ಬಂಟ್ವಾಳ

ಕತ್ತರಿ ಕೆಲಸ ಮಾಡುವ ಜನರ ಮಧ್ಯೆ ಪ್ರೀತಿ ವಿಶ್ವಾಸ ಪೋಣಿಸುವ ಸೂಜಿಯಾಗಿ: ಶ್ರೀ ಬಸವಲಿಂಗಮೂರ್ತಿ ಸ್ವಾಮೀಜಿ

ಬಂಟ್ವಾಳ: ಕತ್ತರಿ ಕೆಲಸ ಮಾಡುವ ಜನರ ಮಧ್ಯೆ ಪ್ರೀತಿ ವಿಶ್ವಾಸ ಪೋಣಿಸುವ ಸೂಜಿಯಾಗಿ ಎಂದು ಮೈಸೂರು ಬಸವಧ್ಯಾನ ಮಂದಿರ ಶ್ರೀ ಬಸವಲಿಂಗಮೂರ್ತಿ ಸ್ವಾಮೀಜಿ ಹೇಳಿದರು.

ದಫ್ ಎಸೋಸಿಯೇಶನ್ ದ.ಕ. ಮತ್ತು ಉಡುಪಿ ಜಿಲ್ಲೆ ಇದರ ದಶಮಾನೋತ್ಸವ ಹಾಗೂ ಕರಾವಳಿ ಟೈಮ್ಸ್ ಪಾಕ್ಷಿಕ ಇದರ ನಾಲ್ಕನೇ ವಾರ್ಷಿಕೋತ್ಸವದ ಪ್ರಯುಕ್ತ ಪಾಣೆಮಂಗಳೂರು-ಆಲಡ್ಕ ಮೈದಾನದ ಮರ್‌ಹೂಂ ಕೆ.ಎಂ. ಇಕ್ಬಾಲ್ ಮಾಸ್ಟರ್ ವೇದಿಕೆಯಲ್ಲಿ ನಡೆದ ದಫ್ ಸ್ಪರ್ಧೆ, ನಅತೇ ಶರೀಫ್, ಸೌಹಾರ್ದ ಸಂಗಮ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಹಿರಿಯರು, ಮುತ್ಸದ್ದಿಗಳು, ಜ್ಞಾನವಂತರು ಕೂಡಾ ಪತ್ರಿಕೆಗಳನ್ನು ಓದುವ ಮೂಲಕ ತಮ್ಮ ಜ್ಞಾನವನ್ನು ವೃದ್ದಿಸಿಕೊಂಡು ಉತ್ತಮ ಮಾರ್ಗದಲ್ಲಿ ನಡೆಯಲು ಪ್ರಯತ್ನಿಸುತ್ತಿದ್ದರು. ಹಿರಿಯ ಸ್ವಾಮೀಜಿಗಳಾದ ಶ್ರೀ ಸಿದ್ದಗಂಗಾ ಸ್ವಾಮೀಜಿಯವರು ತಮಗೆ 112 ವರ್ಷ ಪ್ರಾಯವಾದಾಗಲೂ ಬೆಳಿಗ್ಗಿನ ತಮ್ಮ ಪೂಜೆ ಮುಗಿಸಿ ಪ್ರಥಮವಾಗಿ ಪತ್ರಿಕೆಗಳನ್ನು ತರಿಸಿ ಓದುವ ಮೂಲಕ ತಮ್ಮ ಜ್ಞಾನಕ್ಕೆ ಸಾಣೆ ಹಿಡಿಯುತ್ತಿದ್ದರುಸಮಾಜದಲ್ಲಿ ಇಂದು ಜಾತಿ-ಧರ್ಮಗಳ ಮಧ್ಯೆ ವಿಷದ ಬೀಜ ಬಿತ್ತಿ ಜನರನ್ನು ಪರಸ್ಪರ ವಿಭಜಿಸುವ ಮೂಲಕ ಕತ್ತರಿ ಕೆಲಸ ಮಾಡುವ ಜನರ ನಡುವೆ ಪ್ರೀತಿ-ವಿಶ್ವಾಸವನ್ನು ನೀಡಿ ಒಡೆದ ಸಮಾಜವನ್ನು ಒಂದುಗೂಡಿಸುವ ಸೂಜಿ ಕೆಲಸವನ್ನು ಮಾಡಿ ಬದುಕಿದಾಗ ಜೀವನ ಧನ್ಯವಾಗಲಿದೆ ಎಂದರು.

ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಮುದರ್ರಿಸ್ ಹಾಜಿ ಬಿ.ಎಚ್. ಅಬೂಸ್ವಾಲಿಹ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದರು. ಸೂಫಿ ಹಾಗೂ ಶರಣ ಸಂತರ ಸೇವಾ ಸಮಿತಿ ರಾಜ್ಯಾಧ್ಯಕ್ಷ ಖ್ವಾಜಾ ಅಝೀಂ ಅಲಿ ಶಾ ಚಿಶ್ತಿ ಉದ್ಘಾಟಿಸಿದರು. ಮಾಜಿ ಸಚಿವ ಬಿ. ರಮಾನಾಥ ರೈ ಸಾಧಕರನ್ನು ಸನ್ಮಾನಿಸಿದರು.

ಬೆಳ್ಮ ಜುಮಾ ಮಸೀದಿ ಖತೀಬ್ ಹಾಜಿ ಎನ್.ಎಚ್. ಆದಂ ಫೈಝಿ, ಜಿ.ಪಂ. ಸದಸ್ಯರುಗಳಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಎಂ.ಎಸ್. ಮುಹಮ್ಮದ್, ಮಾಜಿ ಸದಸ್ಯ ಉಮರ್ ಫಾರೂಕ್ ಫರಂಗಿಪೇಟೆ, ಪುದು ಗ್ರಾ.ಪಂ. ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಸದಸ್ಯ ಹಾಶೀರ್ ಪೇರಿಮಾರ್, ಗೇರು ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಹಾಜಿ ಬಿ.ಎಚ್. ಖಾದರ್, ಸಜಿಪಮುನ್ನೂರು ಗ್ರಾ.ಪಂ. ಸದಸ್ಯ ಯೂಸುಫ್ ಕರಂದಾಡಿ, ಬಂಟ್ವಾಳ ಸಾರಿಗೆ ಕಛೇರಿಯ ಹಿರಿಯ ಮೋಟಾರು ನಿರೀಕ್ಷಕ ಚರಣ್, ತುಂಬೆ ಗ್ರಾ.ಪಂ. ಸದಸ್ಯ ಮುಹಮ್ಮದ್ ವಳವೂರು, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಮಾಣಿ, ಮಾಜಿ ಅಧ್ಯಕ್ಷ ಬಿ.ಎಂ. ಅಬ್ಬಾಸ್ ಅಲಿ, ಹಿದಾಯ ಫೌಂಡೇಶನ್ ಸಂಚಾಲಕ ಹಾಜಿ ಜಿ. ಮುಹಮ್ಮದ್ ಹನೀಫ್ ಗೋಳ್ತಮಜಲು, ಆನಿಯಾ ದರ್ಬಾರ್ ಮಾಲಕ ಹಂಝ ಬಸ್ತಿಕೋಡಿ, ಜಿಲ್ಲಾ ವಕ್ಫ್ ಸಲಹಾ ಸಮಿತಿ ಮಾಜಿ ಉಪಾಧ್ಯಕ್ಷ ಎಸ್. ಅಬೂಬಕ್ಕರ್ ಸಜಿಪ, ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸುದೇಶ್ ಕುಮಾರ್, ಬಂಟ್ವಾಳ ಘಟಕಾಧ್ಯಕ್ಷ ಫಾರೂಕ್ ಬಂಟ್ವಾಳ, ಬಂಟ್ವಾಳ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಮಾಂಬಾಡಿ, ಮೆಸ್ಕಾಂ ಸಲಹಾ ಸಮಿತಿ ಮಾಜಿ ಸದಸ್ಯ ವೆಂಕಪ್ಪ ಪೂಜಾರಿ, ಬಂಟ್ವಾಳ ಪುರಸಭಾ ಮಾಜಿ ಸದಸ್ಯ ಹಾಜಿ ಪಿ. ಮುಹಮ್ಮದ್ ರಫೀಕ್, ಆಲಡ್ಕ ಎಂಜೆಎಂ ಅಧ್ಯಕ್ಷ ಅಬೂಬಕ್ಕರ್ ತ್ರೀಮೆನ್ಸ್, ಉದ್ಯಮಿಗಳಾದ ದಾವೂದ್ ನಂದಾವರ, ಮುಹಮ್ಮದ್ ಹನೀಫ್ ಬೋಳಂಗಡಿ, ಹನೀಫ್ ಹಾಸ್ಕೋ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ನಂದಾವರ, ಗೂಡಿನಬಳಿ ಎಸ್ಕೆಎಸ್ಸೆಸ್ಸೆಫ್ ಅಧ್ಯಕ್ಷ ಲತೀಫ್ ಖಾನ್ ಗೂಡಿನಬಳಿ, ಕೆಪಿಸಿಸಿ ಕಾರ್ಮಿಕ ವಿಭಾಗದ ಕಾರ್ಯದರ್ಶಿ ಹನೀಫ್ ಬಗ್ಗುಮೂಲೆ, ಪ್ರಕಾಶ್ ಮೆಲ್ಕಾರ್, ಕರಾವಳಿ ಟೈಮ್ಸ್ ಉಪ ಸಂಪಾದಕ ಯು. ಮುಸ್ತಫಾ, ಪ್ರತಿನಿಧಿ ಅನ್ವರ್ ಹುಸೈನ್ ನಂದಾವರ ಮೊದಲಾದವರು ಭಾಗವಹಿಸಿದ್ದರು.

