ಕಲ್ಲಡ್ಕ

ರಾಜ್ಯ ಸಬ್ ಜ್ಯೂನಿಯರ್ ಪವರ್ ಲಿಫ್ಟಿಂಗ್ ಸ್ಪರ್ಧೆಗಳ ಸಮಾರೋಪ

www.bantwalnews.comಸಂಪಾದಕ: ಹರೀಶ ಮಾಂಬಾಡಿ

ಮಾಣಿ: ಇಲ್ಲಿಯ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ಮಾಣಿ ಹಾಗೂ  ಶ್ರೀ ದುರ್ಗಾ ಜಿಮ್ನಾಶಿಯಂ ಮಾಣಿ ಜಂಟಿ ಆಶ್ರಯದಲ್ಲಿ  ಎರಡು ದಿನಗಳ ಕಾಲ ನಡೆದ ರಾಜ್ಯ ಸಬ್ ಜ್ಯೂನಿಯರ್ ಬಾಲಕ ಮತ್ತು ಬಾಲಕಿಯರ ಪವರ್ ಲಿಫ್ಟಿಂಗ್ ಸ್ಪರ್ಧೆಗಳ ಸಮಾರೋಪ ಸಮಾರಂಭವು ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಕರ್ನಾಟಕ ಪವರ್ ಲಿಪ್ಟಿಂಗ್ ಅಸೋಸಿಯೇಶನ್ ನ ಖಜಾಂಚಿ, ರಾಷ್ಟ್ರೀಯ ತೀರ್ಪುಗಾರರಾದ ಜಯರಾಮ್ ವ್ಯವಸ್ಥಿತ ಕಾರ್ಯಕ್ರಮಕ್ಕೆ ಸಹಯೋಗ ಅತ್ಯಗತ್ಯ. ಶಿಸ್ತುಬದ್ಧವಾಗಿ ನಡೆದ ಈ ಕ್ರೀಡಾಕೂಟವು ಮಾಣಿಯ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಿಸಬಹುದಾದಂತ ಯಶಸ್ವೀ ಕಾರ್ಯಕ್ರಮವಾಗಿ ಮೂಡಿಬಂತು ಎಂದರು.

ಮುಖ್ಯ ಅತಿಥಿಯಾಗಿದ್ದ ಮಾಣಿ ಕ್ಷೇತ್ರದ ತಾಲೂಕು ಪಂಚಾಯತ್ ಸದಸ್ಯೆ ಮಂಜುಳಾ ಕುಶಲ ಗೌಡ ಮಾತನಾಡಿ ಪವರ್ ಲಿಫ್ಟಿಂಗ್ ಸ್ಪರ್ಧೆಯನ್ನು ನೇರವಾಗಿ ನೋಡುವ ಅವಕಾಶ ಮಾಣಿಯ ಜನತೆಗೆ ದೊರೆಯಿತು. ಈ ಕ್ಷೇತ್ರದಲ್ಲಿ ಹೊಸದಾಗಿ ಪಾದಾರ್ಪಣೆ ಮಾಡಿರುವ ಪ್ರತಿಭೆಗಳಿಗೆ ಮುಂದಿನ ದಿನಗಳಲ್ಲಿ ಉತ್ತಮ ಸಾಧನೆಗೈಯಲು ಈ ಕ್ರೀಡಾಕೂಟ ಸ್ಫೂರ್ತಿಯಾಗಿದೆ ಎಂದರು.

