ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಬಂಟ್ವಾಳ:ಜಮ್ಮುವಿನ ಪುಲ್ವಾಮ ಜಿಲ್ಲೆಯಲ್ಲಿ ಗುರುವಾರ ಉಗ್ರರ ಬಾಂಬ್ದಾಳಿಗೆ ಪ್ರಾಣರ್ಪಣೆ ಮಾಡಿದ ಸಿಆರ್ಪಿಎಫ್ನ ವೀರ ಯೋಧರಿಗೆ ದೇಶವೇ ಕಂಬನಿ ಮಿಡಿಯುತ್ತಿದ್ದು ಶುಕ್ರವಾರ ರಾತ್ರಿ ಬಂಟ್ವಾಳದ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಸದಸ್ಯರು ದಡ್ಡಲಕಾಡು ಶಾಲಾ ಮೈದಾನದಲ್ಲಿ ಹಣತೆ ಬೆಳಗಿ ಶ್ರದ್ದಾಂಜಲಿ ಸಲ್ಲಿಸಿದರು.
ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್ ಅಂಚನ್ ನೇತೃತ್ವದಲ್ಲಿ ಶಾಲಾ ಮೈದಾನದಲ್ಲಿ ಜಮಾಯಿಸಿದ ಕ್ಲಬ್‌ನ ಸದಸ್ಯರು ಮಾನವ ಸರಪಳಿ ನಡೆಸಿ ಭಾರತೀಯರಾದ ನಾವೆಲ್ಲರೂ ಯೋಧರ ಜೊತೆಗಿದ್ದೇವೆ ಎನ್ನುವ ಸಂದೇಶ ಸಾರಿದರು. ಬಳಿಕ ಹಣತೆಯನ್ನು ಹಚ್ಚಿ ಹುತಾತ್ಮ ವೀರ ಯೋಧರಿಗೆ ಭಾವಪೂರ್ಣ ಶ್ರದ್ದಾಂಜಲಿಯನ್ನು ಅರ್ಪಿಸಿದರು. ಕ್ಲಬ್ ಸದಸ್ಯರಾದ ಪುರುಷೋತ್ತಮ ಅಂಚನ್, ರಾಮಚಂದ್ರ ಪೂಜಾರಿ ಕರೆಂಕಿ, ನವೀನ್ ಸೇಸಗುರಿ ಮತ್ತಿತರ ಪ್ರಮುಖರು ಹಾಜರಿದ್ದರು.