ಬಂಟ್ವಾಳ: ವೀರ ಯೋಧ ಸ್ವಾತಂತ್ರ್ಯ ಹೋರಾಟಗಾರ ಟಿಪ್ಪು ಸುಲ್ತಾನ್ ದೇಶಪ್ರೇಮ ಈ ನಾಡಿನ ಯುವಕರಿಗೆ ಪ್ರೇರಣೆಯಾಗಲಿ ಎಂದು ಮುಹಮ್ಮದ್ ಮುಸ್ಲಿಯಾರ್ ಪುತ್ತೂರು ಹೇಳಿದರು.
ಬಂಟ್ವಾಳ ತಾಲೂಕಿನ ಇರಾ ಗ್ರಾಮದ ಪರಪ್ಪುನ ಟಿಪ್ಪು ಸುಲ್ತಾನ್ ಯುವಜನ ಫಡೆರೇಶನ್ ಇರಾ ಪರಪ್ಪು (ರಿ) ಇದರ ೨೩ ನೇ ವಾರ್ಷಿಕೋತ್ಸವ ಪ್ರಯುಕ್ತ ಏಕದಿನ ಪ್ರಭಾಷಣ ಸಿಲ್ ಸಿಲಾ ಜಬ್ಬಾರ್ ಉಸ್ತಾದ್ ಮಿತ್ತಬೈಲು ವೇದಿಕೆಯಲ್ಲಿ ನಡೆಯುತು. ಅಧ್ಯಕ್ಷತೆಯನ್ನು ಪಿ.ಯಂ ಮುಹಮ್ಮದ್ ಮದನಿ (ಅಧ್ಯಕ್ಷರು ಜುಮಾ ಮಸೀದಿ ಪರಪ್ಪು) ವಹಿಸಿದರು ಸ್ವಾಗತ ಭಾಷಣ ಅಬ್ದುಲ್ ಅಝೀಝ್ ಸಖಾಫಿ ಪರಪ್ಪು ಹಾಗೂ ಉದ್ಘಾಟನೆಯನ್ನು ಅಬ್ದುಲ್ ರಝಾಕ್ ಸಖಾಫಿ ಸರಳಿಕಟ್ಟೆ ನಿರ್ವಹಿಸಿದರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಇರಾ ಗ್ರಾಪಂ ಅಧ್ಯಕ್ಷರಾದ ರಝಾಕ್ ಕುಕ್ಕಾಜೆ ,ಮೊಹೀದಿನ್ ಕುಂಞ ಸದಸ್ಯರು ಇರಾ ಗ್ರಾ.ಪಂ ,ಎಮ್ ಬಿ ಉಮ್ಮರ್, ಸದಸ್ಯರು ಇರಾ ಗ್ರಾಮ ಪಂ,ಮತ್ತು ಅಬ್ದುಲ್ ಹಮೀದ್ ಸಖಾಫಿ, ಅಬ್ದುರ್ರಹ್ಮಾನ್ ಲತೀಫಿ, ಮುಹಮ್ಮದ್ ಸಖಾಫಿ, ಅಬ್ದುರ್ರಹ್ಮಾನ್ ಹನೀಫಿ ಮೊದಲಾದವರು ಇದ್ದರು.