ಬಂಟ್ವಾಳ: ಬಂಟ್ವಾಳ ತಾಲೂಕು ಮಿನಿ ವಿಧಾನಸೌಧದಲ್ಲಿ ಮಡಿವಾಳ ಮಾಚಿದೇವ ಜಯಂತಿಯನ್ನು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಚರಿಸಲಾಯಿತು.
ಭಾವಚಿತ್ರಕ್ಕೆ ದೀಪ ಬೆಳಗಿಸಿ ಗೌರವ ಸಲ್ಲಿಸಿದ ಬಳಿಕ ಮಾತನಾಡಿದ ಉಪತಹಶೀಲ್ದಾರ್ ರಾಜೇಶ್ ನಾಯ್ಕ್, 12ನೇ ಶತಮಾನದ ಶರಣರ ಇತಿಹಾಸ ವಿಶ್ವ ಪ್ರಸಿದ್ಧವಾಗಿದ್ದು, ಜನರಲ್ಲಿದ್ದ ಮೌಢ್ಯತೆಯನ್ನು ಹೋಗಲಾಡಿಸಿ ಆತ್ಮ ವಿಶ್ವಾಸ ಮೂಡಿಸುವಲ್ಲಿ ಯಶಸ್ವಿಯಾದ ವಚನಕಾರರ ಸಾಲಿನಲ್ಲಿ ಮಡಿವಾಳರ ಮಾಚಿದೇವ ಅಗ್ರ ಕೊಡುಗೆ ಸಲ್ಲಿಸಿದವರು ಎಂದು ಹೇಳಿದರು.
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವಿಷಯ ನಿರ್ವಹಕ ವಿಶುಕುಮಾರ್, ತಾಲೂಕು ಕಚೇರಿ ಸಿಬಂದಿ, ಗ್ರಾಮ ಲೆಕ್ಕಾಧಿಕಾರಿಗಳು ಗ್ರಾಮ ಸಹಾಯಕರು ಹಾಜರಿದ್ದು, ಗೌರವ ಅರ್ಪಿಸಿದರು.