Editor: Harish Mambady
ಬಂಟ್ವಾಳ: ಮಂಚಿ ಕೊಳ್ನಾಡಿನ ಸರಕಾರಿ ಪ್ರೌಢಶಾಲೆಯಲ್ಲಿ ಸಂಭ್ರಮದ 70ನೇ ಗಣರಾಜ್ಯೋತ್ಸವ ನಡೆಯಿತು. ಧ್ವಜಾರೋಹಣಗೈದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರವೀಣ್ ಕೊಟ್ಟಾರಿ ಶುಭ ಹಾರೈಸಿದರು. ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ನಾರಾಯಣ ಭಟ್ ನೂಜಿಬೈಲು ಮತ್ತು ವಿದ್ಯಾರ್ಥಿಗಳು ಗಣರಾಜ್ಯೋತ್ಸವ ಕುರಿತಾಗಿ ಅನಿಸಿಕೆ ವ್ಯಕ್ತಪಡಿಸಿದರು. ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಡಾ. ಗೋಪಾಲ ಆಚಾರ್, ಸೀತಾರಾಮ ಮೂಲ್ಯ ಕೋಕಳ, ರಮೇಶ್ ಟೈಲರ್, ಅಶೋಕ್ ಸಿಂಗಾರಕೋಡಿ, ರಾಜೇಂದ್ರ ಕಾರಂತ, ರಮೇಶ್ ಪತ್ತುಮುಡಿ, ನಳಿನಾಕ್ಷಿ, ನೆಬಿಸಾ, ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯರಾದ ವಿ ಶ್ರೀರಾಮಮೂರ್ತಿ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…