ಬಂಟ್ವಾಳ: ಬಂಟ್ವಾಳ ತಾಲೂಕು ಪಿಂಚಣಿದಾರರ ಸಂಘದ ಕಾರ್ಯಕಾರಿ ಸಮಿತಿ ಸಭೆ ಜನವರಿ 23ರಂದು ಬಂಟ್ವಾಳ ತಾಲೂಕು ಸರಕಾರಿ ನೌಕರರ ಸಂಘದ ಸಭಾಭವನದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಬಿ.ತಮ್ಮಯ್ಯ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯದರ್ಶಿ ಕೆ. ನೀಲೋಜಿ ರಾವ್ ಅವರು ಕಳೆದ ಸಭೆಯ ವರದಿ ಮಂಡಿಸಿದರು. ಕೋಶಾಧಿಕಾರಿ ಜಲಜಾಕ್ಷಿ ಕುಲಾಲ್ ಲೆಕ್ಕಪತ್ರ ಮಂಡಿಸಿದರು.
ಹಿರಿಯ ಸದಸ್ಯ ದಿ.ಸುಧಾಕರ ಹೆಗ್ಡೆ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು. ಸಂಘಕ್ಕೆ ಹೊಸದಾಗಿ ಸೇರ್ಪಡೆಗೊಂಡವರನ್ನು ಅಭಿನಂದಿಸಲಾಯಿತು. ಸಂಘದ 2018-19ನೇ ವಾರ್ಷಿಕ ಸಭೆಯನ್ನು ಏ.13ರಂದು ನಡೆಸುವುದು ಎಂದು ತೀರ್ಮಾನಿಸಲಾಯಿತು. ಈ ಸಂದರ್ಭ ಮುಖ್ಯ ಅತಿಥಿಗಳಾಗಿ ನಿವೃತ್ತ ಉಪಪ್ರಾಂಶುಪಾಲ ತುಕಾರಾಮ ಪೂಜಾರಿ, ನಿವೃತ್ತ ಪ್ರೊಫೆಸರ್ ಮಧುಕರ ಮಲ್ಯ, ಬಂಟ್ವಾಳ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಉಮಾನಾಥ ರೈ ಅವರನ್ನು ಆಹ್ವಾನಿಸಲು ತೀರ್ಮಾನಿಸಲಾಯಿತು. 80 ವರ್ಷಗಳು ದಾಟಿದ ಹಿರಿಯ ಸದಸ್ಯರಿಗೆ ಇತ್ತೀಚಿನ ಸರಕಾರಿ ಆದೇಶದಂತೆ ಮಂಜೂರಾದ ಹೆಚ್ಚುವರಿ ಪಿಂಚಣಿಗಳನ್ನು ಅರ್ಹ ಸದಸ್ಯರು ಪಡೆದುಕೊಳ್ಳುವಂತೆ ಮಾಹಿತಿ ಕೊಡಬೇಕು ಎಂದು ಮನವಿ ಮಾಡಲಾಯಿತು. ಈ ಕುರಿತು ಸಂಘದ ಕಾರ್ಯದರ್ಶಿಯನ್ನು ಸಂಪರ್ಕಿಸಲು ತಿಳಿಸಲಾಯಿತು.
ಉಪಾಧ್ಯಕ್ಷರಾದ ಕೃಷ್ಣರಾಜ ಶೆಟ್ಟಿ, ವಿ.ಸೋಮಪ್ಪ, ಸದಸ್ಯರಾದ ಚಂದೂ ನಾಯ್ಕ, ರಾಘವನ್ ನಾಯರ್, ಶೇಷಪ್ಪ ಮಾಸ್ಟರ್, ರಮೇಶ್ ಭಟ್, ಶ್ರೀಧರ ಗೌಡ, ಅಬ್ದುಲ್ ಸಲಾಂ, ಶಿವಶಂಕರ್, ಸುಂದರ ಮೂಲ್ಯ, ನಂದಕಿಶೋರ್, ಶಾರದಾ, ಗಿರಿಜಾ ಬಾಯಿ ಉಪಸ್ಥಿತರಿದ್ದರು. ನೀಲೋಜಿ ರಾವ್ ಸ್ವಾಗತಿಸಿ ವಂದಿಸಿದರು.