ಇತ್ತೀಚೆಗೆ ನಿಧನರಾದ ಸಮಸ್ತ ಉಪಾಧ್ಯಕ್ಷ ಮರ್‌ಹೂಂ ಶೈಖುನಾ ಮಿತ್ತಬೈಲು ಸಹಿತ ಮಿತ್ತಬೈಲ್ ಉಸ್ತಾದರ ಪುತ್ರ ಇರ್ಶಾದ್ ದಾರಿಮಿ ಅಲ್-ಜಝರಿ ಅವರು ಅನುಸ್ಮರಣಾ ಪ್ರಾರ್ಥನೆ ನೆರವೇರಿಸಿದರು. ಗಾಯಕರಾದ ಮಾಸ್ಟರ್ ಉಮರ್ ಸ್ವಲಾಹುದ್ದೀನ್ ದೆಂಜಿಪ್ಪಾಡಿ-ಪಾಣೆಮಂಗಳೂರು, ಹಾಫಿಝ್ ಮುಹಮ್ಮದ್ ಮುಝಮ್ಮಿಲ್ ಮೈಸೂರು ಹಾಗೂ ಖ್ವಾಜಾ ಮೌದೂದ್ ಅಲಿ ಮೈಸೂರು ಅವರಿಂದ ನಅತೇ ಶರೀಫ್ ಆಲಾಪನೆ ನಡೆಯಿತು. ದಫ್ ಉಸ್ತಾದರು ಹಾಗೂ ಪೋಷಕರಾದ ಎನ್.ಕೆ. ಕಾಸಿಂ ನೇರಳಕಟ್ಟೆ, ಹಸೈನಾರ್ ಕಡಂಬು, ಇಬ್ರಾಹಿಂ ಕಡಂಬು, ಇಬ್ರಾಹಿಂ ಕೋಟ-ಕುಂದಾಪುರ, ರಫೀಕ್ ಮುಸ್ಲಿಯಾರ್, ಅಬ್ದುಲ್ ಅಝೀಝ್ ಬೊಳ್ಳಾಯಿ, ಅಬ್ದುಲ್ ರಝಾಕ್ ಸಜಿಪ, ಫಾರೂಕ್ ಪರ್ಲಿಯಾ ಹಾಗೂ ದಫ್ ಎಸೋಸಿಯೇಶನ್ ಸ್ಥಾಪಕ ಕಾರ್ಯದರ್ಶಿ ಆರ್.ಕೆ. ಮದನಿ ಅಮ್ಮೆಂಬಳ ಅವರನ್ನು ಸನ್ಮಾನಿಸಲಾಯಿತು. ವಿವಿಧ ಕ್ಷೇತ್ರದ ಸಾಧಕರಾದ ಹಾಜಿ ಸುಲೈಮಾನ್ ಸಿಂಗಾರಿ ನಾರ್ಶ, ಹಾಜಿ ಕೆ.ಎಸ್. ಅಬೂಬಕ್ಕರ್ ಪಲ್ಲಮಜಲು, ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ ಹಾಗೂ ಕಾರ್ಯಕ್ರಮದ ಯಶಸ್ಸಿನಲ್ಲಿ ಪಾಲುದಾರರಾದ ಮುಹಮ್ಮದ್ ರಫೀಕ್ ಡ್ರೈವರ್, ಹಮೀದ್ ಅಲಿ ಕುಕ್ಕಾಜೆ ಅವರನ್ನು ಗೌರವಿಸಲಾಯಿತು.

