ಕಲ್ಲಡ್ಕ

ಯುವಕರಿಗೆ ಸೈನ್ಯದ ಕುರಿತು ಅರಿವಿನ ಕೊರತೆ: ಕರ್ನಲ್ ಎಂ.ಎ.ರಾಜ್ ಮನ್ನಾರ್

www.bantwalnews.com

ಜಾಹೀರಾತು

ಕಲ್ಲಡ್ಕ ವರದಿ: ಯುವಜನತೆ ಭಾರತೀಯ ಸೇನೆಯ ಬಗ್ಗೆ ಸ್ಪಷ್ಟ ಕಲ್ಪನೆಯನ್ನು ಹೊಂದಿಲ್ಲ. ಇದಕ್ಕೆ ಕಾರಣ ಸರಿಯಾದ ಮಾಹಿತಿಯ ಕೊರತೆ. ಸೇನೆಯಲ್ಲಿ ಸಾಕಷ್ಟು ಅವಕಾಶಗಳು ಇವೆ ಎಂದು ಭಾರತೀಯ ಭೂಸೇನಾ ನೇಮಕಾತಿ ಅಧಿಕಾರಿ ಕರ್ನಲ್ ಎಮ್. . ರಾಜ್ ಮನ್ನಾರ್ ಹೇಳಿದರು.

ಶ್ರೀರಾಮ ಪದವಿ ಕಾಲೇಜಿನಲ್ಲಿ ಶ್ರೀರಾಮ ಉದ್ಯೋಗ ಮಾಹಿತಿ ಮತ್ತು ಮಿಲಿಟರಿ ಮಾರ್ಗದರ್ಶನ ಘಟಕ ಹಾಗೂ ಪ್ರಣವ ವಿದ್ಯಾರ್ಥಿ ಸಂಘ ಇದರ ಸಂಯುಕ್ತ ಆಶ್ರಯದಲ್ಲಿ ಮಿಲಿಟರಿ ಪಾರಿತೋಷಕ ಮತ್ತು ಪದಕಗಳ ಪ್ರದರ್ಶಿನಿ ಹಾಗೂ ಸಂವಾದ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಸೇನೆಯಲ್ಲಿರುವ ವಿಪುಲವಾದ ಅವಕಾಶಗಳು, ಸೌಲಭ್ಯಗಳು, ಸವಾಲುಗಳ ಬಗ್ಗೆ ವಿವರಿಸಿದ ಅವರು, ಸೇನೆಯಿಂದಾಗಿ ಶಿಸ್ತಿನ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬಹುದು ಎಂದರು.

ಕಾರ್ಯಕ್ರಮದಲ್ಲಿ ಸೇನಾ ನಿವೃತ್ತ ಕ್ಯಾಪ್ಟನ್ ಡಾ. ಕೆ. ಜಿ. ಶೆಣೈ ಮಾತನಾಡಿ, ಭಾರತದ ಉತ್ತರ ಭಾಗ ವಿದೇಶಿ ದಾಳಿಗೆ ಎದುರಾಗಿ ಜನಸಾಮಾನ್ಯರು ಭೀಕರ ಆಘಾತಗಳಿಗೆ ತುತ್ತಾಗಿದ್ದರು. ಕಾರಣದಿಂದ ದೇಶಕ್ಕೆ ಬರಬಹುದಾದ ಆಪತ್ತು ಕಷ್ಟ ನೋವು ಇವುಗಳಿಗೆ ಸ್ಪಂದಿಸುವ ಸ್ವಭಾವ ಹೆಚ್ಚಾಗಿ ಭಾಗದ ಜನರಲ್ಲಿ ಕಂಡು ಬರುತ್ತಿದೆ. ಯುವಜನತೆ ವಿದೇಶಿ ವ್ಯಾಮೋಹಕ್ಕೆ ಒಳಗಾಗದೇ  ಸೇನೆಗೆ ಸೇರುವ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದರು.

ಸಂದರ್ಭ ಅವರು 25 ವರ್ಷಗಳ ಸೇವಾ ಅವಧಿಯಲ್ಲಿ ಸಂಗ್ರಹಿಸಿದ ಸೇನಾ ಪದಕಗಳನ್ನು ಪ್ರದರ್ಶಿಸಿ, ಇದರ ಮುಖ್ಯ ಉದ್ದೇಶ ಯುವ ಜನರೊಂದಿಗೆ ಸೇರಿ ಭಾರತೀಯ ಸೇನೆಯ ಮಾಹಿತಿ ನೀಡಿ, ವಿದ್ಯಾರ್ಥಿಗಳಲ್ಲಿ ಸೇನಯ ಬಗ್ಗೆ ಅರಿವು ಮೂಡಿಸುವುದಾಗಿದೆ ಎಂದರು. ಭೂ ಸೇನಾ  ಕ್ಯಾಪ್ಟನ್ ಪರ್ಲ್ ಫಿಯಾನ ಫೆರ್ನಾಂಡಿಸ್, ರಾಷ್ಟ್ರ ಸೇವಿಕಾ ಸಮಿತಿಯ  ಕಾರ್ಯಕಾರಣಿ ಸದಸ್ಯೆ ಡಾ| ಕಮಲಾ ಪ್ರಭಾಕರ್ ಭಟ್, ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ, ಶ್ರೀರಾಮ ಮಿಲಿಟರಿ ಮಾರ್ಗದರ್ಶನ ಫಟಕದ ನಿರ್ದೇಶಕ ಶ್ರೀ ಪ್ರಕಾಶ್ ಕುಕ್ಕಿಲ, ಸುಬ್ರಾಯ ಪೈ, ರಾಧಾಕೃಷ್ಣ ಪೈ, ಫ್ರಾಂಕ್ಲಿನ್ ಮೊಂತೇರೋ ಹಾಗೂ ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ ಕಾಯರ್‌ಕಟ್ಟೆ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ತ್ರಿವೇಣಿ ನಿರೂಪಿಸಿ, ಹರ್ಷಿತ್ ಸ್ವಾಗತಿಸಿ, ಶ್ರೇಯಶ್ರೀ ವಂದಿಸಿದರು. ಪ್ರದರ್ಶಿನಿಯನ್ನು ಮೂರು ದಿನಗಳ ಕಾಲ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ವೀಕ್ಷಿಸುವ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ ಎಂದು ಮಾಹಿತಿ ನೀಡಲಾಯಿತು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.