ಬಂಟ್ವಾಳ

ಪೊಳಲಿ ಬ್ರಹ್ಮಕಲಶ: ಮುತ್ತೂರು, ಕೊಳವೂರು, ಮೊಗರು ಗ್ರಾಮದ ಭಕ್ತರ ಸಭೆ

ಸುದ್ದಿ, ಲೇಖನಗಳಿಗೆ www.bantwalnews.comಸಂಪಾದಕ: ಹರೀಶ ಮಾಂಬಾಡಿ

ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಬ್ರಹ್ಮಕಲಶದ ಅಂಗವಾಗಿ ಮುತ್ತೂರು, ಕೊಳವೂರು, ಮೊಗರು  ಗ್ರಾಮದ ಭಕ್ತಾಭಿಮಾನಿಗಳು ಮಾ.4ರ ಮಧ್ಯಾಹ್ನ ತಮ್ಮ ಗ್ರಾಮದಿಂದ ಶ್ರೀ ಕ್ಷೇತ್ರ ಪೊಳಲಿಗೆ ಸಲ್ಲಿಸಲ್ಪಡುವ ಹಸಿರು ಹೊರ ಕಾಣಿಕೆಯ ಬಗ್ಗೆ ಭಕ್ತಭಿಮಾನಿಗಳ ಸಭೆ ನಡೆಯಿತು.

ಜಾಹೀರಾತು

 

ಪೊಳಲಿ ದೇವಸ್ಥಾನದ ಬ್ರಹ್ಮಕಲಸದ ಸಮಿತಿಯ ಸಂಘಟನಾ ಕಾರ್ಯದರ್ಶಿ ಮುತ್ತೂರು ಕೃಷ್ಣರಾಜ ಮಾರ್ಲ ಅಧ್ಯಕ್ಷತೆಯಲ್ಲಿ ಮೊಗರು ಕುಕ್ಕಟ್ಟೆಯ ವಿದ್ಯಾ ಭಾರತಿ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಕ್ತಾಭಿಮಾನಿಗಳು ಭಾಗವಹಿಸಿದರು.

ಪೊಳಲಿ ಬ್ರಹ್ಮಕಲಶದಲ್ಲಿ ದೇವರ ಸೇವೆ ಮಾಡುವಂತಹ ಭಾಗ್ಯ ಭಕ್ತಭಿಮಾನಿಗಳಾದ ನಮಗೆಲ್ಲ ದೊರಕಿರುವುದು ಸಂತೋಷದ ವಿಷಯ ಗ್ರಾಮದ ನಾವೆಲ್ಲರೂ ಒಗ್ಗಟ್ಟಾಗಿ ದೇವರ ಈ ಪುಣ್ಯ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗೋಣ . ಗ್ರಾಮದ ಪ್ರತಿ ಮನೆಯಿಂದ ತಮ್ಮಿಂದಾದ ಹೊರೆ ಕಾಣಿಕೆಯನ್ನು ಶ್ರೀ ಕ್ಷೇತ್ರಕ್ಕೆ ಸಲ್ಲಿಸೋಣ ಮತ್ತು ತಮ್ಮ ಗ್ರಾಮದಿಂದ ನಡೆಯುವ ಹೊರೆ ಕಾಣಿಕೆಯ ಕಾರ್ಯಕ್ರಮವು ನಾವೆಲ್ಲರೂ ಒಗ್ಗಟ್ಟಾಗಿ ಯಶಸ್ವಿಗೊಳಿಸೋಣ. ಯಶಸ್ಸಿನ ದೃಷ್ಟಿಯಿಂದ ನಮ್ಮ ಗ್ರಾಮದ ಯುವಕರು ಸ್ವಯಂ ಸೇವಕರಾಗಿ ಕಾರ್ಯನಿರ್ವಹಣೆ ಮಾಡಬೇಕೆಂದು ಸಭೆಯಲ್ಲಿ ಕೃಷ್ಣರಾಜ ಮಾರ್ಲರು ವಿನಂತಿಸಿದರು. ಹೊರೆ ಕಾಣಿಕೆಯ ಬಗ್ಗೆ ಸಭೆಯಲ್ಲಿ ಭಕ್ತಾಭಿಮಾನಿಗಳ ಸಲಹೆ ಸೂಚನೆಯನ್ನು  ಪಡೆಯಲಾಯಿತು. ಈ ಸಂದರ್ಭದಲ್ಲಿ ಕೊಳವೂರು ಸದಾನಂದ ಶೆಟ್ಟಿ, ಮೊಗರು ವಿಧ್ಯಾಚರಣ ಭಂಡಾರಿ, ನಾರಳ ಚಂದ್ರಹಾಶ್ ಶೆಟ್ಟಿ, ಕಿಲೆಂಜಾರು ತಿಮ್ಮಪ್ಪ ಶೆಟ್ಟಿ ಅಗರಿ, ತಾಲೂಕು ಪಂಚಾಯತ್ ಸದಸ್ಯರಾದ ನಾಗೇಶ್ ಶೆಟ್ಟಿ ಹಾಗೂ ಮುತ್ತೂರು ಕೊಳವೂರು ಕಿಲೆಂಜಾರು ಮೊಗರು  ಗ್ರಾಮದ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು. ಶಂಕರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts

ಮಂಗಳೂರು ಕಡಲ ತೀರ ʼಕಡಲ ಪವನ ಶಕ್ತಿ ಉತ್ಪಾದನಾ ವಲಯʼವಾಗಿ ಅಭಿವೃದ್ಧಿಪಡಿಸಲು ಕೇಂದ್ರಕ್ಕೆ ಮನವಿ

ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)

10 hours ago