www.bantwalnews.com Editor: :Harish Mambady
ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ಶುಕ್ರವಾರ ಸಂಜೆ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಗತಿಬಂಧು, ಸ್ವಸಹಾಯ ಸಂಘ ಒಕ್ಕೂಟಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ಅವರು ಅತಿಥಿಯಾಗಿ ಭಾಗವಹಿಸಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯವರ ಹೊಸ ಚಿಂತನೆಗಳಿಂದ ಯೋಜನೆಯು ಪ್ರಗತಿ ಸಾಧಿಸಿದೆ ಎಂದರು. ಕೇಂದ್ರ ಒಕ್ಕೂಟದ ನೂತನ ಪದಾಧಿಕಾರಿಗಳಿಗೆ ಜವಾಬ್ದಾರಿ ಹಸ್ತಾಂತರಿಸಿ ಮಾತನಾಡಿದ ಬಂಟ್ವಾಳ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರು ಮಾತನಾಡಿ,ಸರಕಾರ ಮಾಡದಂತ ಹಲವಾರು ಜನಪರ ಕೆಲಸವನ್ನು ಯೋಜನೆಯ ಮೂಲಕ ಕಾರ್ಯರೂಪಕ್ಕೆ ಬರುತ್ತಿದ್ದು, ಗ್ರಾಮೀಣ ಭಾಗದ ಬಡವರ ಮನೆ ಬೆಳಕನ್ನು ಕಾಣುವಂತಾಗಿದೆ ಎಂದರು.
ಕೇಂದ್ರ ಒಕ್ಕೂಟದ ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷ ಸದಾನಂದ ನಾವೂರು ಸಭಾಧ್ಯಕ್ಷತೆ ವಹಿಸಿದ್ದರು.ಬಂಟ್ವಾಳ ತಾ.ಜನಜಾಗೃತಿ ವೇದಿಕೆಯ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೋಡಾಜೆ, ಬಿ.ಸಿ.ರೋಡ್ ವಲಯ ಅಧ್ಯಕ್ಷ ರೋನಾಲ್ಡ್ ಡಿಸೋಜ ಅಮ್ಟಾಡಿ,ಒಕ್ಕೂಟದ ನೂತನ ಅಧ್ಯಕ್ಷ ಮಾಧವ ವಳವೂರು, ತಾಲೂಕಿನ ವಿವಿಧ ಒಕ್ಕೂಟದ ಅಧ್ಯಕ್ಷರು ವೇದಿಕೆಯಲ್ಲಿದ್ದರು.ಇದೇ ವೇಳೆ ಇಬ್ಬರು ವಿದ್ಯಾರ್ಥಿಗಳಿಗೆ ಸುಜ್ಙಾನ ಶಿಷ್ಯ ವೇತನ, ಓರ್ವ ಫಲಾನುಭವಿಗೆ ಮಾಶಾಸನ ವಿತರಿಸಲಾಯಿತು.ಹಾಗೆಯೇ ತಾಲೂಕಿನ ವಿವಿಧ ಒಕ್ಕೂಟಗಳ ನಿಕಟಪೂರ್ವ ಅಧ್ಯಕ್ಷರನ್ನು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಯೋಜನೆಯ ಜಿಲ್ಲಾ ನಿರ್ದೇಶಕ ಚಂದ್ರಶೇಖರ ನೆಲ್ಯಾಡಿ ಸ್ವಾಗತಿಸಿದರು.ಯೋಜನೆಯ ಬಂಟ್ವಾಳ ತಾಲೂಕು ಘಟಕದ ಯೋಜನಾಧಿಕಾರಿ ಜಯಾನಂದ. ಪಿ. ವರದಿ ವಾಚಿಸಿದರು. ಸಿದ್ದಕಟ್ಟೆ ವಲಯಾಧ್ಯಕ್ಷ ಸದಾನಂದ ಶೀತಲ್ ವಂದಿಸಿದರು .ಮೇಲ್ವಿಚಾರಕ ರಮೇಶ್ ನಿರೂಪಿಸಿದರು.