ಇರಾ ಬಾಳೆಪುಣಿ ಶಾಲೆಯಲ್ಲಿ ನಡೆದ ಪೋಷಕರ ಮತ್ತು ಎಸ್ ಡಿ ಎಂ ಸಿ ಯ ಸಭೆಯನ್ನುದ್ದೇಶಿಸಿ ಮಾತನಾಡಿ, ಊರಿನ ಹಳೆಯ ವಿದ್ಯಾರ್ಥಿಗಳು ತಮ್ಮ ಶ್ರಮದಾನ ಮತ್ತು ಆರ್ಥಿಕ ಸಹಾಯದ ಮೂಲಕ ಸರಕಾರಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ರೂಪಿಸಬೇಕೆಂದರು.
ತಾಲೂಕು ಪಂಚಾಯತ್ ಅಧ್ಯಕ್ಷರಾದ ಚಂದ್ರಹಾಸ ಕರ್ಕೇರ ಮಾತನಾಡಿ, ಶಾಲೆಯ ಸಬಲೀಕರಣಕ್ಕೆ ಸರ್ವರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು. ಶಾಲೆಯ ಪ್ರಗತಿಗಾಗಿ ಹೊಸ ಹೆಜ್ಜೆ ಇರಿಸಿರುವ ಜಮಾತ್ ನ ಅಧ್ಯಕ್ಷರಿಗೆ, ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು .ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶಿವಪ್ರಕಾಶ್ ಆಂಗ್ಲಮಾಧ್ಯಮ ತರಗತಿಗಳನ್ನು ಆರಂಭಿಸುವ ಬಗ್ಗೆ ಪ್ರಶಂಸಿಸಿ ಅದರ ಇತಿಮಿತಿಗಳ ಬಗ್ಗೆ ವಿವರಿಸಿದರು.
ಜಮಾತ್ ನ ಅಧ್ಯಕ್ಷರಾದ ಎಮ್.ಬಿ.ಸಖಾಫಿ ಶಾಲೆಯ ಉಳಿವಿಗಾಗಿ ಊರವರ ಜೊತೆ ಚರ್ಚಿಸಿ ಆಂಗ್ಲ ಮಾಧ್ಯಮ ತರಗತಿಗಳನ್ನ ಆರಂಭಿಸುವ ಬಗ್ಗೆ ಕೈಗೊಂಡ ತೀರ್ಮಾನದ ಮನವಿಯನ್ನು ಸಭೆಯಲ್ಲಿ ವಾಚಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಸ್ತಾಂತರಿಸಿದರು.
ಸಭೆಯಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಹಸೈನಾರ್, ಆಂಗ್ಲಮಾಧ್ಯಮ ಸಮಿತಿಯ ಅಧ್ಯಕ್ಷರಾದ ಸಿ . ಎಚ್. ಮೊಹಮ್ಮದ್, ಗ್ರಾ.ಪಂ .ಸದಸ್ಯರಾದ ಮೊಯಿದೀನ್ ಕುಂಞ, ಉಮ್ಮರ್, ಎಸ್.ಡಿ.ಎಂ.ಸಿ.ಸದಸ್ಯರು, ಜಮಾತ್ ನ ಸದಸ್ಯರು, ಮಂಚಿ ವಲಯದ ಶಿಕ್ಷಣ ಸಂಯೋಜಕರಾದ ಸುಶೀಲಾ ಹಾಗೂ ಮಕ್ಕಳ ಪೋಷಕರು ಪಾಲ್ಗೊಂಡಿದ್ದರು. ಸಹಶಿಕ್ಷಕರಾದ ಸುಬ್ರಮಣ್ಯ ಸ್ವಾಗತಿಸಿ, ಮುಖ್ಯಶಿಕ್ಷಕಿ ಸವಿತಾ ವಂದಿಸಿದರು.