ಮಂಗಳೂರು : ಹೈ-ಫ್ಲೈಯರ‍್ಸ್ ಸ್ಕೇಟಿಂಗ್ ಕ್ಲಬ್(ರಿ)ಮಂಗಳೂರು ಹಾಗೂ ಫ್ರಾನ್ಸಿಸ್ ಡೋರಿಸ್ ಸ್ಕೇಟಿಂಗ್ ಸಿಟಿ ಅಶೋಕ್‌ನಗರ ಇದರ ಜಂಟಿ ಆಶ್ರಯದಲ್ಲಿ ಆಯೋಜಿಸಿದ ಜಿಲ್ಲಾ ಮಟ್ಟದ ಅಂತರ್ ಶಾಲಾ “ಸೆಕೆಂಡ್ ರೋಲ್” ಸ್ಕೇಟಿಂಗ್ ಚಾಂಪಿಯನ್ ಶಿಪ್ ಭಾನುವಾರ ನಡೆಯಿತು.
ಅಶೋಕನಗರದಲ್ಲಿರುವ ಫ್ರಾನ್ಸಿಸ್ ಡೋರಿಸ್ ಸ್ಕೇಟಿಂಗ್ ಸಿಟಿಯಲ್ಲಿ ನಡೆದ ಈ ಚಾಂಪಿಯನ್ ಶಿಫ್‌ನ್ನು ಉದ್ಯಮಿ ಫ್ರಾನ್ಸಿಸ್ ಕೊನ್ಸೆಸೋ ಉದ್ಘಾಟಿಸಿದರು.ಈ ಚಾಂಪಿಯನ್ ಶಿಫ್‌ನಲ್ಲಿ ಜಿಲ್ಲೆಯ ೩೩ ಶಾಲೆಯ ೨೨೩ ವಿದ್ಯಾರ್ಥಿಗಳು ಸ್ಪರ್ಧಾಳುಗಳಾಗಿ ಭಾಗವಹಿಸಿದರು.
ಬಾಲಕರ ಹಾಗೂ ಬಾಲಕಿಯರು ಪ್ರತ್ಯೇಕ ವಿಭಾಗದಲ್ಲಿ ನಾಲ್ಕು ವರ್ಷದಿಂದ ಹದಿನಾಲ್ಕು ವರ್ಷದೊಳಗಿನ ಸ್ಪರ್ಧಾಳುಗಳು ಭಾಗವಹಿಸಿದ್ದು,ಸ್ಕೇಟಿಂಗ್‌ನ ವಿವಿಧ ವಿಭಾಗಳಾದ ಟೆನಸಿಟಿ, ಕ್ವಾಡ್, ಟೋಯ್ ಇನ್‌ಲೈನ್ ಹಾಗೂ ಪ್ರೊಫೆಷನಲ್ ಇನ್‌ಲೈನ್ ಸ್ಪರ್ಧೆ ನಡೆಯಿತು.ಸ್ಪರ್ಧೆಯಲ್ಲಿ ಓವರಲ್ ಚಾಂಪಿಯನ್ ಆಗಿ ನೀರುಮಾರ್ಗದ ಕೇಂಬ್ರೀಜ್ಡ್ ಶಾಲೆ ಹಾಗೂ ರನ್ನರ‍್ಸ್ ಆಫ್ ಆಗಿ ಬಿಜೈ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್ ಸ್ಥಾನ ಪಡೆಯಿತು .
ಸಮಾರೋಪ ಸಮಾರಂಭದಲ್ಲಿ ಹೈಫ್ಲೈಯರ‍್ಸ್ ಸ್ಕೇಟಿಂಗ್ ಕ್ಲಬ್‌ನ ಅಧ್ಯಕ್ಷರಾದ ಜಯರಾಜ್ ಹಾಗೂ ಎಫ್.ಡಿ.ಸ್ಕೇಟ್‌ಸಿಟಿಯ ಅಧ್ಯಕ್ಷರಾದ ಡೋರಿಸ್ ಕೊನ್ಸೆಸೋ ವಿಜೇತ ಸ್ಕೇಟರ್‌ಗಳಿಗೆ ಬಹುಮಾನ ವಿತರಿಸಿದರು.