ಬಂಟ್ವಾಳ ವರದಿ: ಭಾರತೀಯ ಸಂಸ್ಕೃತಿಯನ್ನು ವಿದೇಶಿಯರು ಮೆಚ್ಚುವಂತೆ ಮಾಡಿದ ವೀರ ಸನ್ಯಾಸಿ ವಿವೇಕಾನಂದರು ನಮಗೆ ಆದರ್ಶರಾಗಬೇಕು ಮತ್ತು ಅವರ ಸಂದೇಶಗಳು ನಮ್ಮ ದಾರಿ ದೀಪಗಳಾಗಬೇಕು ಎಂದು ನರಿಕೊಂಬುವಿನ ವೈದ್ಯರಾದ ಡಾ. ಸುಬ್ರಹ್ಮಣ್ಯ ಭಟ್ ಹೇಳಿದರು.
ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪೌಢಶಾಲೆ ಶಂಭೂರು ಇಲ್ಲಿ ಅಳುಪ ಸಮಾಜ ವಿಜ್ಞಾನ ಸಂಘ, ಜೇಸಿಐ ಜೋಡುಮಾರ್ಗ ನೇತ್ರಾವತಿಯ ಯುವಜೇಸಿ ವಿಭಾಗ, ಇಂಟರ್‍ಯಾಕ್ಟ್ ಕ್ಲಬ್, ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ಆಶ್ರಯದಲ್ಲಿ ನಡೆದ ಯುವ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಭಾರತದ ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ಫೂರ್ತಿಯನ್ನು ನೀಡಿದ, ದೇಶದ ಬಗ್ಗೆ ಚಿಂತಿಸಿದವರು ವಿವೇಕಾನಂದರು ಎಂದು ಅವರು ತಿಳಿಸಿದರು.
ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಶಿಕ್ಷಕ ಕಮಲಾಕ್ಷ ಕಲ್ಲಡ್ಕ ವಹಿಸಿದ್ದರು. ಸಹಶಿಕ್ಷಕರಾದ ಸುಜಾತಾ, ಸದಾಶಿವ ನಾಯಕ್, ಜಿನ್ನಪ್ಪ ಜಾಲ್ಸೂರು, ಭಾರತಿ, ವರಮಹಾಲಕ್ಷ್ಮಿ, ವಿದ್ಯಾರ್ಥಿ ನಾಯಕ ಪವನ್ ರಾಜ್, ಅಳುಪ ಸಂಘದ ಅಧ್ಯಕ್ಷೆ ಪಾವನ ಉಪಸ್ಥಿತರಿದ್ದರು. ಶಾಲಾ ಶಿಕ್ಷಕ ಹಾಗೂ ಜೇಸಿ ಜೇಸಿಐ ಜೋಡುಮಾರ್ಗ ನೇತ್ರಾವತಿಯ ಉಪಾಧ್ಯಕ್ಷ ಜೇಸಿ ಹರಿಪ್ರಸಾದ್ ಕುಲಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಇಂಟರ್‍ಯಾಕ್ಟ್ ಅಧ್ಯಕ್ಷೆ ಶ್ರೀವಿದ್ಯಾ ಸ್ವಾಗತಿಸಿ, ಜೇಜೇಸಿ ಅಧ್ಯಕ್ಷ ರೋನಿತ್ ವಂದಿಸಿದರು. ಪ್ರತೀಕ್ಷಾ ಕಾರ್ಯಕ್ರಮ ನಿರೂಪಿಸಿದರು.