ಅವರು ಶುಕ್ರವಾರ ಒಡಿಯೂರು ಆತ್ರೇಯ ಮಂಟಪದಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ವತಿಯಿಂದ ನಡೆದ ಶ್ರೀ ಒಡಿಯೂರು ರಥೋತ್ಸವದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ, ಸಹಾಯಕ ಹಸ್ತ ವಿತರಿಸಿ ಆಶೀರ್ವಚನ ನೀಡಿದರು.
ಜೀವನ ಎಂಬ ರಥ ಸಾಗಲು ಧರ್ಮ ಪಥದ ಅಗತ್ಯವಿದೆ. ಬದುಕಿನ ಯಾತ್ರೆ ಪರಮಪದ ಸೇರುವ ರೀತಿಯಲ್ಲಿ ಸಾಗಬೇಕು.
ವಾಸ್ತವದೊಂದಿಗೆ ಬದುಕಿದಾಗ ನಿಜಾರ್ಥದಲ್ಲಿ ಬದುಕಲು ಸಾಧ್ಯ. ಕಷ್ಟಗಳನ್ನು, ಸಮಸ್ಯೆಗಳನ್ನು ಮೆಟ್ಟಿಲುಗಳ ಹಾಗೆ ಬಳಸಿ ಮುನ್ನಡೆಯಬೇಕು. ದೇಹ ಎನ್ನುವ ರಥವನ್ನು ಮನಸ್ಸೆಂಬ ಹಗ್ಗದಿಂದ ಕಟ್ಟಿ ಬುದ್ಧಿ ಎಂಬ ಸಾರಥಿಯ ಕೈಗೆ ನೀಡಿದಾಗ ಸಲೀಸಾಗಿರುತ್ತದೆ ಎಂದು ಅವರು ನುಡಿದರು.
ಸಾಧ್ವಿ ಮಾತಾನಂದಮಯೀ , ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ವಿಶಾಖಪಟ್ಟಣ ಆದಾಯ ತೆರಿಗೆ ಇಲಾಖೆ ಕಮಿಷನರ್ ಟಿ. ಎಸ್. ಎನ್. ಮೂರ್ತಿ, ಮೈಸೂರು ಪೋಲಿಸ್ ತರಬೇತಿ ಪ್ರಾಂಶುಪಾಲ ಧರಣೀದೇವಿ ಮಾಲಗತ್ತಿ, ಉದ್ಯಮಿ ಜಗನ್ನಾಥ ಶೆಟ್ಟಿ, ಮುಂಬೈ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಅಧ್ಯಕ್ಷ ಹರೀಶ್ ಶೆಟ್ಟಿ ಐಕಳ, ಆರ್ ಟಿ ಓ ಅಧಿಕಾರಿ ಅಜಿತ್ ಕುಮಾರ್ ಪಂದಳಂ, ಗುರುದೇವ ಸೇವಾಬಳಗದ ವಾಮಯ್ಯ ಬಿ. ಶೆಟ್ಟಿ, ಎ. ಅಶೋಕ್ ಕುಮಾರ್, ಎ. ಸುರೇಶ್ ರೈ, ಕೃಷ್ಣ ಎಲ್. ಶೆಟ್ಟಿ, ಜಯಂತ್ ಜೆ. ಕೋಟ್ಯಾನ್, ಸರ್ವಾಣಿ ಪಿ. ಶೆಟ್ಟಿ, ರೇವತಿ ಡಿ. ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ನಿತ್ಯಶ್ರೀ ರೈ ಪ್ರಾರ್ಥಿಸಿದರು. ಯಶವಂತ ವಿಟ್ಲ ಸ್ವಾಗತಿಸಿ ಪ್ರಸ್ತಾವನೆಗೈದರು. ಸದಾಶಿವ ಅಳಿಕೆ ಸಹಾಯಹಸ್ತ ಫಲಾನುಭವಿಗಳ ಪಟ್ಟಿ ಓದಿದರು. ಮಾತೇಶ್ ಭಂಡಾರಿ ವಂದಿಸಿದರು. ಪ್ರಕಾಶ್ ಕೆ. ಶೆಟ್ಟಿ ಪೇಟೆಮನೆ ಕಾರ್ಯಕ್ರಮ ನಿರೂಪಿಸಿದರು.