ಬಂಟ್ವಾಳ

ಮೆಸ್ಕಾಂ ನಿವೃತ್ತ ಲೆಕ್ಕಾಧಿಕಾರಿಗಳಿಗೆ ಬೀಳ್ಕೊಡುಗೆ ಸಮಾರಂಭ

ಸುದ್ದಿ, ಲೇಖನಗಳಿಗೆ www.bantwalnews.comಸಂಪಾದಕ: ಹರೀಶ ಮಾಂಬಾಡಿ

ಬಂಟ್ವಾಳ: ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿಯ ಬಂಟ್ವಾಳ ವಿಭಾಗದ ಲೆಕ್ಕಾಧಿಕಾರಿಗಳಾದ ಮಂಜ ನಾಯ್ಕ ಎನ್., ಮತ್ತು ಸಾಯಿರಾಮ್ ಪವಾರ್ ಬೀಳ್ಕೊಡುಗೆ ಸಮಾರಂಭ ಬಂಟ್ವಾಳ ವಿಭಾಗೀಯ ಕಚೇರಿ ಆವರಣದಲ್ಲಿ ನಡೆಯಿತು.

ಜಾಹೀರಾತು

ಮಂಗಳೂರು ವೃತ್ತ ಅಧೀಕ್ಷಕ ಇಂಜಿನಿಯರ್ ಮಂಜಪ್ಪ ಅವರು ಇಬ್ಬರನ್ನೂ ಸನ್ಮಾನಿಸಿದರು. ತಾನು ನಿರ್ವಹಿಸುವ ಕೆಲಸ ಕಾರ್ಯಗಳಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಯಾರೇ ಪ್ರಶ್ನಿಸಿದರೂ ಅದಕ್ಕೆ ಸರಿಯಾದ ಉತ್ತರಗಳು ದೊರೆಯುವಂತಿರಬೇಕು , ಅಂತಹ ತಾರ್ಕಿಕ ವಿಚಾರಗಳಿರುವ ವ್ಯಕ್ತಿಯ ನಿರ್ಧಾರಗಳು ಇನ್ನೊಬ್ಬರಿಗೆ ಆದರ್ಶವಾಗಿರುತ್ತದೆ. ಇದಕ್ಕೆ ಸಾಕ್ಷಿ ನಿವೃತ್ತಿ ಹೊಂದುತ್ತಿರುವ ಮಂಜ ನಾಯ್ಕ ಮತ್ತು ಸಾಯಿರಾಮ್ ಪವಾರ್ ಎಂದರು.

ಕ.ವಿ.ಪ್ರನಿ.ನಿ ನೌಕರರ ಸಂಘ ಕೇಂದ್ರ ಸಮಿತಿ ಬೆಂಗಳೂರಿನ  ಪ್ರಧಾನ ಕಾರ್ಯದರ್ಶಿ ಕೆ.ಬಲರಾಮ್ ಮಾತನಾಡಿ, ಕಾರ್ಮಿಕ ಕಲ್ಯಾಣದಿಂದ ಇಲಾಖೆಗಳ ಪ್ರಗತಿಸಾಧ್ಯ. ಆಧುನಿಕ ಜಗತ್ತಿಗೆ ಹೊಂದಿಕೊಂಡಂತೆ ಮೆಸ್ಕಾಂ ಈಗಾಗಲೇ ಅನೇಕ ಆಧುನಿಕ ತಂತ್ರಾಂಶಗಳೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದು ಅದಕ್ಕೆ ಮೆಸ್ಕಾಂನ ಕಾರ್ಮಿಕ ಶಕ್ತಿಯೇ ಕಾರಣ ಮೇಲಾಧಿಕಾರಿಗಳಿಂದ ಹಿಡಿದು ಮೆಸ್ಕಾಂನ ಪವರ್ ಮ್ಯಾನ್ ಗಳ ತನಕವೂ ದಕ್ಷತೆಯಿಂದ ದುಡಿಯುತ್ತಿರುವ ಪ್ರತಿಫಲವೇ ಇಲಾಖೆಯ ಸರ್ವ ಅಭಿವೃದ್ಧಿಗೆ ಕಾರಣವಾಗಿದೆ. ಈ ಹಂತ ತಲುಪಬೇಕಾದರೆ ದುಡಿಯುತ್ತಿರುವ ಶ್ರಮ ಶಕ್ತಿಗಳಿಗೆ ತಕ್ಕ ಸಂಭಾವನೆ ಹಾಗೂ ಸೌಲಭ್ಯಗಳು ಸಿಕ್ಕಾಗ ಮಾತ್ರ ಸಾಧ್ಯ. ಮೆಸ್ಕಾಂನ ಪವರ್ ಮ್ಯಾನ್ , ಲೈನ್ ಮ್ಯಾನ್ ಪ್ರತಿದಿನವೂ ಅಪಾಯದ ಅಂಚಿನಲ್ಲಿದ್ದು ಅವರಿಗೆ ಸೂಕ್ತ ಭಧ್ರತೆಯನ್ನು ಒದಗಿಸುವುದು ಇಲಾಖೆಯ ಕರ್ತವ್ಯ. ಈ ನಿಟ್ಟಿನಲ್ಲಿ ಮೆಸ್ಕಾಂನ ಕಾರ್ಯಕ್ರಮಗಳು ಶ್ಲಾಘನೀಯ. ಒಂದು ಕಾಲದಲ್ಲಿ ಬೆಸ್ಕಾಂ ನಂಬರ್ ಒನ್ ಸ್ಥಾನದಲ್ಲಿದ್ದರೆ ಪ್ರಸ್ತುತ ಮೆಸ್ಕಾಂ ಉತ್ತಮ ಕಾರ್ಯ ನಿರ್ವಹಿಸಿ ಒಂದನೇ ಸ್ಥಾನಕ್ಕೆ ಬಂದಿರುವುದು ಅಭಿನಂದನಾರ್ಹ ಎಂದು ನುಡಿದರು. ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ ಎಂ. ಅಧ್ಯಕ್ಷತೆ ವಹಿಸಿದ್ದರು.

