ಜೇಸಿಐ ಭಾರತ ನಿರ್ದೇಶನದಂತೆ ರಾಷ್ಟ್ರೀಯ ಭಾವೈಕ್ಯತಾ ದಿನಾಚರಣೆಯ ಪ್ರಯುಕ್ತ ಜೇಸಿಐ ಜೋಡುಮಾರ್ಗ, ಜೇಸಿರೆಟ್ ವಿಭಾಗ ಹಾಗೂ ಯುವ ಜೇಸಿ ವಿಭಾಗದ ಜಂಟಿ ಸಹಯೋಗದಲ್ಲಿ ಜೋಡುಮಾರ್ಗದ ಸುತ್ತಮುತ್ತಲಿನ ವಿವಿಧ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ, ಪ್ರಾಧ್ಯಾಪಕರುಗಳು ಹಾಗು ಸಿಬ್ಬಂದಿಯವರುಗಳಿಗೆ ಫೆ.೨ ರಂದು ಭಾವೈಕ್ಯತಾ ದಿನಾಚರಣೆಯ ಪ್ರಯುಕ್ತ ದೇಶದ ಗೌರವವನ್ನು ಕಾಪಾಡುವ ಹಾಗೂ ನೈತಿಕವಾಗಿ ಉತ್ತಮ ತತ್ವಾಧಾರಿತ ಬದುಕು ಸಾಗಿಸುವ ವಿಚಾರಗಳನ್ನು ಈ ಸಂದರ್ಭ ಅಳವಡಿಸಿಕೊಳ್ಳಬೇಕು ಹಾಗು ದೇಶದ ಸಮಗ್ರತೆಯನ್ನು ಎತ್ತಿ ಹಿಡಿಯಬೇಕು ಎಂಬ ಉದ್ದೇಶದೊಂದಿಗೆ ಪ್ರಮಾಣ ವಚನವನ್ನು ಬೋಧಿಸಲಾಯಿತು.
ಬಂಟ್ವಾಳದ ಎಸ್.ವಿ.ಎಸ್. ಇಂಗ್ಲೀಪ್ ಮೀಡಿಯಂ ಸ್ಕೂಲ್, ವಿದ್ಯಾಗಿರಿ, ಎಸ್.ವಿ.ಎಸ್. ಇಂಗ್ಲೀಪ್ ಮೀಡಿಯಂ ಸ್ಕೂಲ್, ಬಂಟ್ವಾಳ, ಎಸ್.ವಿ.ಎಸ್. ಕಾಲೇಜು ಬಂಟ್ವಾಳ, ಬರಾಕಾ ಇಂಟರ್ ನ್ಯಾಷನಲ್ ಸ್ಕೂಲ್ ಅಡ್ಯಾರ್, ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆ ಶಂಭೂರು, ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮಂಚಿ ಕುಕ್ಕಾಜೆ, ಸರಕಾರಿ ಪದವಿ ಪೂರ್ವ ಕಾಲೇಜು ಬೆಂಜನಪದವು, ಸರಕಾರಿ ಪ್ರಾಥಮಿಕ ಶಾಲೆ ಸುರಿಬೈಲು ಕೊಲ್ನಾಡು, ಶ್ರೀ ರಾಮ ಹೈಸ್ಕೂಲ್, ಶ್ರೀ ರಾಮ ಪದವಿ ಪೂರ್ವ ಕಾಲೇಜು ಹಾಗೂ ಶ್ರೀ ರಾಮ ಪ್ರಥಮ ದರ್ಜೆ ಕಾಲೇಜು ಕಲ್ಲಡ್ಕ, ಶ್ರೀ ವಾಣಿ ವಿಜಯ ಹೈಸ್ಕೂಲು ಮಂಜೇಶ್ವರ, ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯ ವಳಚ್ಚಿಲ್, ಎಸ್‌ಡಿಎಂ ಕಾಲೇಜು ಉಜಿರೆ, ಸೈಂಟ್ ಅಲೋಸಿಯಸ್ ಕಾಲೇಜು ಮಂಗಳೂರು, ಸರಕಾರಿ ಪ್ರೌಢಶಾಲೆ ಮೋಂತಿಮಾರು, ಸರಕಾರಿ ಪ್ರೌಢ ಶಾಲೆ ಹಾಗೂ ಪದವಿಪೂರ್ವ ಕಾಲೇಜು ವಗ್ಗ, ಸರಕಾರಿ ಪ್ರೌಢಶಾಲೆ ಸಜೀಪ, ದೀಪಿಕಾ ಪ್ರೌಢಶಾಲೆ, ಮೊಡಂಕಾಪು, ಸರಕಾರಿ ಪ್ರೌಢ ಶಾಲೆ ಕೊಡಂಗೆ, ಪ್ರೆಸ್ಟೀಜ್ ಇಂಟರ್ ನ್ಯಾಷನಲ್ ಸ್ಕೂಲ್ ಅಡ್ಯಾರು ಈ ಎಲ್ಲಾ ಶಾಲೆಯ ವಿದ್ಯಾರ್ಥಿಗಳು, ಉಪನ್ಯಾಸಕರು, ಸಿಬ್ಬಂದಿಗಳಿ ಹೀಗೆ ಸುಮಾರು ೧೫,೦೦೦ ಕ್ಕೂ ಹೆಚ್ಚು ಮಂದಿಗಳಿಗೆ ಈ ದಿನ ಪ್ರತಿಜ್ಷಾ ವಿಧಿ ಬೋಧಿಸಲಾಯಿತು.
ಜೇಸಿಐ ಜೋಡುಮಾರ್ಗದ ಅಧ್ಯಕ್ಷ ಹರ್ಷರಾಜ್ ಸಿ, ಕಾರ್ಯದರ್ಶಿ ರವೀಂದ್ರ ಕುಕ್ಕಾಜೆ, ಉಪಾಧ್ಯಕ್ಷರುಗಳಾದ ಜಯರಾಜ್ ಎಸ್.ಬಂಗೇರ, ಧೀರಜ್ ಎಚ್, ಗಾಯತ್ರಿ ಲೋಕೇಶ್, ಹರಿಪ್ರಸಾದ್ ಕುಲಾಲ್, ಶನ್ಫತ್ ಷರೀಫ್, ಜೇಸಿರೆಟ್ ಅಧ್ಯಕ್ಷೆ ಜೇಸಿ ಅಮಿತಾ ಹರ್ಷರಾಜ್, ಜೇಜೇಸಿ ಅಧ್ಯಕ್ಷ ಜೇಜೇಸಿ ರೋನಿತ್, ನಿರ್ದೇಶಕರುಗಳಾದ ಸುಧಾಕರ ವೈ, ಸುಮನಾ ಎಸ್, ಆಶಿಕ್ ಕುಕ್ಕಾಜೆ, ಜೇಸಿ ಅಬ್ದುಲ್ ಸತ್ತಾರ್, ವೈಶಾಕ್, ಖಜಾಂಜಿಯಾದ ಹರಿಶ್ಷಂದ್ರ ಆಳ್ವ ಸದಸ್ಯರುಗಳಾದ ಬಾಲಚಂದ್ರ ಆಳ್ವ ಹಾಗೂ ಇನ್ನಿತರ ಪದಾಧಿಕಾರಿಗಳು ಮತ್ತು ಸದಸ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.