www.bantwalnews.com Editor: Harish Mambady
ವಿಟ್ಲ ವರದಿ: ವಿಠಲ ಪ್ರೌಢ ಶಾಲೆ, ವಿಠಲ ಪದವಿಪೂರ್ವ ಕಾಲೇಜು, ವಿಠಲ ಸುಪ್ರಜಿತ್ ಐಟಿಐ ನ ಹಿರಿಯ ವಿದ್ಯಾರ್ಥಿಗಳು, ತಮ್ಮ ಬದುಕು ರೂಪಿಸಿದ ನಿವೃತ್ತ ಶಿಕ್ಷಕ, ಶಿಕ್ಷಕೇತರ ಉಪಸ್ಥಿತಿಯಲ್ಲಿ ದಿನಾಪೂರ್ತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ವಿಟ್ಲ ಅರಮನೆಯ ರವಿವರ್ಮ ಕೃಷ್ಣರಾಜರು ಸುಮಾರು 5 ಎಕರೆಯಷ್ಟು ಸ್ಥಳದಾನ ಮಾಡಿದ್ದರು. ಅವರ ಅಧ್ಯಕ್ಷತೆಯಲ್ಲಿ ವಿಠಲ ವಿದ್ಯಾ ಸಂಘ ಆರಂಭಗೊಂಡಿತ್ತು. ದೇವಸ್ಯ ನಾರಾಯಣ ಭಟ್ಟರು ಸಂಚಾಲಕರಾಗಿ ಮುನ್ನಡೆಸಿದ್ದು, ಇವರಿಗೆ ಪ್ರೇರಕ ಶಕ್ತಿಯಾಗಿದ್ದ ಜಿಲ್ಲಾ ಸಹಕಾರಿ ಪಿತಾಮಹವೆನಿಸಿದ್ದ ಮೊಳಹಳ್ಳಿ ಶಿವರಾಯರು, ಪ್ರಥಮ ಮುಖ್ಯೋಪಾಧ್ಯಾಯರಾಗಿದ್ದ ಮಡಿಯಾಲ ನಾರಾಯಣ ಭಟ್ 1954 ರಲ್ಲಿ ಚೊಚ್ಚಲ ಎಸ್ಎಸ್ಎಲ್ಸಿ ತಂಡ ಹೊರ ತಂದಾಗಿನಿಂದ ವಿಠಲ ಹೈಸ್ಕೂಲ್ ಹಳೆ ವಿದ್ಯಾರ್ಥಿ ಸಂಘ ಹುಟ್ಟಿಕೊಂಡಿತ್ತು. ವಿಠಲ ಹೈಸ್ಕೂಲ್ನ ಹಳೆ ವಿದ್ಯಾರ್ಥಿ ಸಂಘದ ಪ್ರಥಮ ಅಧ್ಯಕ್ಷ, ಜಿಲ್ಲಾ ನಿವೃತ್ತ ನ್ಯಾಯಾಧೀಶ ಪದ್ಮನಾಭ ಕೆದಿಲಾಯ ಅವರ ಅಧ್ಯಕ್ಷತೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಸಕುಟುಂಬ ಮಿಲನ ಕಾರ್ಯಕ್ರಮ ಆಯೋಸಲಾಗಿದೆ. ಸದ್ಯ ಈ ಸಂಸ್ಥೆಯಲ್ಲಿ 1600 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕ್ರೀಡೆ ಸೇರಿದಂತೆ ವಿವಿಧ ಚಟುವಟಿಕೆಯಲ್ಲಿ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿಠಲ ವಿದ್ಯಾ ಸಂಘದ ಅಧ್ಯಕ್ಷ ಮುಗುಳಿ ತಿರುಮಲೇಶ್ವರ ಭಟ್, ಕಾಲೇಜು ಪ್ರಾಂಶುಪಾಲ ಆದರ್ಶ ಚೊಕ್ಕಾಡಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರವಿಪ್ರಕಾಶ್, ಸಂಚಲನ ಸಮಿತಿ ಗೌರವಾಧ್ಯಕ್ಷ ಎಚ್ ಸುಬ್ರಹ್ಮಣ್ಯ ಭಟ್, ಅಧ್ಯಕ್ಷ ರಾಧಾಕೃಷ್ಣ ನಾಯಕ್ ಉಪಸ್ಥಿತರಿದ್ದರು.