ಬಂಟ್ವಾಳ

ಬ್ರಹ್ಮರಕೂಟ್ಲು ಸರಕಾರಿ ಶಾಲೆಯಲ್ಲಿ ಭಾಷಾಲೋಕ

ಬಂಟ್ವಾಳ: ಬ್ರಹ್ಮರಕೂಟ್ಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾಷಾ ಬೋಧನೆ ಯ ಕುರಿತು ವಿಶೇಷವಾಗಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಂದ ವ್ಯವಸ್ಥೆಗೊಳಿಸಿದ ,’ಭಾಷಾ ಲೋಕ ‘ತರಗತಿಯನ್ನು  ಲೋಕಾರ್ಪಣೆಗೊಳಿಸಲಾಯಿತು.
ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ  ಅವರು, ‘ಭಾಷಾ ಲೋಕ’ತರಗತಿಯನ್ನು ಸಾಂಕೇತಿಕವಾಗಿ ರಿಬ್ಬನ್ ಕತ್ತರಿಸಿ, ಶಾಲಾ ಧ್ವಜ ಅರಳಿಸಿ ಅದರಿಂದ ಕನ್ನಡ ಹಾಗೂ ಇಂಗ್ಲಿಷ್ ಅಕ್ಷರಗಳನ್ನು ಉದುರಿಸುವುದರ ಮೂಲಕ ವಿಶಿಷ್ಟವಾಗಿ  ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಇಂತಹ ತರಗತಿಗಳನ್ನು ತಾಲೂಕಿನಾದ್ಯಂತ ಎಲ್ಲಾ ಶಾಲೆಗಳಲ್ಲಿ ಸಜ್ಜು ಗೊಳಿಸಬೇಕು,ಈ ಬಗ್ಗೆ ಇಲಾಖೆ ಗಮನಕ್ಕೆ ತರಲಾಗುವುದು ಹಾಗೂ ಇದಕ್ಕೆ ಕಾರಣರಾದ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಅಧ್ಯಕ್ಷತೆಯನ್ನು  ಎಸ್ . ಡಿ. ಎಂ. ಸಿ. ಅಧ್ಯಕ್ಷೆ  ಶ್ರೀಕಲಾ ರವರು ವಹಿಸಿ ಮಾತನಾಡಿ, ಇಂತಹ ನೂತನ ಪ್ರಯೋಗಗಳಿಂದ ಸರ್ಕಾರಿ ಶಾಲೆಗಳನ್ನು ಉಳಿಸಬಹುದಾಗಿದೆ ಎಂದು ಅಭಿಪ್ರಾಯ ಪಟ್ಟರು.
ಸಂಪನ್ಮೂಲ ಶಿಕ್ಷಕಿ  ನಿರ್ಮಲಾ ವಿಲ್ಮಾ ರೊಡ್ರಿಗಸ್ ಮಾತನಾಡಿ  ಭಾಷಾ ಲೋಕ ತರಗತಿಗಳು ತಾಲೂಕಿನ ಎಲ್ಲಾ ಶಾಲೆಗಳಲ್ಲಿ ಅನುಷ್ಠಾನ ಗೊಳ್ಳುವುದರ ಮೂಲಕ ಯಶಸ್ಸನ್ನು ಸಾಧಿಸಲಿ ಎಂದು ಹಾರೈಸಿದರು.ಇದೇ ಸಂದರ್ಭದಲ್ಲಿ ಶಾಲೆಗೆ ಹಳೇವಿದ್ಯಾರ್ಥಿಯೊಬ್ಬರು ಕೊಡುಗೆಯಾಗಿ ಧ್ವನಿವರ್ಧಕ ನೀಡಿರುವುದನ್ನು ಅಭಿನಂದಿಸಲಾಯಿತು. ವೇದಿಕೆಯಲ್ಲಿ ದಿವಾಕರ ಪಂಬದಬೆಟ್ಟು,  ಯೋಗೀಶ್ ಕುಲಾಲ್, ಮಂಜುನಾಥ ಕಾಮತ್,  ಕಿಶೋರ್,  ಶಶಿಧರ ಬ್ರಹ್ಮರಕೂಟ್ಲು,  ಉದ್ಯಮಿ  ಹಮೀದ್  ಹಾಗೂ ಮೊಹಮ್ಮದ್ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಫ್ಲೋರಿನ್ ರೆಬೆಲ್ಲೋ ಸ್ವಾಗತಿಸಿದರು.ಮಾರ್ಗದರ್ಶಿ ಶಿಕ್ಷಕಿ  ವೇದಾವತಿ ಪ್ರಸ್ತಾಪಿಸಿದರು.ಕು.ರಚನಾ ವಂದಿಸಿದರು. ಮಾರ್ಗದರ್ಶಿ ಶಿಕ್ಷಕಿ  ಭಾರತಿ ಶೇಷಪ್ಪ ಕಾರ್ಯಕ್ರಮ ನಿರೂಪಿಸಿದರು.
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts