ಬಂಟ್ವಾಳ ವರದಿ: ಬಂಟ್ವಾಳ ಜೇಸಿ ಅಧ್ಯಕ್ಷರಾಗಿ ಯತೀಶ್ ಕರ್ಕೇರ ಆಯ್ಕೆಯಾಗಿದ್ದಾರೆ. ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ಶನಿವಾರ ಜನವರಿ 19ರಂದು ಪದಗ್ರಹಣ ಕಾರ್ಯ ನೆರವೇರಲಿದೆ.
ದಶಮ ವರ್ಷಾಚರಣೆಯ ಸಂಭ್ರಮದಲ್ಲಿರುವ ಬಂಟ್ವಾಳ ಜೇಸಿಐನ ನೂತನ ಅಧ್ಯಕ್ಷರಾಗಿ ಯುವ ಉದ್ಯಮಿ ಯತೀಶ್ ಕರ್ಕೇರಾ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಸಾಮಾನ್ಯ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ಕಾರ್ಯದರ್ಶಿಯಾಗಿ ಉಮೇಶ್ ಪೂಜಾರಿ, ಕೋಶಾಧಿಕಾರಿಯಾಗಿ ಗಣೇಶ್ ಕುಲಾಲ್ ಹಾಗೂ ವಿವಿಧ ವಿಭಾಗಗಳ ಉಪಾಧ್ಯಕ್ಷರುಗಳಾಗಿ ರಾಜೇಂದ್ರ ಕೆ., ಸದಾನಂದ ಬಂಗೇರ ಮೊಡಂಕಾಪು, ಉಮೇಶ್ ಆರ್.ಮೂಲ್ಯ, ವೆಂಕಟೇಶ್ ಕೃಷ್ಣಾಪುರ, ಮೋಹನ್ ನಿಟಿಲಾಪುರ ಆಯ್ಕೆಗೊಂಡರು.
ಜೇಸಿಐ ಬಂಟ್ವಾಳ ಇದರ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜ.19ರಂದು ಸಂಜೆ 6.30 ಕ್ಕೆ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಕೆನರಾ ಬ್ಯಾಂಕ್ ಮಂಗಳೂರು ಕೇಂದ್ರ ಕಚೇರಿಯ ವ್ಯವಸ್ಥಾಪಕ ರಮೇಶ್ ನಾಯಕ್, ಉದ್ಯಮಿ ಪ್ರಕಾಶ್ ಅಂಚನ್ ಹಾಗೂ ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಮಾಂಬಾಡಿ ಹಾಗೂ ಪದಗ್ರಹಣ ಅಧಿಕಾರಿಯಾಗಿ ವಲಯ 15ರ ವಲಯ ಉಪಾಧ್ಯಕ್ಷ ದಾಮೋದರ ಪಾಟಾಲಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭ ಜೇಸಿ ಬಂಟ್ವಾಳದ ದಶಮ ಸಂಭ್ರಮಕ್ಕೂ ಚಾಲನೆ ನೀಡುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…