ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಕಲ್ಲಡ್ಕ: ಕಾಶ್ಮೀರದ ಪುಲ್ವಾಮದಲ್ಲಿ ಭಾರತೀಯ ಸೈನಿಕರ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸೈನಿಕರ ಹತ್ಯೆಯನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಕಲ್ಲಡ್ಕ ವಲಯ ವತಿಯಿಂದ ವೀರ ಯೋಧರಿಗೆ ಕಲ್ಲಡ್ಕ ಶ್ರೀರಾಮ ಮಂದಿರದ ರಾಜ ಗೋಪುರದ ಮುಂದುಗಡೆ ದೀಪ ಪ್ರಜ್ವಲಿಸಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.
ನುಡಿನಮನ ಗಳನ್ನು ಸಲ್ಲಿಸಿದ ಆರೆಸ್ಸೆಸ್ ಮುಖಂಡ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಮಾತನಾಡಿ ನಮಗೆಲ್ಲ ಸವಾಲಿನ ದಿನ ಬಂದಿದೆ ಮನುಷ್ಯ ಬದುಕಲು ಅಸಾಧ್ಯವಾದ ಜಾಗದಲ್ಲಿ ದೇವ ಸ್ವರೂಪಿ ಗಳಾದ ಸೈನಿಕರನ್ನು ರಾಕ್ಷಸರು ಮೋಸದಲ್ಲಿ ಕೊಂದರು 1947 ರಲ್ಲಿ ದೇಶ ವಿಭಜನೆಯ ಘಟನೆಯಿಂದಾಗಿ ನಾವು ಇಂದು ಈ ಪರಿಸ್ಥಿತಿಯನ್ನು ಅನುಭವಿಸುತ್ತಿದ್ದೇವೆ ಈ ದೇಶವನ್ನು ನಾಶ ಮಾಡಬೇಕೆಂದು ಪ್ರಯತ್ನ ಹಾಗೂ ದೇಶದ ವ್ಯವಸ್ಥೆಯನ್ನು ನಾಶ ಮಾಡಬೇಕು ಎಂಬ ಪ್ರಯತ್ನ ನಡೆಯುತ್ತಿದೆ. ಎಲ್ಲಿಯವರೆಗೂ ಪಾಕಿಸ್ತಾನ ಇರುತ್ತದೆ ಅಲ್ಲಿಯವರೆಗೆ ಇಂತಹ ಸಮಸ್ಯೆಗಳು ನಡೆಯುತ್ತಲೇ ಇರುತ್ತದೆ ಸೈನಿಕರಿಗೆ ಶಕ್ತಿ ಕೊಡುವ ವಿಷಯ ಇಡೀ ಹಳ್ಳಿ ಹಳ್ಳಿಗಳಲ್ಲಿ ನಡೆಯಬೇಕು ನಾವು ನಿತ್ಯ ನಿರಂತರ ಜಾಗೃತರಾಗಿರಬೇಕು ಮತ್ತೆ ಅಖಂಡ ಭಾರತ ಸಂಕಲ್ಪ ಈಡೇರುವ ಸಮಯ ಬಂದಿದೆ ಎಂದರು.
ಮಾಜಿ ಶಾಸಕ ಕೆ. ಪದ್ಮನಾಭ ಕೊಟ್ಟಾರಿ, ಪ್ರಮುಖರಾದ ಚೆನ್ನಪ್ಪ ಕೋಟ್ಯಾನ್, ದಿನೇಶ್ ಅಮ್ಟೂರು, ಕ ಕೃಷ್ಣಪ್ಪ, ಸುಜಿತ್ ಕೊಟ್ಟಾರಿ, ಯತಿನ್ ಕುಮಾರ್ ಎಳ್ತಿಮಾರ್ ಮತ್ತಿತರರು ಉಪಸ್ಥಿತರಿದ್ದರು.