ಕಲ್ಲಡ್ಕ

ಭಾರತದ ಸಂಸ್ಕೃತಿ, ಪರಂಪರೆ ವಿಶ್ವಮಾನ್ಯ: ಶತಾವಧಾನಿ ಆರ್. ಗಣೇಶ್

ಸುದ್ದಿ, ಲೇಖನಗಳಿಗೆ www.bantwalnews.comಸಂಪಾದಕ: ಹರೀಶ ಮಾಂಬಾಡಿ

ಕಲ್ಲಡ್ಕ : ಭಾರತೀಯ ಸಂಸ್ಕೃತಿ, ಪರಂಪರೆ ವಿಶ್ವಮಾನ್ಯವಾಗಿದೆ. ನಾವು ಅದನ್ನು ಅರಿತು ಬೆಳೆಸಬೇಕು ಎಂದು ಶತಾವಧಾನಿ ಆರ್. ಗಣೇಶ್ ಹೇಳಿದರು.

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಪದವಿ ಕಾಲೇಜಿನಲ್ಲಿ ನಡೆದ ವಿಶ್ವವ್ಯಾಪಿ ಭಾರತ ಎಂಬ ವಲಯ ಮಟ್ಟದ ವಿಚಾರಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ, ನಮ್ಮ ಸಂಸ್ಕೃತಿಯ ವಿಶ್ವವ್ಯಾಪಕತೆಯ ಬಗೆಗೆ ನಮಗೆ ಅರಿವಿಲ್ಲದಿರುವುದು ದುರಂತ. ಉದ್ಧೇಶಪೂರ್ವಕವಾಗಿ ಪಠ್ಯಪುಸ್ತಕಗಳಿಂದ ಇದನ್ನು ಕೈಬಿಡಲಾಗಿದೆ. ಇಂತಹ ದುರುದ್ಧೇಶಪೂರಿತ ವ್ಯಕ್ತಿಗಳೇ ಶಿಕ್ಷಣ ಇಲಾಖೆಯನ್ನು ನಿರ್ವಹಿಸಿತ್ತಿರುವುದು ಖೇದಕರ. ಆದರೆ ಯಾವುದೋ ಒಂದು ಹಂತದಲ್ಲಿ ನೈಜತೆ ಅರಿವಿಗೆ ಬರಲೇಬೇಕಲ್ಲವೇ ಅದಕ್ಕಾಗಿ ಈ ವಿಚಾರ ಸಂಕಿರಣ ಎಂದರು.

ದಿನಪೂರ್ತಿ ನಡೆದ ವಿಚಾರ ಸಂಕಿರಣದ 2ನೇಯ ಅವಧಿಯಲ್ಲಿ ಮಹಾರಾಷ್ಟ್ರದ ಔರಂಗಬಾದ್ ವಿಶ್ವವಿದ್ಯಾನಿಲಯದ ಡಾ| ಶರದ್ ಹೆಬ್ಬಾಳ್ಕರ್ ಭಾರತೀಯ ಸಂಸ್ಕೃತಿಯ ವಿಶ್ವಸಂಚಾರ ಎಂಬ ವಿಷಯ ಮಂಡಿಸಿದರು.

ಪ್ರಜ್ಞಾಪ್ರವಾಹ ಸಂಯೋಜಕ ರಘನಂದನ್, ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ, ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ ಹಾಗೂ ಪದವಿ ಪ್ರಾಚಾರ್ಯ ಕೃಷ್ಣಪ್ರಸಾದ್ ಕಾಯರ್ ಕಟ್ಟೆ ಉಪಸ್ಥಿತರಿದ್ದರು.

ವಿಚಾರ ಸಂಕಿರಣದಲ್ಲಿ ಭಾರತೀಯ ಸಂಸ್ಕೃತಿಯ ವಿಶ್ವಸಂಚಾರದ ವಿವಿಧ ಆಯಾಮಗಳನ್ನು ಬಿಂಬಿಸುವ ನೂರಾರು ಪ್ರದರ್ಶಿನಿಗಳು, ಹತ್ತಾರು ಸ್ತಬ್ಧಚಿತ್ರಗಳು ನೋಡುಗರ ಗಮನ ಸೆಳೆದವು. ಮಂಗಳೂರು ವಿಶ್ವವಿದ್ಯಾನಿಲಯದ ೩೫ ಕಾಲೇಜುಗಳಿಂದ ೧೫೨ ವಿದ್ಯಾರ್ಥಿಗಳು, ೪೬ ಉಪನ್ಯಾಸಕರು, ತುಮಕೂರು, ಬೆಂಗಳೂರು, ರಾಣಿಚೆನ್ನಮ್ಮ, ಮೈಸೂರು, ಶಿವಮೊಗ್ಗ, ಗುಲ್ಬರ್ಗ, ಕರ್ನಾಟಕ ವಿಶ್ವವಿದ್ಯಾನಿಲಯ ಈ ರೀತಿ ಇತರೇ ೧೩ ವಿಶ್ವವಿದ್ಯಾನಿಲಯಗಳ ೫೩ ವಿದ್ಯಾರ್ಥಿಗಳು, ೧೪ ಉಪನ್ಯಾಸಕರು ಅಲ್ಲದೇ ೩೯ ಪ್ರತಿನಿಗಳು ಹಾಗೂ ಶ್ರೀರಾಮ ವಿದ್ಯಾಸಂಸ್ಥೆಯ ೧೩೫ ಉಪನ್ಯಾಸಕರು, ೩೬೦ ವಿದ್ಯಾರ್ಥಿಗಳನ್ನೊಳಗೊಂಡು ಒಟ್ಟು ೮೪೭ ಮಂದಿ ಭಾಗವಹಿಸಿದ್ದಾರೆ.

ಪದವಿ ಪ್ರಾಚಾರ್ಯ ಕೃಷ್ಣಪ್ರಸಾದ ಕಾಯರ್‌ಕಟ್ಟೆ ಸ್ವಾಗತಿಸಿ, ಸಂಸ್ಥೆಯ ಸಂಚಾಲಕ ವಸಂತ ಮಾದವ ವಂದಿಸಿ, ಪದವಿ ವಿಭಾಗದ ಕನ್ನಡ ಉಪನ್ಯಾಸಕ ಯತಿರಾಜ್ ಕಾರ್ಯಕ್ರಮ ನಿರೂಪಿಸಿದರು.

 

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