Categories: ವಿಟ್ಲ

ಕೇಪುವಿನಲ್ಲಿ ಕಬಡ್ಡಿ ಪಂದ್ಯಾಟ

ವಿಟ್ಲ: ಶ್ರೀ ದುರ್ಗಾ ಫ್ರೆಂಡ್ಸ್ ಕೇಪು, ದಕ್ಷಿಣ ಕನ್ನಡ ಅಮೆಚೂರ್ ಕಬಡ್ಡಿ ಫೆಡರೇಶನ್ ಬಂಟ್ವಾಳ ತಾಲೂಕು ಮತ್ತು ತುಳುನಾಡ ಪೈಟರ್ಸ್  ಕೇಪು  ಸಂಯುಕ್ತ ಆಶ್ರಯದಲ್ಲಿ 58 ಕೆ.ಜಿ. ವಿಭಾಗದ ಕಬಡ್ಡಿ ಪಂದ್ಯಾಟ  ಕೇಪು ದಕ್ಷಿಣ ಕನ್ನಡ ಜಿಲ್ಲಾ ಹಿರಿಯ ಪ್ರಾಥಮಿಕ ಶಾಲಾ ಕ್ರೀಡಾಂಗಣದಲ್ಲಿ ನಡೆಯಿತು. ಎಸ್ಡಿಎಂ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ರಾಜೇಂದ್ರ ಶೆಟ್ಟಿ ಉದ್ಘಾಟಿಸಿದರು. 

ಜಾಹೀರಾತು

ನಿವೃತ್ತ ಪ್ರಾಧ್ಯಾಪಕ ಡಾ. ಶ್ರೀ ಹರಿ ಮಾತನಾಡಿ ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ಅಶೋಕ್ ಎ. ಇರಾಮೂಲೆ ವಹಿಸಿದ್ದರು. ಈ ಸಂದರ್ಭ, ಸಾಧಕರನ್ನು ಸನ್ಮಾನಿಸಲಾಯಿತು.

ನಿವೃತ್ತ ಯೋಧ ನಾರಾಯಣ ಪುರುಷ,  ಕೇಪು ದೇವಸ್ಥಾನ ಪರಿಚಾರಕ  ಬೀಜತ್ತಡ್ಕ ನಾರಾಯಣ ಪುರುಷ , ಕಬಡ್ಡಿ ಆಟಗಾರ್ತಿ  ಸುಶ್ಮಿತಾ, ಭೂಮಿಕಾ ಅವರನ್ನು ಸನ್ಮಾನಿಸಲಾಯಿತು. ಮಂಗಳೂರು ಪೊಲೀಸ್ ಮಹಾನಿರೀಕ್ಷಕರ ಕಚೇರಿ ಪ್ರಥಮ ದರ್ಜೆ  ಸಹಾಯಕ ಬಿ ಎಸ್ ಬಾಲಕೃಷ್ಣ , ರವೀಶ್ ಕೆ.ಎನ್ ಖಂಡಿಗ, ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ತಾರಾನಾಥ ಆಳ್ವ ಕುಕ್ಕೆಬೆಟ್ಟು, ವಿಷುಕುಮಾರ್ ಎನ್,  ಜಿನಚಂದ್ರ ಜೈನ್ , ಖಾಸಗಿ ಚಾನೆಲ್‌ ಕ್ಯಾಮಾರಮ್ಯಾನ್ ಕಿರಣ್ ಕುಮಾರ್, ಕುಶಾಲಪ್ಪ ಗೌಡ ದೂಜಮೂಲೆ, ಸುರೇಶ್ ಶೆಟ್ಟಿ ಪಡಿಬಾಗಿಲು, ಹಾಗೂ ಕೇಪು ತುಳುನಾಡ ಫೈಟರ್ಸ್ ನ  ಅಧ್ಯಕ್ಷ ಸುಧಾಕರ್  ಪೂಜಾರಿ ಬಡೆಕೋಡಿ  ಉಪಸ್ಥಿತರಿದ್ದರು.

ಜಾಹೀರಾತು

ಕಬಡ್ಡಿ ಪಂದ್ಯಾಟದಲ್ಲಿ  ಪಥಮ ಬಹುಮಾನ ವನ್ನು ಪಿಲಿಬೈಲು ಕೇಪು, ದ್ವಿತೀಯ – ತುಳುನಾಡ ಪೈಟರ್ಸ  ಕೇಪು, ತೃತೀಯ ಹಾಗೂ ಚತುರ್ಥ ವನ್ನು ಚುಕ್ಕಿ ಫ್ರೆಂಡ್ಸ್ ಪೊಳಲಿ ಹಾಗೂ ಶಿವಂ ಫ್ರೆಂಡ್ಸ್ ಖಂಡಿಗ ಪಡೆಯಿತು. ಪಂದ್ಯಾಟದಲ್ಲಿ ಉತ್ತಮ ದಾಳಿಗಾರನಾಗಿ ಸಚಿನ್ ,ಉತ್ತಮ ಹಿಡಿತಗಾರನಾಗಿ ಕಲೀಲ್ ಹಾಗೂ ಉತ್ತಮ ಸವ್ಯಸಾಚಿಯಾಗಿ  ಚೇತನ್ ಇವರು ಬಹುಮಾನ ಪಡೆದರು. ಸಮಾರೋಪ ಸಮಾರಂಭದ ಬಹುಮಾನ ವಿತರಣೆ ಯನ್ನು ದೇವದಾಸ  ರೈ ಕೇಪುಗುತ್ತು, ದಯಾನಂದ ಬೀಜತಡ್ಕ,  ಶೇಖರ್ ಕೇಪು, ನಿರಂಜನ  ಕಲ್ಲಪಾಪು ,ರವಿ ಗೌಡ ಕೊರತಿಗದ್ದೆ.,ಬಾಲಕೃಷ್ಣ ಪೆಲತ್ತಡಿ.,ಬಿ ಎಸ್ ಬಾಲಕೃಷ್ಣ ಮಂಗಳೂರು, ಸುರೇಶ್ ಶೆಟ್ಟಿ ದೈಹಿಕ ಶಿಕ್ಷಕರು  ಹಾಗು ಸುಧಾಕರ ಪೂಜಾರಿ ಬಡೆಕೋಡಿ ನಡೆಸಿದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