ಇನ್ನೋರ್ವ ಮುಖ್ಯ ಅತಿಥಿಗಳಾದ, ಲಯನ್ಸ್ ಕ್ಲಬ್ ಮಾಣಿ ಸ್ಥಾಪಕ ನಿಯೋಜಿತ ಅಧ್ಯಕ್ಷರಾದ ಗಂಗಾಧರ ರೈ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಇಂತಹ ವಿಶಿಷ್ಟ ಕ್ರೀಡೆಗೆ ಅವಕಾಶ ದೊರೆತಿರುವುದು ಸಂತಸದ ವಿಷಯ. ಸರ್ವರ ಸಹಕಾರದಿಂದ ನಡೆದ ಈ ಕಾರ್ಯಕ್ರಮ ಅಭೂತಪೂರ್ವ ಯಶಸ್ಸು ಕಂಡಿತು. ಎಂದು ಹರ್ಷ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಆಯೋಜಕರೂ, ಶ್ರೀ ದುರ್ಗಾ ಜಿಮ್ನಾಶಿಯಂ ನ ಸ್ಥಾಪಕ ಅಧ್ಯಕ್ಷರೂ ಆದ ವಸಂತ ರೈ ಕಲ್ಲಾಜೆ ಮಾತನಾಡಿ ಪವರ್ ಲಿಫ್ಟಿಂಗ್ ಕುರಿತು ವಿದ್ಯಾರ್ಥಿಗಳಲ್ಲಿ ಆಸಕ್ತಿಯನ್ನು ಮೂಡಿಸಿ, ರಾಷ್ಟ್ರಮಟ್ಟದಲ್ಲೂ ಅವರು ಮಿಂಚುವಂತೆ ಮಾಡುವುದು ನಮ್ಮ ಗುರಿಯಾಗಿದ್ದು , ಆ ನಿಟ್ಟಿನಲ್ಲಿ ಈ ಕ್ರೀಡಾಕೂಟ ಪುಟ್ಟ ಹೆಜ್ಜೆಯಾಗಿದೆ ಎಂದರು.

ಈ ಸಂದರ್ಭದಲ್ಲಿ ಪವರ್ ಲಿಫ್ಟಿಂಗ್ ನ ದಾಖಲೆವೀರ, ರಾಜ್ಯ, ರಾಷ್ಟ್ರ ,ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ   ಹಲವಾರು  ಪ್ರಶಸ್ತಿ,ಪದಕಗಳ ಸರದಾರ, ಏಕಲವ್ಯ ಪ್ರಶಸ್ತಿ ವಿಜೇತ, ತರಬೇತುದಾರರೂ, ತೀರ್ಪುಗಾರರೂ ಆಗಿರುವ ಕರ್ನಾಟಕ ಪವರ್ ಲಿಫ್ಟಿಂಗ್ ಸಂಸ್ಥೆಯ ಗೌರವ ಕಾರ್ಯದರ್ಶಿಯಾಗಿರುವ ಶ್ರೀ ಸತೀಶ್ ಕುಮಾರ್ ಕುದ್ರೋಳಿ ಇವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಸನ್ಮಾನಿತಗೊಂಡಷ್ಟು ಜವಾಬ್ದಾರಿಗಳು ಹೆಚ್ಚುತ್ತದೆ. ಇಂದು ನಾನು ಸಾಧಿಸಿರುವ ಯಶಸ್ಸು ಪವರ್ ಲಿಫ್ಟಿಂಗ್ ಕ್ರೀಡೆಯ ಫಲ. ಈ ಕ್ರೀಡೆಯ ಕೀರ್ತಿಯನ್ನು ವಿಶ್ವದಾದ್ಯಂತ ಪಸರಿಸಲು ನಾವೆಲ್ಲರೂ ಶ್ರಮಿಸೋಣ ಎಂದು ಕ್ರೀಡಾಳುಗಳಿಗೆ ಸಂದೇಶವನ್ನಿತ್ತರು.

ಎರಡು ದಿನಗಳ ಕಾಲ ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಪದಕ ಹಾಗೂ ಪ್ರಶಸ್ತಿ ಪತ್ರವನ್ನು ಪ್ರಧಾನ ಮಾಡಲಾಯಿತು.

ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಮತಾ ಶೆಟ್ಟಿ ಕರ್ನಾಟಕ ಪವರ್ ಲಿಫ್ಟಿಂಗ್ ಅಸೋಸಿಯೇಶನ್ ನ ಉಪಾಧ್ಯಕ್ಷ ಪುರಂದರ ಕೂಳೂರು, ಜಿಲ್ಲಾ ಪವರ್ ಲಿಫ್ಟಿಂಗ್ ಅಸೋಸಿಯೇಶನ್ನ ನ ಕಾರ್ಯದರ್ಶಿ ಮಧುಚಂದ್ರ, ಬಾಲವಿಕಾಸ ಟ್ರಸ್ಟಿನ ಕಾರ್ಯದರ್ಶಿ ನಾರಾಯಣ ಶೆಟ್ಟಿ ಕೊಂಬಿಲ, ಟ್ರಸ್ಟಿ ಪುಷ್ಪರಾಜ ಹೆಗ್ಡೆ, ಆಡಳಿತಾಧಿಕಾರಿ ಸಿ ಶ್ರೀಧರ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ವೇದಿಕೆಯಲ್ಲಿಉಪಸ್ಥಿತರಿದ್ದರು.

ಸಂಚಾಲಕರಾದ ಪ್ರಹ್ಲಾದ್ ಜೆ. ಶೆಟ್ಟಿ ಸ್ವಾಗತಿಸಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮೀ. ವಿ ಶೆಟ್ಟಿ ವಂದಿಸಿದರು. ಶಿಕ್ಷಕಿಯರಾದ ಲೀಲಾ, ರೀಟಾ ಕಾರ್ಯಕ್ರಮ ನಿರೂಪಿಸಿದರು.

ರಾಜ್ಯ ಸಬ್ ಜ್ಯೂನಿಯರ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ 2019- ಫಲಿತಾಂಶದ ವಿವರ.

ಬಾಲಕರ ವಿಭಾಗ: 53 ಕೆಜಿ. ವಿಭಾಗದ  ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಆಳ್ವಾಸ್ ಕಾಲೇಜು ಮೂಡಬಿದಿರೆಯ ಚಿರಂಜೀವ್, ದ್ವಿತೀಯ ಸ್ಥಾನವನ್ನು ಬಾಲಾಂಜನೇಯ  ಜಿಮ್ ಮಂಗಳೂರಿನ ಆದಿತ್ಯ ಎಸ್.ಡಿ ಹಾಗೂ ತೃತೀಯ ಸ್ಥಾನವನ್ನು ಶಿವಮೊಗ್ಗ ಜಿಲ್ಲೆಯ ಚಂದನ್ ಎ ಪಡೆದುಕೊಂಡರು.

59 ಕೆ.ಜಿ ವಿಭಾಗದಲ್ಲಿ ಪ್ರಜ್ವಲ್ ವೀರಮಾರುತಿ ಜಿಮ್ನಾಶಿಯಂ ಸಾಲಿಗ್ರಾಮ ಪ್ರಥಮ ಸ್ಥಾನವನ್ನು , ಕೀರ್ತಿರಾಜ್ ಬಾಲಾಂಜನೇಯ ಜಿಮ್ ಮಂಗಳೂರು ಇವರು ದ್ವಿತೀಯ ಸ್ಥಾನವನ್ನು, ಪ್ರಜ್ವಲ್ ಕೆ. ವೀರಮಾರುತಿ ಜಿಮ್ನಾಶಿಯಂ ಸಾಲಿಗ್ರಾಮ ಇವರು ತೃತೀಯ ಸ್ಥಾನವನ್ನು ತಮ್ಮದಾಗಿಸಿಕೊಂಡರು.

66 ಕೆ.ಜಿ ವಿಭಾಗದ  ಸ್ಪರ್ಧೆಯಲ್ಲಿ ಆರೆನ್ ಜೋಯ್ ಫೆರ್ನಾಂಡಿಸ್ ಬಾಲಾಂಜನೇಯ ಜಿಮ್ ಮಂಗಳೂರು  ಪ್ರಥಮ ಸ್ಥಾನವನ್ನು, ಶರತ್  ಬಾಲಾಂಜನೇಯ ಜಿಮ್ ಮಂಗಳೂರು  ದ್ವಿತೀಯ ಸ್ಥಾನವನ್ನು ಹಾಗೂ ಚೇತನ್ .ಕೆ.ಎಸ್ ಆಳ್ವಾಸ್ ಕಾಲೇಜು ಮೂಡಬಿದಿರೆಯ ತೃತೀಯ ಸ್ಥಾನವನ್ನು ಪಡೆದುಕೊಂಡರು..