ನಿವೃತ್ತ ಮುಖ್ಯ ಇಂಜಿನಿಯರ್ ಮಹದೇವಪ್ಪ, ಆರ್ಥಿಕ ಸಲಹೆಗಾರ ಆರ್.ಎಸ್.ಜಂಬಗಿ, ಮಂಗಳೂರು ಅಧೀಕ್ಷಕ ಇಂಜಿನಿಯರ್ ಕೆ.ವಿ.ಉಮೇಶ್ಚಂದ್ರ, ಉಪಲೆಕ್ಕ ನಿಯಂತ್ರಣಾಧಿಕಾರಿ ಮುರಳೀಧರ ನಾಯಕ್, ಕ.ವಿ.ಪ್ರ.ನಿ.ನಿ ನೌಕರರ ಸಂಘ ಉಪಾಧ್ಯಕ್ಷ ಎಚ್.ಎಸ್.ಗುರುಮೂರ್ತಿ, ಪ.ಜಾ.ಹಾಗೂ ಪ.ವರ್ಗಗಳ ಕಲ್ಯಾಣ ಸಂಸ್ಥೆ ಮೆಸ್ಕಾಂ ಕೇಂದ್ರ ಸಮಿತಿ ಸದಸ್ಯ ಶ್ರೀನಿವಾಸಪ್ಪ, ಶಾಖಾಧಿಕಾರಿ ರಾಮಚಂದ್ರ ಎ.  ಸಂಘಟನಾ ಕಾರ್ಯದರ್ಶಿ ಕ.ವಿ.ಪ್ರ.ನಿ.ನಿ ನೌಕರರ ಸಂಘ ಮಂಗಳೂರು ಕೆ.ಶಂಕರ್ ಪ್ರಕಾಶ್, ಪ.ಜಾ.ಹಾಗೂ ಪ.ವರ್ಗಗಳ ಕಲ್ಯಾಣ ಸಂಸ್ಥೆ ಮೆಸ್ಕಾಂ ಮಂಗಳೂರು ಅಧ್ಯಕ್ಷ ಮಾರಪ್ಪ ಉಪಸ್ಥಿತರಿದ್ದರು.

ಮೆಲ್ವಿನ್ ಪ್ರಕಾಶ್ ಪಿರೇರಾ ಪ್ರಸ್ತಾನವೆಗೈದರು. ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ನಾರಾಯಣ ಭಟ್ ಸ್ವಾಗತಿಸಿದರು. ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಶಿವಶಂಕರ್ ವಂದಿಸಿದರು. ರಾಜೀವ್ ಕಕ್ಕೆಪದವು ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.