶ್ಮೀರದಲ್ಲಿ ಭಯೋತ್ಪಾದಕರಿಂದ ಹತರಾದ ಸೈನಿಕರ ಆತ್ಮಕ್ಕೆ ಶಾಂತಿ ಕೋರಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಸೇವಾ ಸಮಿತಿ ಅಧ್ಯಕ್ಷ ರಾಕೋಡಿ ಈಶ್ವರ ಭಟ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಸೈನಿಕರ ಕಲ್ಯಾಣ ನಿಧಿಗೆ ವೈಯಕ್ತಿಕವಾಗಿ ಒಂದು ತಿಂಗಳ ವೇತನ ಹಾಗೂ ಉಮಾಶಿವಕ್ಷೇತ್ರದ ಸಂಘದ ವತಿಯಿಂದ ನೆರವು ಘೋಷಿಸಿದರು. ಈ ಸಂದರ್ಭ ಸಮೀಪದಲ್ಲೇ ನಿರ್ಮಾಣವಾಗುತ್ತಿರುವ ಮಂಗಲಧಾಮಕ್ಕೆ ಆರ್ಥಿಕ ನೆರವು ನೀಡಬೇಕು ಎಂದು ವಿನಂತಿಸಿದರು. ಬಳಿಕ ಅನ್ನಸಂತರ್ಪಣೆ, ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮಗಳು ನಡೆದವು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.