74 ಕೆ.ಜಿ ವಿಭಾಗದ  ಸ್ಪರ್ಧೆಯಲ್ಲಿ ಆಳ್ವಾಸ್ ಕಾಲೇಜು ಮೂಡಬಿದಿರೆಯ ಅಜಿತ್ ಜೋಗಿ ಪ್ರಥಮ ಸ್ಥಾನವನ್ನು, ವೀರಮಾರುತಿ ಜಿಮ್ನಾಶಿಯಂ ಸಾಲಿಗ್ರಾಮ ದ ಭರತ್ .ಎಮ್.ಕೆ ದ್ವಿತೀಯ ಸ್ಥಾನವನ್ನು, ಶ್ರೀ ದುರ್ಗಾ ಜಿಮ್ನಾಶಿಯಂ  ಬಾಲವಿಕಾಸ ಮಾಣಿಯ ಮೊಹಮ್ಮದ್ ರಾಝಿ.ಕೆ ಇವರು ತೃತೀಯ ಸ್ಥಾನವನ್ನು ಪಡೆದುಕೊಂಡರು..

83 ಕೆ.ಜಿ ವಿಭಾಗದ  ಸ್ಪರ್ಧೆಯಲ್ಲಿ ಪ್ರವಣ್ ಡಿ. ಸೋಜ ದುರ್ಗಾಂಜನೇಯ ಜಿಮ್ ಪಡೀಲ್ ಪ್ರಥಮ ಸ್ಥಾನವನ್ನು, ಗೌತಮ್ ವೀರಮಾರುತಿ ಜಿಮ್ನಾಶಿಯಂ ಸಾಲಿಗ್ರಾಮ ದ್ವಿತೀಯ ಸ್ಥಾನವನ್ನು, ರತ್ವಿಕ್ ಕೆ.ವಿ. ಬಾಲಾಂಜನೇಯ ಜಿಮ್ ಮಂಗಳೂರು   ತೃತೀಯ ಸ್ಥಾನವನ್ನು ಪಡೆದುಕೊಂಡರು..

93 ಕೆ.ಜಿ ವಿಭಾಗದ  ಸ್ಪರ್ಧೆಯಲ್ಲಿ ಶಿವಮೊಗ್ಗ ಜಿಲ್ಲೆಯ ವರ್ಷಿತ್ ಎಸ್. ರಾವ್ , ದುರ್ಗಾಂಜನೇಯ ಜಿಮ್ ಮಂಗಳೂರಿನ ಪ್ರಸಾದ್ ಡಿ.ಸೋಜ, ಆಳ್ವಾಸ್ ಕಾಲೇಜು ಮೂಡಬಿದಿರೆಯ ದೇವೀಶ್ ಬಿ.ಎಮ್ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಪಡೆದುಕೊಂಡರು..

105ಕೆ.ಜಿ ವಿಭಾಗದಲ್ಲಿ ಸಂಪತ್ ವೀರಮಾರುತಿ ಜಿಮ್ನಾಶಿಯಂ ಸಾಲಿಗ್ರಾಮ ಪ್ರಥಮ ಸ್ಥಾನವನ್ನು ,ಕೆ,ಎಸ್ ನಿಶ್ಚಿತ್ ರೈ, ಸೈಂಟ್ ಫಿಲೋಮಿನಾ ದ್ವಿತೀಯ ಸ್ಥಾನವನ್ನು, ಕುನಾಲ್ ಸಾಗರ ವೀರ ಮಾರುತಿ ಬೋಳಾರ ತೃತೀಯ ಸ್ಥಾನವನ್ನು  ಪಡೆದುಕೊಂಡರು..

