www.bantwalnews.com Editor: Harish Mambady
ವೀರ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 122 ನೇ ಜನ್ಮ ದಿನಾಚರಣೆ ಪ್ರಯುಕ್ತ ನೇತಾಜಿ ಯುವಕ ಮಂಡಲ ಕಲ್ಲಡ್ಕ ಆಶ್ರಯದಲ್ಲಿ ನುಡಿ ನಮನ ಸಲ್ಲಿಸುವ ಕಾರ್ಯಕ್ರಮ ಸ್ಮೃತಿ ದಿನ ನೇತಾಜಿ ಸ್ಮೃತಿ ಭವನದಲ್ಲಿ ನಡೆಯಿತು. ಈ ಪ್ರಯುಕ್ತ ನುಡಿನಮನ ಸಲ್ಲಿಸಿದ ಅವರು ಯುವಪೀಳಿಗೆ ನೇತಾಜಿಯವರ ಅದಮ್ಯ ದೇಶಭಕ್ತಿಯಿಂದ ಪ್ರೇರೇಪ:ಣೆ ಹೊಂದಿ ರಾಷ್ಟ್ರದ ಗೌರವ ಕಾಪಾಡಲು ಶ್ರಮಿಸಬೇಕು ಎಂದರು.
ಈ ಸಂದರ್ಭ ನಿವೃತ್ತ ಸುಬೇದಾರ್ ಮೇಜರ್ ರಾಜೇಂದ್ರಾಜಿ ಕೆ.ಪಿ. ಕಲ್ಲಡ್ಕ ಅವರನ್ನು ಗೌರವಿಸಲಾಯಿತು. ಬಳಿಕ ಕಿರಣ್ ಕುಮಾರ್ ಗಾನಸಿರಿ ಕಲ್ಲಡ್ಕ ಕೇಂದ್ರದಿಂದ ಸಂಗೀತ ಕಾರ್ಯಕ್ರಮ ನಡೆಯಿತು.
ಅಧ್ಯಕ್ಷತೆಯನ್ನು ಬಿ.ಕೆ.ರಾಜ್ ನಂದಾವರ ವಹಿಸಿದ್ದರು. ಮುಖ್ಯಅತಿಥಿಗಳಾಗಿ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಉದ್ಯಮಿ ರಾಜೇಂದ್ರ ಹೊಳ್ಳ ಭಾಗವಹಿಸಿದರು. ಗೌರವ ಅಧ್ಯಕ್ಷ ನಾಗೇಶ್ ಸ್ವಾಗತಿಸಿದರು ಯುವಕ ಮಂಡಲ ಅಧ್ಯಕ್ಷ ಧನುಷ್ ವಂದಿಸಿದರು. ಗೋಪಾಲ ಬಲ್ಯಾಯ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿದರು.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…