ಬಂಟ್ವಾಳ: ಬಿ.ಸಿ.ರೋಡಿನ ಸಂಚಯಗಿರಿಯ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಹಾಗೂ ತುಳು ಬದುಕು ವಸ್ತು ಸಂಗ್ರಹಾಲಯದ ರಜತ ವರ್ಷಾಚರಣೆಗೆ ಬುಧವಾರ ಸಂಜೆ ಚಾಲನೆ ದೊರಕಿತು.
ದೀಪ ಬೆಳಗಿಸಿ ಉದ್ಘಾಟಿಸಿದ ವಿಧಾನಪರಿಷತ್ತು ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ಭಾರತದ ಪಾರಂಪರಿಕ ಮೌಲ್ಯವನ್ನು ಪ್ರಪಂಚವೇ ನೋಡುತ್ತಿದೆ. ಆದರೆ ಮುಂದಿನ ತಲೆಮಾರಿಗೆ ನಾವೇನು ಬಿಟ್ಟು ಹೋಗುತ್ತಿವೆ ಎನ್ನುವ ಆತಂಕವೂ ಕಾಡುತ್ತಿದೆ ಎಂದರು.
ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರದ ಅಧ್ಯಕ್ಷ ತುಕರಾಮ ಪೂಜಾರಿ ಸ್ವಾಗತಿಸಿ. ಪ್ರಾಸ್ತಾವಿಕ ಮಾತನಾಡಿ ರಜತಾ ವರ್ಷಾಚರಣೆಯ ಅಂಗವಾಗಿ ಕೇಂದ್ರದ ಗ್ರಂಥಾಲಯಕ್ಕೆ ಪುಸ್ತಕ ಭಿಕ್ಷೆ ಅಭಿಯಾನ ಹಾಗೂ ಸಂಸ್ಕತಿ ಗ್ರಾಮ ಯೊಜನೆಗೆ ಚಾಲನೆ ದೊರಕಿದೆ ಎಂದರು.
ಹಿರಿಯ ಲೇಖಕ ಆಗುಂಬೆ ನಟರಾಜ ವಿಶೇಷ ಉಪನ್ಯಾಸ ನೀಡಿ ಭಾರತೀಯರಿಗೆ ಇತಿಹಾಸ ಪ್ರಜ್ಞೆ ಕಡಿಮೆಯಾಗಿದೆ. ರಾಣಿ ಲಕ್ಷ್ಮೀಬಾಯಿಗೆ ಕೊಟ್ಟಷ್ಟು ಪ್ರಾಧಾನ್ಯತೆಯನ್ನು ರಾಣಿ ಅಬ್ಬಕ್ಕಗೆ ನೀಡಿಲ್ಲ ಎಂದರು.
ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ ಮಾತನಾಡಿದರು. ಪುತ್ತೂರು ಸರಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಕ್ಸೇವಿಯರ್ ಡಿಸೋಜಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರ ನಡೆದು ಬಂದ ದಾರಿಯ ಬಗ್ಗೆ ಮಹಾಬಲೇಶ್ವರ ಹೆಬ್ಬಾರ್ ಮಾಹಿತಿ ನೀಡಿದರು. ಕಾರ್ಯದರ್ಶಿ ಆಶಾಲತಾ ಸುವರ್ಣ ವಂದಿಸಿದರು. ನ್ಯಾಯವಾದಿ ನವನೀತ ಹಿಂಗಾಣಿ ಕಾರ್ಯಕ್ರಮ ನಿರೂಪಿಸಿದರು.