ಬಂಟ್ವಾಳ

ಬಂಟ್ವಾಳ ರೋಟರಿ ಕ್ಲಬ್‌ನ ವೈಭವದ ಸುವರ್ಣ ಸಂಭ್ರಮಾಚರಣೆ

www.bantwalnews.com Editor: Harish Mambady

ಜಾಹೀರಾತು

ಬಂಟ್ವಾಳ: ನೋವು ನಲಿವಿಗೆ ಸ್ಪಂದಿಸುತ್ತಾ ಸಮಾಜಮುಖಿಯಾಗಿರುವ ರೋಟರಿ ಸದಸ್ಯರು ಬದುಕಿನ ನಿಜಾರ್ಥವನ್ನು ಜಗಕ್ಕೆ ಪಸರಿಸುತ್ತಿದ್ದಾರೆ, ಬಂಟ್ವಾಳ ರೋಟರಿ ಕ್ಲಬ್ ಕೂಡ ತನ್ನ ಸಾರ್ಥಕ್ಯದ ೫೦ ವರ್ಷಗಳನ್ನು ಪೂರೈಸುತ್ತಿರುವುದು ಕೂಡ ಅತ್ಯಂತ ಹೆಮ್ಮೆಯ ವಿಚಾರ ಎಂದು ರೋಟರಿ ಜಿಲ್ಲೆ ೩೧೩೧ರ ಪೂರ್ವ ಜಿಲ್ಲಾ ಗವರ್ನರ್ ಮೋಹನ್ ಹಿರಾಚಂದ್ ಪಲೇಶಾ ಹೇಳಿದರು.

ಭಾನುವಾರ ಸಂಜೆ ಅಡ್ಯಾರ್ ನ ಅಡ್ಯಾರ್ ಗಾರ್ಡನ್ ನ ಲ್ಲಿ ನಡೆದ ಬಂಟ್ವಾಳ ರೋಟರಿ ಕ್ಲಬ್‌ನ ವೈಭವದ ಸುವರ್ಣ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡರು.

ತನ್ನ ನಡೆ ನುಡಿಯನ್ನು ಇಡೀ ಸಮಾಜ ಗಮನಿಸುತ್ತಿದೆ, ನಾನು ಸಮಾಜ ಮುಖಿಯಾಗಿ ಕಾರ್ಯನಿರ್ವಹಿಸಬೇಕು, ಕಾನೂನಿಗೆ, ನನ್ನ ವೃತ್ತಿಗೆ ಗೌರವ ಕೊಡಬೇಕೆಂಬ ಮನೋಭಾವ ಪ್ರತಿಯೊಬ್ಬರಲ್ಲೂ ಬೆಳೆದಾಗ ಸಮಾಜ ಮತ್ತಷ್ಠು ಜಾಗೃತವಾಗುತ್ತದೆ ಎಂದವರು ಹೇಳಿದರು. ಮಂಜುನಾಥ್ ಆಚಾರ್ಯ ಮತ್ತು ಬಳಗ ರೋಟರಿಯ ನೈಜ ಆಶಯಗಳನ್ನು ಎಲ್ಲೆಡೆ ಪಸರಿಸುವ ಕಾರ್ಯ ಮಾಡುತ್ತಿದೆ ಎಂದವರು ಶ್ಲಾಘಿಸಿದರು.

 

ರೋಟರಿ ಜಿಲ್ಲೆ ೩೧೮೧ರ ರಾಜ್ಯಪಾಲ ರೋಹಿನಾಥ ಪಿ. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಂಟ್ವಾಳ ರೋಟರಿ ಕ್ಲಬ್ ಅತ್ಯಂತ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದ್ದು, ರೋಟರಿ ಜಿಲ್ಲೆಯ ಇತರ ಕ್ಲಬ್ ಗಳಿಗೆ ಮಾದರಿಯಾಗಿದೆ, ಮುಂದೆ ಮತ್ತಷ್ಟು ಕ್ರಿಯಾಶೀಲವಾಗಲಿ ಎಂದರು.

