ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಬಂಟ್ವಾಳ ಇದರ ವತಿಯಿಂದ ತಾಲೂಕಿನ ಮಾಣಿಯಲ್ಲಿ ನಬಾರ್ಡ್ ಯೋಜನೆಯಡಿ ೫೦ ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಸಂತೆ ಮಾರುಕಟ್ಟೆಗೆ ಶನಿವಾರ ಶಿಲಾನ್ಯಾಸ ನೆರವೇರಿತು.
ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಶಿಲಾನ್ಯಾಸ ನೆರವೇರಿಸಿ ಮಾತನಾಡಿ, ಮಾಣಿಯ ಸಂತೆ ಮಾರುಕಟ್ಟೆಯ ಶುಚಿತ್ವಕ್ಕೆ ಪೂರಕವಾಗಿ ಶೌಚಾಲಯ ನಿರ್ಮಾಣಕ್ಕೆ ಶಾಸಕನ ನೆಲೆಯಲ್ಲಿ ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು.
ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ ಅಭಿವೃದ್ಧಿ ಹೆಸರಿನಲ್ಲಿ ನಾವೆಂದು ಹಿಂದೆ ಬಿದ್ದಿಲ್ಲ ಎಂದು ತಿಳಿಸಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಪದ್ಮನಾಭ ರೈ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಪಿಎಂಸಿ ಯಾರ್ಡ್ ನಿರ್ಮಾಣದ ಜೊತೆಗೆ ಮಾಣಿ ಹಾಗೂ ಮಣಿನಾಲ್ಕೂರು ಸಂತೆ ಮಾರುಕಟ್ಟೆ ನಿರ್ಮಾಣ ದ ಮೂಲಕ ಕೃಷಿಕರಿಗೆ ಹೆಚ್ಚು ಪ್ರಯೋಜನವಾಗಲಿದೆ ಎಂದರು.
ಎಪಿಎಂಸಿ ಉಪಾಧ್ಯಕ್ಷ ಚಂದ್ರಶೇಖರ ಪೂಜಾರಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳಾ ಮಾಧವ ಮಾವೆ, ಎಪಿಎಂಸಿ ಸದಸ್ಯರಾದ ನೇಮಿರಾಜ ರೈ, ಚಂದ್ರಶೇಖರ ರೈ, ದಿವಾಕರ ಪಂಬದಬೆಟ್ಟು, ಬಾಲಕೃಷ್ಣ ಕಲ್ಲಡ್ಕ, ಮಾಣಿ ಗ್ರಾ.ಪಂ.ಅಧ್ಯಕ್ಷೆ ಮಮತಾ ಶೆಟ್ಟಿ, ಸಂಪಾವತಿ, ತಾ.ಪಂ.ಸದಸ್ಯ ಮಂಜುಳಾ, ಎಪಿಎಂಸಿ ಕಾರ್ಯದರ್ಶಿ ಭಾರತಿ, ಬಂಟ್ವಾಳ ತಾಲೂಕು ಕೃಷಿಕ ಸಮಾಜದ ಸದಸ್ಯ ರಮಾನಾಥ ವಿಟ್ಲ ಉಪಸ್ಥಿತರಿದ್ದರು. ಕೊಡಾಜೆ ಬಾಲಕೃಷ್ಣ ಆಳ್ವ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.