www.bantwalnews.com Editor: Harish Mambady
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಉದ್ಯಮಿ ಹಾಗೂ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಆಡಳಿತ ಸಮಿತಿ ಸದಸ್ಯ ಜಗನ್ನಾಥ ಚೌಟ, ಆಧುನಿಕ ತಂತ್ರಜ್ಞಾನಕ್ಕೆ ದಾಸರಾಗಿರುವ ಮಕ್ಕಳನ್ನು ಮಾನವೀಯ ಸಂಬಂಧಗಳನ್ನು ಬೆಸೆಯುವ ಕೌಟುಂಬಿಕ ವಾತಾವರಣಕ್ಕೆ ತರಲು ಪೂರಕ ವಾತಾವರಣ ಸೃಷ್ಟಿಯಾಗಬೇಕು. ಜೇಸಿಯಂಥ ಸಂಸ್ಥೆಗಳು ಇದಕ್ಕೆ ಸಹಕಾರಿಯಾಗಲಿ ಎಂದು ಆಶಿಸಿದರು.
ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೆ.ಕೃಷ್ಣಕುಮಾರ್ ಪೂಂಜ ಅವರನ್ನು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಿನ್ನೆಲೆಯಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭ ಮಾತನಾಡಿದ ಪೂಂಜ, ಸೇವಾಕಾರ್ಯಗಳನ್ನು ನಡೆಸುವ ಸಂದರ್ಭ ಎದುರಾದ ಪ್ರಸಂಗಗಳನ್ನು ವಿವರಿಸಿ, ಸ್ವಯಂಸೇವಾ ಸಂಸ್ಥೆಗಳು ಕತ್ತಲಲ್ಲಿದ್ದವರನ್ನು ಬೆಳಕಿನೆಡೆಗೆ ಕೊಂಡೊಯ್ಯಲು ಮಾರ್ಗದರ್ಶಿಯಾಗಲಿ ಎಂದು ಹಾರೈಸಿದರು.
ಪದಗ್ರಹಣ ಅಧಿಕಾರಿಯಾಗಿ ಭಾಗವಹಿಸಿದ ಜೇಸಿ ವಲಯ ಹದಿನೈದರ ಎಫ್ ವಿಭಾಗದ ವಲಯ ಉಪಾಧ್ಯಕ್ಷ ದಾಮೋದರ ಪಾಟಾಳಿ ಮಾತನಾಡಿ, ಜೇಸಿಯಂಥ ಸಂಸ್ಥೆಗಳು ವ್ಯಕ್ತಿತ್ವ ವಿಕಸನದ ಜೊತೆಗೆ ಸಾಮಾಜಿಕ ಬದುಕಿನಲ್ಲಿ ಉನ್ನತ ಗೌರವವನ್ನೂ ನೀಡುತ್ತದೆ ಎಂದರು. ಈ ಸಂದರ್ಭ 9 ಸದಸ್ಯರನ್ನು ಸೇರ್ಪಡೆಗೊಳಿಸಲಾಯಿತು.
ಜೇಸಿ ಸಾಮ್ರಾಟ್ ಮಂಗಳೂರಿನ ಪೂರ್ವಾಧ್ಯಕ್ಷ ಹಾಗೂ ಜೋಡುಮಾರ್ಗ ಜೇಸಿ ಪ್ರವರ್ತಿಸಿದ ಘಟಕಾಧ್ಯಕ್ಷರಾಗಿದ್ದ ರಾಘವೇಂದ್ರ ಹೊಳ್ಳ ಮಾತನಾಡಿ, ಜೇಸಿ ಆಂದೋಲನದಲ್ಲಿ ಯುವಜನರ ಸೇರ್ಪಡೆ ಇಂದಿನ ಅಗತ್ಯ ಎಂದರು.
ನಿರ್ಗಮನ ಅಧ್ಯಕ್ಷೆ ಸವಿತಾ ನಿರ್ಮಲ್ ಅವರು ನೂತನ ಅಧ್ಯಕ್ಷ ಹರ್ಷರಾಜ್ ಸಿ. ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಜೇಸಿರೇಟ್ ಅಧ್ಯಕ್ಷೆ ಗಾಯತ್ರಿ ಲೋಕೇಶ್ ನೂತನ ಅಧ್ಯಕ್ಷೆ ಅಮಿತಾ ಹರ್ಷರಾಜ್ ಅವರಿಗೆ ಹಾಗೂ ಜ್ಯೂನಿಯರ್ ಜೇಸಿ ಅಧ್ಯಕ್ಷೆ ದಿವ್ಯಾ ನೂತನ ಅಧ್ಯಕ್ಷ ರೋನಿತ್ ಬಿ.ಜಿ. ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ಉಪಾಧ್ಯಕ್ಷರಾಗಿ ಹರಿಪ್ರಸಾದ್ ಕುಲಾಲ್, ಧೀರಜ್ ಎಚ್, ಶನ್ಫತ್ ಶರೀಫ್, ಜಯರಾಜ್ ಎಸ್. ಬಂಗೇರ, ಗಾಯತ್ರಿ ಲೋಕೇಶ್, ಜೇಸಿ ಕಾರ್ಯದರ್ಶಿಯಾಗಿ ರವೀಂದ್ರ ಕುಕ್ಕಾಜೆ, ಜತೆಕಾರ್ಯದರ್ಶಿಯಾಗಿ ಸಚಿನ್, ಕೋಶಾಧಿಕಾರಿಯಾಗಿ ಹರಿಶ್ಚಂದ್ರ ಆಳ್ವ, ಜೇಸಿರೇಟ್ ಕಾರ್ಯದರ್ಶಿಯಾಗಿ ಮಲ್ಲಿಕಾ ಆಳ್ವ, ಜೇಸಿ ನಿರ್ದೇಶಕರಾಗಿ ಅಬ್ದುಲ್ ಸತ್ತಾರ್, ಸುಮನಾ ವಿ.ಎಸ್, ಸುಧಾಕರ ವೈ, ವೈಶಾಖ್, ಆಶಿಕ್ ಕುಕ್ಕಾಜೆ ಅಧಿಕಾರ ಸ್ವೀಕರಿಸಿದರು. ಜೇಸಿ ಪೂರ್ವಾಧ್ಯಕ್ಷ ಬಿ.ರಾಮಚಂದ್ರ ರಾವ್ ಅತಿಥಿಗಳನ್ನು ಸ್ವಾಗತಿಸಿದರು. ಸವಿತಾ ನಿರ್ಮಲ್ ಮತ್ತು ಹರ್ಷರಾಜ್ ಸಿ. ಕಾರ್ಯಕ್ರಮ ನಿರೂಪಿಸಿದರು. ನೂತನ ಕಾರ್ಯದರ್ಶಿ ರವೀ:ಂದ್ರ ಕುಕ್ಕಾಜೆ ವಂದಿಸಿದರು