ಮಾಣಿ ವರದಿ: ಮಾಣಿ ಶ್ರೀ ಉಳ್ಳಾಲ್ತಿ ಅಮ್ಮನವರ ಪ್ರತಿಷ್ಠಾ ದಿನದ ಆಚರಣೆ ಅಂಗವಾಗಿ ಜನವರಿ 20ರಂದು ಸಂಜೆ 6 ಗಂಟೆಗೆ ಮಾಣಿ ಗಾಂಧಿ ಮೈದಾನದಲ್ಲಿ ಶ್ರೀ ಉಳ್ಳಾಲ್ತಿ ಯಕ್ಷಗಾನ ಸೇವಾ ಸಮಿತಿಯ ವತಿಯಿಂದ ದೇಂತಡ್ಕ ಶ್ರೀ ವನದುರ್ಗಾ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಕಲಾವಿದರು ಮೇಧಿನಿ ನಿರ್ಮಾಣ – ಮಹಿಷ ವಧೆ ಎಂಬ ಪೌರಾಣಿಕ ಕಥಾಭಾಗವನ್ನು ಯಕ್ಷಗಾನ ಬಯಲಾಟವಾಗಿ ಆಡಿ ತೋರಿಸಲಿರುವರು. ಈ ಕಾರ್ಯಕ್ರಮಕ್ಕೆ ಯಕ್ಷಗಾನ ಕಲಾಭಿಮಾನಿಗಳಿಗೆ, ಕಲಾಪೋಷಕರಿಗೆ ಹಾಗೂ ಕಲಾಬಂಧುಗಳಿಗೆ ಆದರದ ಸ್ವಾಗತವನ್ನು ಮಾಣಿ ಶ್ರೀ ಉಳ್ಳಾಲ್ತಿ ಯಕ್ಷಗಾನ ಸೇವಾ ಸಮಿತಿಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಕೋರಿ, ಕಾರ್ಯಕ್ರಮ ಚಂದಗಾಣಿಸಿ ಕೊಡಬೇಕೆಂದು ವಿನಂತಿಸಿದ್ದಾರೆ.
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)