ಅಗಲಿದ ಯೋಧರಿಗೆ ಸಿದ್ಧಕಟ್ಟೆಯಲ್ಲಿ ನುಡಿನಮನ, ಭಾವಚಿತ್ರಕ್ಕೆ ಪುಷ್ಪಾರ್ಚನೆ, ಶ್ರದ್ಧಾಂಜಲಿ

ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಬಂಟ್ವಾಳ ತಾಲೂಕಿನ ಸಿದ್ದಕಟ್ಟೆಯ ಸ್ವಾಮಿ ವಿವೇಕಾನಂದ ಸರ್ಕಲ್ ನಲ್ಲಿ   ದೇಶಾಭಿಮಾನಿಗಳು ಸಿದ್ದಕಟ್ಟೆ ವತಿಯಿಂದ ಶನಿವಾರ ರಾತ್ರಿ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು. ಮೌನ ಪ್ರಾರ್ಥನೆ ಬಳಿಕ ವೀರಯೋಧರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ತಾ.ಪಂ. ಸದಸ್ಯ ಪ್ರಭಾಕರ ಪ್ರಭು , ರಾಷ್ಟ್ರ ದಲ್ಲಿದ್ದುಕೊಂಡು ರಾಷ್ಟ್ರದ್ರೋಹ ಮಾಡುವ ಸಂಘಟನೆಗಳಿಗೆ ವ್ಯಕ್ತಿಗಳಿಗೆ ಸಹಾಯಮಾಡುವುದು ಸರಿಯಲ್ಲ, ಅಂತಹವರಿಗೆ ತಕ್ಕ ಶಿಕ್ಷೆಯಾಗುವವರೆಗೆ ನಾವು ಒಂದಾಗಿ ಹೋರಾಡಬೇಕಾಗಿದೆ ಎಂದರು. ಭಯೋತ್ಪಾದನೆ ನಿರ್ಮೂಲನೆ ಮಾಡಲು ಜಾತಿ ಮತ ರಾಜಕೀಯ ಬಿಟ್ಟು ಒಂದಾಗೋಣ ಎಂದು ಅವರು ತಿಳಿಸಿದರು.
ಬಳಿಕ ಮಾತನಾಡಿದ ಡಾ. ಪ್ರಭಾಚಂದ್ರ ಜೈನ್ ಮಾತನಾಡಿ ವೈರಿ ರಾಷ್ಟ್ರದ ಜೊತೆ ಸೇಡು ತೀರಿಸಿಕೊಳ್ಳಲು ಭಾರತೀಯರಾದ ಎಲ್ಲರೂ ಒಟ್ಟಾಗಬೇಕು ಎಂದರು. ನಿವೃತ್ತ ಶಿಕ್ಷಕ ನಾರಾಯಣ ನಾಯಕ್ ಕರ್ಪೆ, ನಿವೃತ್ತ ಸೈನಿಕ ಮೋಹನ ಕುಲಾಲ್,ಕೇಶವ ಪೂಜಾರಿ, ಡಾ.ಯೋಗೀಶ ಕೈರೋಡಿ, ಸಿದ್ದಕಟ್ಟೆ ಹಾಲು ಉತ್ಪಾದಕ ರ ಸಹಕಾರ ಸಂಘದ ಕಾರ್ಯದರ್ಶಿ ಕೆ.ರತ್ನಕುಮಾರ್ ಚೌಟ, ಗ್ರಾ.ಪಂ.ಉಪಾಧ್ಯಕ್ಷ ಸತೀಶ್ ಪೂಜಾರಿ, ಗ್ರಾ.ಪಂ.ಸದಸ್ಯರಾದ ದೇವಪ್ಪ ಕರ್ಕೇರ, ಸುರೇಶ್ ಕುಲಾಲ್ , ಕೆ. ಮಯ್ಯದಿ, ಮಾದವ ಶೆಟ್ಟಿಗಾರ್, ಎಸ್.ಪಿ.ಶ್ರೀದರ್, ಕೃಷಿಕ ಶಿವಾನಂದ ರೈ, ಉದ್ಯಮಿ ದಿನೇಶ್ ಶೆಟ್ಟಿಗಾರ್, ಮೈಕಲ್ ಡಿ.ಕೋಸ್ತಾ, ಉಪನ್ಯಾಸಕ ಶೀನಪ್ಪ ಎನ್,  ಪ್ರಮುಖರಾದ ಸೀತಾರಾಮ ಶೆಟ್ಟಿ, ಉಮೇಶ್ ಗೌಡ ಮಂಚಕಲ್ಲು , ಅಶೋಕ್ ಆಚಾರ್ಯ, ಲಕ್ಮೀನಾರಾಯಣ ಆಚಾರ್ಯ, ಲೋಕಯ್ಯ ಗಾಡಿ‌ಪಲ್ಕೆ, ಸಂತೋಷ್ ‌ಕುಮಾರ್ ಚೌಟ ಕೊಯಿಲ, ಗೋಪಾಲ ಗೌಡ ಕೋರಿಯಾರ್, ಚಂದ್ರಶೇಖರ್ ಕರ್ಪೆ, ಅಲ್ತಾಪ್ ಗಾಡಿ ಪಲ್ಕೆ , ರೋನಾಲ್ಡ್ ಮೋರಾಸ್ , ರಾಜೇಶ್ ಶೆಟ್ಟಿ ಕೊಲೆರೊಟ್ಟೋ, ಸೀತಾರಾಮ ಶೆಟ್ಟಿ ಅಂಗರಕುಮೇರು, ಜೋಕಿಂ ಪಿಂಟೋ, ರಾಮಕ್ರಷ್ಣ ನಾಯಕ್ ಕಿನ್ನಾಜೆ, ನವೀನ್ ಪೂಜಾರಿ ಕರ್ಪೆ, ಪಿಡಿಒ ಗಣೇಶ್ ಶೆಟ್ಟಿ, ಉದ್ಯಮಿ‌ಗಳಾದ ಹೇಮಚಂದ್ರ ಗೌಡ, ಪ್ರಶಾಂತ್ ಶೆಟ್ಟಿ ಬಾಕಿಯಾರ್ ಕೋಡಿ, ವರ್ಕಾಡಿ ವಲಯ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಯಶೋಧರ ಗೌಡ ಕಲ್ಪನೆ, ಕರ್ಪೆ ವಲಯ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ  ತಿಮ್ಮಯ್ಯ ಮತ್ತಿತರರು ಹಾಜರಿದ್ದರು.
ಜಾಹೀರಾತು
ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.