120ಕೆ.ಜಿ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಬಾಲಾಂಜನೇಯ ಜಿಮ್ನಾಶಿಯಂ ಸುನಿಲ್ ಕೆ. ಪಡೆದುಕೊಂಡರು..

+120 ಕೆ.ಜಿ ವಿಭಾಗದಲ್ಲಿ ಪೃಥ್ವಿ ಪಿ ಕುಮಾರ್ ಬಾಲಾಂಜನೇಯ ಜಿಮ್ ಮಂಗಳೂರು  ಇವರು ಪ್ರಥಮ ಸ್ಥಾನವನ್ನು ಪಡೆದುಕೊಂಡರು..

ಮಹಿಳೆಯರ ವಿಭಾಗ:

  43 ಕೆ.ಜಿ ವಿಭಾಗದಲ್ಲಿ  ರಶ್ಮಿತಾ ವೀರಮಾರುತಿ ಜಿಮ್ನಾಶಿಯಂ ಸಾಲಿಗ್ರಾಮ ಪ್ರಥಮ ಸ್ಥಾನವನ್ನು, ಕಮಲಾ ಡಿ.ವಿ. ಶಿವಮೊಗ್ಗ ಜಿಲ್ಲೆ ದ್ವಿತೀಯ ಸ್ಥಾನ, ಹಾಗೂ ಅನುಶ್ರೀ ಎನ್ ಶಿವಮೊಗ್ಗ ಜಿಲ್ಲೆ ತೃತೀಯ ಸ್ಥಾನವನ್ನು  ಪಡೆದರು.

47 ಕೆ.ಜಿ ವಿಭಾಗದಲ್ಲಿ ಶಿವಮೊಗ್ಗ ಜಿಲ್ಲೆಯ ಸ್ನಿಗ್ಧ ಪ್ರಥಮ ಸ್ಥಾನವನ್ನು, ಶಿವಮೊಗ್ಗ ಜಿಲ್ಲೆಯ ರಂಜಿತಾ ಪಿ ದ್ವಿತೀಯ ಸ್ಥಾನವನ್ನು, ಶ್ರೀ ದುರ್ಗಾ ಜಿಮ್ನಾಶಿಯಂ  ಬಾಲವಿಕಾಸ ಮಾಣಿ ಇದರ ಪ್ರಜ್ಞಾ ತೃತೀಯ ಸ್ಥಾನವನ್ನು  ಪಡೆದರು.

52 ಕೆಜಿ. ವಿಭಾಗದ ಡಿವೈಇಎಸ್ ಉಡುಪಿಯ ಐಶ್ವರ್ಯಾ ಪ್ರಥಮ, ಶಿವಮೊಗ್ಗ ಜಿಲ್ಲೆಯ ಅಮೂಲ್ಯ ಜೋಗಿ   ದ್ವಿತೀಯ, ಶಿವಮೊಗ್ಗ ಜಿಲ್ಲೆಯ ಕೌಸಲ್ಯಾ ತೃತೀಯ ಸ್ಥಾನವನ್ನು  ಪಡೆದರು.

57 ಕೆಜಿ. ವಿಭಾಗದ- ಆಳ್ವಾಸ್ ಮೂಡಬಿದಿರಿಯ ತನುಶಾ ಪ್ರಥಮ, ಡಿವೈಇಎಸ್ ಉಡುಪಿಯ ಶ್ರಾವ್ಯ ದ್ವಿತೀಯ, ಎನ್ ಇ ಟಿ ನಿಟ್ಟೆ ಯ ಮಮತಾ ತೃತೀಯ ಸ್ಥಾನವನ್ನು  ಪಡೆದರು

63 ಕೆ.ಜಿ ವಿಭಾಗ- ಆಳ್ವಾಸ್ ಮೂಡಬಿದಿರೆಯ ನಾಗಶ್ರೀ ಪ್ರಥಮ, ಎನ್ ಇ ಟಿ ನಿಟ್ಟೆ ಯ ಶೃತಿ .ಎಸ್. ಅಂಚನ್ ದ್ವಿತೀಯ, ಶಿವಮೊಗ್ಗ ಜಿಲ್ಲೆಯ ಸಾಕ್ಷಿ ತೃತೀಯ ಸ್ಥಾನವನ್ನು  ಪಡೆದರು

