ಬಂಟ್ವಾಳ

ಬಂಟ್ವಾಳ ತಾಲೂಕಿನ ಹಲವೆಡೆ ವಿಜಯಾ ಬ್ಯಾಂಕ್ ಎದುರು ಕಾಂಗ್ರೆಸ್ ಧರಣಿ

ಬಂಟ್ವಾಳನ್ಯೂಸ್ ವರದಿ:

ವಿಜಯಾ ಬ್ಯಾಂಕ್ ಜೊತೆ ಇತರ ಬ್ಯಾಂಕ್ ವಿಲೀನ ವಿರೋಧಿಸಿ ಸರಪಾಡಿಯ ಅಲ್ಲಿಪಾದೆಯಲ್ಲಿ ಬ್ಯಾಂಕ್ ಮುಂಭಾಗ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಯಿತು. ಪ್ರಮುಖರಾದ ನಾವೂರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗುಲಾಬಿ ಚಂದಪ್ಪ, ತಾಲೂಕು ಪಂಚಾಯತ್ ಸದಸ್ಯರಾದ ಸ್ವಪ್ನ ವಿಶ್ವನಾಥ್ ಪೂಜಾರಿ, ವಲಯ ಅಧ್ಯಕ್ಷರುಗಳಾದ ಆದಂ ಕುಂಞ, ಜಿಪಂ ಸದಸ್ಯ ಪದ್ಮಶೇಖರ್ ಜೈನ್, ದಯಾನಂದ ಶೆಟ್ಟಿ ಅಮೈ, ಪ್ರಮುಖರಾದ ಸಂಪತ್ ಕುಮಾರ್ ಶೆಟ್ಟಿ, ವಿನ್ಸೆಂಟ್ ಪಿಂಟೊ ,ಸುವರ್ಣ ಕುಮಾರ್ ಜೈನ್, ಶಿವಪ್ಪ ಪೂಜಾರಿ, ಅಸುಂತ ಮರಿಯ, ಶಿವರಾಮ್ ಆಳ್ವ, ಹುಸೈನ್ ಪೆರಿಯಪಾದೆ, ಡೆನ್ಜಿಲ್ ಅಲ್ಲಿಪಾದೆ, ನಾರಾಯಣ ಸಾಲಿಯಾನ್, ಫಾರುಕ್, ಪುವಪ್ಪ ಪೂಜಾರಿ, ಆಗ್ನೇಲ್ ಜೆರೋಮ್ ಮತ್ತಿತರರು ಉಪಸ್ಥಿತರಿದ್ದರು.

ಬಂಟ್ವಾಳ ವಿಜಯಾ ಬ್ಯಾಂಕ್ ಎದುರು ಬ್ಯಾಂಕ್ ವಿಲೀನ ಕುರಿತು ನಡೆದ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿದರು. ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪ್ರಮುಖರಾದ ವೆಂಕಪ್ಪ ಪೂಜಾರಿ, ಮಲ್ಲಿಕಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಬಿ.ಸಿ.ರೋಡ್ ವಿಜಯಾ ಬ್ಯಾಂಕ್ ಶಾಖೆ ಎದುರು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ವತಿಯಿಂದ ಬ್ಯಾಂಕ್ ವಿಲೀನ ವಿರೋಧಿಸಿ ಪ್ರತಿಭಟನೆ ನಡೆಯಿತು. ಈ ಸಂದರ್ಭ ಮಾಜಿ ಸಚಿವ ಬಿ.ರಮಾನಾಥ ರೈ, ಜಿಪಂ ಸದಸ್ಯ ಚಂದ್ರಪ್ರಕಾಶ ಶೆಟ್ಟಿ ತುಂಬೆ, ತಾಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಪ್ರಮುಖರಾದ ಸದಾಶಿವ ಬಂಗೇರ, ಲುಕ್ಮಾನ್, ಜಯಂತಿ ಪೂಜಾರಿ, ಜೆಸಿಂತ ಡಿಸೋಜ, ಮಧುಸೂಧನ ಶೆಣೈ, ಪ್ರಶಾಂತ್ ಕುಲಾಲ್,  ಚಿತ್ತರಂಜನ್ ಶೆಟ್ಟಿ, ಮತ್ತಿತರರಿದ್ದರು.

ಬ್ಯಾಂಕ್ ಆಫ್ ಬರೋಡದೊಂದಿಗೆ ವಿಜಯಾ ಬ್ಯಾಂಕ್ ನ್ನು ವಿಲೀನಗೊಳಿಸುವ ಕೇಂದ್ರ ಸರಕಾರದ ವಿರುದ್ಧ ಕರಾಳ ದಿನಾಚರಣೆ ಹಾಗೂ ಪ್ರತಿಭಟನೆ ಕಲ್ಲಡ್ಕ ವಿಜಯಾ ಬ್ಯಾಂಕ್ ಆವರಣದಲ್ಲಿ ನಡೆಯಿತು. ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ ಕೇಂದ್ರ ಸರಕಾರದ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ದೂರಿದರು. ಈ ಸಂದರ್ಭ ವಲಯಾಧ್ಯಕ್ಷ ದಿನೇಶ್ ಶೆಣೈ, ಎಪಿಎಂಸಿ ಉಪಾಧ್ಯಕ್ಷ ಚಂದ್ರಶೇಖರ ಪೂಜಾರಿ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ.ಇದಿನಬ್ಬ, ಪ್ರಮುಖರಾದ ಅಲ್ಬರ್ಟ್ ಮೆನೆಜಸ್, ಚಂದ್ರಶೇಖರ ರೈ ನಾರ್ಸ, ನಿಶಾಂತ್ ರೈ ವೀರಕಂಭ, ಗಣೇಶ್ ಶೆಟ್ಟಿ ಗೋಳ್ತಮಜಲು, ರಮೇಶ್ ನೆಟ್ಲ, ರಾಮಚಂದ್ರ ವೀರಕಂಭ, ಅಬೂಬಕ್ಕರ್ ಮುರಬೈಲು, ಭಟ್ಯಪ್ಪ ಶೆಟ್ಟಿ ನೆಟ್ಲ, ವಸಂತಿ, ಯೂಸುಫ್ ಕರಂದಾಡಿ ಆಯಿಷಾ, ಮಹಮ್ಮದ್ ಅಮ್ಟೂರು, ಪೂರ್ಣೀಮಾ ರಾವ್ ನೆಟ್ಲ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