Categories: ಬಂಟ್ವಾಳ

ಬಂಟ್ವಾಳ ಪುರಸಭೆ ಬಜೆಟ್ ಪೂರ್ವಭಾವಿ ಸಭೆಗೆ ಕೊನೆಗೂ ಮುಹೂರ್ತ

www.bantwalnews.com

Editor: Harish Mambady

ಜಾಹೀರಾತು

ಕೊನೆಗೂ ಬಂಟ್ವಾಳ ಪುರಸಭೆಯ ಬಜೆಟ್ ಪೂರ್ವಭಾವಿ ಸಭೆಗೆ ದಿನ ಮುಹೂರ್ತ ನಿಗದಿಯಾಗಿದೆ. ಜನವರಿ 29ರಂದು ಬೆಳಗ್ಗೆ ನಾನಾ ಸಂಘ, ಸಂಸ್ಥೆಗಳಿಂದ ಅಭಿಪ್ರಾಯ ಸಂಗ್ರಹಣೆ ಕಾರ್ಯ ನಡೆಯಲಿದೆ ಎಂದು ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ ತಿಳಿಸಿದ್ದಾರೆ.

2019-20 ರ  ಮಾಚ್೯ವರೆಗಿನ ಅಯ – ವ್ಯಯವನ್ನು ಮಂಡಿಸಬೇಕಾಗಿದ್ದು.ಅದಕ್ಕೆ ಪೂರಕವಾದ ಸಿದ್ದತೆಯನ್ನು ಈಗಲೇ ಮಾಡಬೇಕಾಗಿದೆ. ಆದರೆ ಬಂಟ್ವಾಳ ಪುರಸಭೆ ಅಂತಹ ತಯಾರಿಯನ್ನು ಇನ್ನೂ ಮಾಡಿರಲಿಲ್ಲ.

ನಿಯಾಮಾವಳಿಯಂತೆ ಪುರಸಭಾ ವ್ಯಾಪ್ತಿಯ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಗಣ್ಯರ ಹಾಗೂ ಪ.ಜಾ.ಮತ್ತು ಪಂ.ಕ್ಜೆ ಸೇರಿದ ಪ್ರಮುಖರ ಪ್ರತ್ಯೇಕ ಸಭೆ ನಡೆಸಿ ಅಲ್ಲಿ ಬರುವಂತ  ಪ್ರಮುಖ ಸಲಹೆಯನ್ನು ಪರಿಗಣಿಸಿ  ಪುರಸಭೆಯು ತಮ್ಮ ಅಯವ್ಯಯದಲ್ಲಿ ಅದಕ್ಕೆ ಅನುದಾನವನ್ನು ಕಾದಿರಿಸಬೇಕಾಗಿದೆ.  ಈ ಪ್ರಕ್ರಿಯೆಯನ್ನು ಮುಗಿಸಿ ಬಜೆಟ್ ನ ಇತರ ಸಿದ್ದತೆಯನ್ನು ಮಾಡಬೇಕಾಗಿತ್ತು. ಆದರೆ ಬಂಟ್ವಾಳ ಪುರಸಭೆ ಸಂಘ, ಸಂಸ್ಥೆಯ ಪದಾಧಿಕಾರಿಗಳಾಗಲಿ, ಪ.ಜಾ.ಪ.ಪಂ. ಮುಖಂಡರ ಸಭೆಯನ್ನು ಈವರೆಗೂ ಕರೆದು ಯಾವುದೇ ಸಲಹೆಯನ್ನು ಪಡೆದುಕೊಂಡಿರಲಿಲ್ಲ. ಈ ಹಿಂದೆಯು ಬಜೆಟ್ ತಯಾರಿಗೆ ಮುನ್ನ ಪುರಸಭಾ ವ್ಯಾಪ್ತಿಯ ಸಂಘ ಸಂಸ್ಥೆಯ ಪದಾಧಿಕಾರಿಗಳು, ಗಣ್ಯರಿಂದ, ಪ.ಜಾ.ಪ.ಪಂ.ದ  ಮುಖಂಡರ ಸಭೆ ನಡೆಸಲಾಗಿತ್ತು. ಆಗ ಪುರಸಭೆಯ ಅಭಿವೃದ್ದಿಗೆ ಸಂಬಂದಿಸಿ,ಕಸ ವಿಲೇವಾರಿ, ಪುಟ್ ಪಾತ್ ನಿರ್ಮಾಣ,ಬಂಟ್ವಾಳ ಪೇಟೆ ಅಗಲೀಕರಣ ಸೇರಿದಂತೆ ಹಲವಾರು ಸಲಹೆಗಳನ್ನು ಸಭೆಯಲ್ಲಿದ್ದ ಗಣ್ಯರು ನೀಡಿದ್ದರಾದರೂ ಅಯವ್ಯಯ ಮಂಡನೆಯಾದಾಗ ಪೂರ್ವಭಾವಿ ಸಭೆಯಲ್ಲಿ ಚರ್ಚೆಗೆ ಬಂದ ಯಾವುದೇ  ಸಲಹೆಗಳನ್ನು ಬಜೆಟ್ ತಯಾರಿ ವೇಳೆ ಗಣನೆಗೆ ತೆಗೆದುಕೊಂಡಿರಲಿಲ್ಲ. ಈ ಬಾರಿಯ ಸಭೆಯಲ್ಲಾದರೂ ಸಾರ್ವಜನಿಕ ಅಭಿಪ್ರಾಯಕ್ಕೆ ಮನ್ನಣೆ ದೊರಕುವುದೇ ?

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts

ಮಂಗಳೂರು ಕಡಲ ತೀರ ʼಕಡಲ ಪವನ ಶಕ್ತಿ ಉತ್ಪಾದನಾ ವಲಯʼವಾಗಿ ಅಭಿವೃದ್ಧಿಪಡಿಸಲು ಕೇಂದ್ರಕ್ಕೆ ಮನವಿ

ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)

6 hours ago