ಸುವರ್ಣ ವರ್ಷಾಚರಣೆ ಸಮಿತಿ ಡಾ ರಮೇಶಾನಂದ ಸೋಮಯಾಜಿ ಪ್ರಸ್ತಾವನೆಗೈದು ಮಾತನಾಡಿ, ಬಂಟ್ವಾಳ ರೋಟರಿ ಕ್ಲಬ್ ಅನ್ನು ಕಳೆದ 50 ವರ್ಷಗಳ ಹಿಂದೆ ಆರಂಭಿಸಿ, ಬೆಳೆಸಿ ಕ್ರಿಯಾಶೀಲತೆಯನ್ನು ಉಳಿಸುವಲ್ಲಿ ಅನೇಕರ ಶ್ರಮ ಅಡಗಿದ್ದು, ಅವರೆಲ್ಲರ ಬೆಂಬಲದಿಂದ ಇಷ್ಟು ಎತ್ತರಕ್ಕೆ ಏರಿದೆ. ಪ್ರಸಕ್ತ ವರ್ಷ ಮಂಜುನಾಥ ಆಚಾರ್ಯರ ನೇತೃತ್ವದಲ್ಲಿ , ಎಲ್ಲರ ಸಹಕಾರದಲ್ಲಿ ಮಾದರಿಯಾಗಿ ಮುನ್ನಡೆಯುತ್ತಿದೆ ಎಂದರು. ವಲಯ ೩೧೮೧ರ ಚುನಾಯಿತ ಜಿಲ್ಲಾ ಗವರ್ನರ್ ಜೋಸೆಫ್ ಮ್ಯಾಥ್ಯು, ನಿಯೋಜಿತ ಜಿಲ್ಲಾ ಗವರ್ನರ್ ರಂಗನಾಥ ಭಟ್ ಎಂ., ವಲಯ ೪ರ ಸಹಾಯಕ ಗವರ್ನರ್ ಪ್ರಕಾಶ್ ಕಾರಂತ್ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಭಾಗವಹಿಸಿದ್ದ ವಿವಿಧ ದೇಶಗಳ ರೋಟರಿ ರೈಡ್ ಬಳಗ ಸದಸ್ಯರು ವಿಶೇಷ ಮೆರುಗು ನೀಡಿದರು.ಇದೇ ಸಂದರ್ಭ ವಿವಿಧ ದೇಶಗಳ ರೋಟರಿ ಸದಸ್ಯರನ್ನು, ಬಂಟ್ವಾಳ ರೋಟರಿ ಕ್ಲಬ್ ನ ಪೂರ್ವಾಧ್ಯಕ್ಷರನ್ನು ಬಂಟ್ವಾಳ ರೋಟರಿ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.

ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಆಚಾರ್ಯ ಸ್ವಾಗತಿಸಿ ಮಾತನಾಡಿ, ಸುವರ್ಣ ವರ್ಷಾಚರಣೆಯ ಸಂಭ್ರಮದ ಸಮಯದಲ್ಲೇ ನಮ್ಮ ಕ್ಲಬ್ ದಾಖಲೆ ಎಂಬಂತೆ ಹಲವಾರು ಸಾಧನೆಗಳನ್ನು ಮಾಡಿದೆ,ಶೈಕ್ಷಣಿಕವಾಗಿ ಶಾಲಾ ಕಾಲೇಜುಗಳಲ್ಲಿ ವಿಜ್ಞಾನ, ಗಣಿತ, ಬಾಹ್ಯಾಕಾಶ, ನಾಟಕ ಕುರಿತು ಜಾಗೃತಿ, ಅನೇಕ ಬಡಕುಟುಂಬಗಳಿಗೆ ನೆರವು,ಅಂಗನವಾಡಿಗಳಿಗೆ ನೆರವು, ಶಾಲಾ ಕಟ್ಟಡಗಳ ನಿರ್ಮಾಣ ಸಹಿತ ಅನೇಕ ಕಾರ್ಯಕ್ರಮಗಳು ಜೊತೆಗೆ ನವಬೆಳಕು ಕಿರು ಚಿತ್ರ ರಾಜ್ಯಪ್ರಶಸ್ತಿ, ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರದಲ್ಲೂ ಅನೇಕ ಬಹುಮಾನಗಳನ್ನು ಪಡೆದುಕೊಂಡಿರುವುದು ಹೆಮ್ಮೆಯ ಸಂಗತಿ ಎಂದರು. ಕಾರ್ಯದರ್ಶಿ ಶಿವಾನಿ ಬಾಳಿಗಾ ವಂದಿಸಿದರು. ಮಹಮ್ಮದ್ ಮುಸ್ತಾಫ ಕಾರ್ಯಕ್ರಮ ನಿರೂಪಿಸಿದರು.

ಸಭಾಕಾರ್ಯಕ್ರಮದ ಬಳಿಕ ರೋಟರಿ ಆ್ಯನ್ಸ್ ಹಾಗೂ ಉಡುಪಿಯ ಭಾರ್ಗವಿ ನೃತ್ಯತಂಡದಿಂದ  ನೃತ್ಯ ಕಾರ್ಯಕ್ರಮ ನಡೆಯಿತು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts

ಮಂಗಳೂರು ಕಡಲ ತೀರ ʼಕಡಲ ಪವನ ಶಕ್ತಿ ಉತ್ಪಾದನಾ ವಲಯʼವಾಗಿ ಅಭಿವೃದ್ಧಿಪಡಿಸಲು ಕೇಂದ್ರಕ್ಕೆ ಮನವಿ

ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)

3 hours ago