ಕರಾವಳಿ ಟೈಮ್ಸ್ ಪ್ರಧಾನ ಸಂಪಾದಕ ಪಿ.ಎಂ. ಅಶ್ರಫ್ ಪಾಣೆಮಂಗಳೂರು ಸ್ವಾಗತಿಸಿ, ದಫ್ ಎಸೋಸಿಯೇಶನ್ ಅಧ್ಯಕ್ಷ ಲತೀಫ್ ನೇರಳಕಟ್ಟೆ ಪ್ರಸ್ತಾವನೆಗೈದರು. ಉಪಾಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ ವಂದಿಸಿದರು. ಸದಸ್ಯ ಅಬ್ದುಲ್ ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.

ಮಣಿಪುರ ತಂಡಕ್ಕೆ ದಫ್ ಪ್ರಶಸ್ತಿ:

16 ತಂಡಗಳು ಭಾಗವಹಿಸಿದ್ದ ದಫ್ ಸ್ಪರ್ಧಾ ಕೂಟದಲ್ಲಿ ಕಟಪಾಡಿ-ಮಣಿಪುರದ ಖಲಂದರ್ ಷಾ ದಫ್ ತಂಡ ಪ್ರಥಮ ಸ್ಥಾನವನ್ನು ಪಡೆದುಕೊಂಡರೆ, ಪುತ್ತೂರು-ಪರ್ಲಡ್ಕದ ಹಯಾತುಲ್ ಇಸ್ಲಾಂ ದಫ್ ತಂಡ ದ್ವಿತೀಯ ಹಾಗೂ ಕೂಳೂರು-ಪಂಜಿಮೊಗರಿನ ರಿಫಾಯಿಯ ದಫ್ ತಂಡ ತೃತೀಯ ಸ್ಥಾನವನ್ನು ಪಡೆದುಕೊಂಡಿತು. ಸ್ಪರ್ಧಾ ಕಾರ್ಯಕ್ರಮದ ತೀರ್ಪುಗಾರರಾಗಿ ಬಶೀರ್ ರೆಂಗೇಲು, ಶಹೀದ್ ಬಿ.ಸಿ.ರೋಡ್, ಇರ್ಶಾದ್ ನೆಹರುನಗರ ಕಾರ್ಯನಿರ್ವಹಿಸಿದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts