ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಬಂಟ್ವಾಳ: ಗಡಿಗುಡಿಗಳ ರಕ್ಷಣೆಗಾಗಿ ಪ್ರಾಣಾರ್ಪಣೆ ಮಾಡಿದ ವೀರ ಸೈನಿಕರಿಗಾಗಿ ಶನಿವಾರ ಪೂರ್ತಿ ಸ್ವಯಂಪ್ರೇರಿತರಾಗಿ ತಮ್ಮ ಕಾರ್ಯದ ಜೊತೆಗೆ ಉಪವಾಸ ಮಾಡಿ ಸಂಜೆ 6 ಗಂಟೆ ಗೆ ಬೀಸಿರೋಡು ಬಿಜೆಪಿ ಕಚೇರಿ ಯಲ್ಲಿ ನುಡಿನಮನ ಸಲ್ಲಿಸಲು ಬಿಜೆಪಿ ಯುವ ಮೋರ್ಚಾ ಕರೆ ನೀಡಿದೆ. ಭಯೋತ್ಪಾದಕ ಕೃತ್ಯವನ್ನು ಸಂಭ್ರಮಿಸುವ ವಿಕೃತ ಮನಸುಗಳಿಗೆ ಕಟ್ಟೆಚ್ಚರ ನೀಡುವ ಸಮಯವಿದು.ಸಾಮಾಜಿಕ ಜಾಲತಾಣ ಹೋರಾಟಗಾರರಾಗದಿರೋಣ. ನಮ್ಮ ಸುರಕ್ಷತೆಯ ನಾಳೆಗಳಿಗಾಗಿ ಬಲಿದಾನವಾದ ನಮ್ಮ ಸೈನಿಕರಿಗಾಗಿ ಒಂದರ್ದ ಗಂಟೆ ಸಮಯ ನೀಡದಿರುವಷ್ಟು ಕೂಡ ಕಟುಕರಾಗುವುದು ಬೇಡ ಎಂದು ಯುವ ಮೋರ್ಚಾ ಅಧ್ಯಕ್ಷ ವಜ್ರನಾಥ ಕಲ್ಲಡ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.