72 ಕೆ.ಜಿ. ವಿಭಾಗ- ಆಳ್ವಾಸ್ ಕಾಲೇಜು ಮೂಡಬಿದಿರೆಯ ಯಶಸ್ವಿನಿ ವಿ ಭಂಡಾರಿ ಪ್ರಥಮ, , ಶ್ರೀ ದುರ್ಗಾ ಜಿಮ್ನಾಶಿಯಂ  ಬಾಲವಿಕಾಸ ಮಾಣಿಯ ವಿನಿಷಾ ಡಯಾಸ್ ದ್ವಿತೀಯ ಸ್ಥಾನವನ್ನು  ಪಡೆದರು.

84 ಕೆ.ಜಿ.ವಿಭಾಗದಲ್ಲಿ ದೀಪ್ತಿಕಾ ಜಯಪುತ್ರನ್ ವೀರಮಾರುತಿ ಬೋಳಾರ ಪ್ರಥಮ , ಸಿತಾರ ಆಳ್ವಾಸ್ ಕಾಲೇಜು ದ್ವಿತೀಯ , ಸ್ನೇಹಾ , ಶಿವಮೊಗ್ಗ ಜಿಲ್ಲೆ ತೃತೀಯ. ಸ್ಥಾನವನ್ನು  ಪಡೆದರು

+84 ಕೆಜಿ. ವಿಭಾಗದಲ್ಲಿ ಸದ್ಗುರು ಜಿಮ್ನಾಶಿಯಂನ ಪಂಚಮಿ ಪ್ರಥಮ, ಶ್ರೀ ದುರ್ಗಾ ಜಿಮ್ನಾಶಿಯಂ  ಬಾಲವಿಕಾಸ ಮಾಣಿಯ ಶರಣ್ಯ ಟಿ ಶೆಟ್ಟಿ ದ್ವಿತೀಯ ಸ್ಥಾನವನ್ನು  ಪಡೆದರು

ಸಬ್ ಜ್ಯೂನಿಯರ್ ಬಲಿಷ್ಠ ಪುರುಷ- ಕರ್ನಾಟಕ 2019 ಪ್ರಶಸ್ತಿಯನ್ನು ವೀರಮಾರುತಿ ಜಿಮ್ನಾಶಿಯಂ ಸಾಲಿಗ್ರಾಮ ದರ ಪ್ರಜ್ವಲ್ ಪಡೆದುಕೊಂಡರು.

ಸಬ್ ಜ್ಯೂನಿಯರ್ ಬಲಿಷ್ಠ ಮಹಿಳೆ- ಕರ್ನಾಟಕ 2019 ಪ್ರಶಸ್ತಿಯನ್ನು ನಾಗಶ್ರೀ ಆಳ್ವಾಸ್ ಮೂಡಬಿದಿರೆ ಪಡೆದುಕೊಂಡರು.

ಪುರುಷರ ಸಮಗ್ರ ಪ್ರಶಸ್ತಿ- ಬಾಲಾಂಜನೇಯ ಜಿಮ್ ಮಂಗಳೂರು  ಪ್ರಥಮ ಮತ್ತು ವೀರಮಾರುತಿ ಜಿಮ್ನಾಶಿಯಂ ಸಾಲಿಗ್ರಾಮ ದ್ವಿತೀಯ.

ಮಹಿಳೆಯರ ತಂಡದ ಸಮಗ್ರ ಪ್ರಶಸ್ತಿ- ಶಿವಮೊಗ್ಗ ಜಿಲ್ಲಾ ಪವರ್ ಲಿಫ್ಟಿಂಗ್ ಅಸೋಸಿಯೇಶನ್ ಪ್ರಥಮ ಹಾಗೂ ಶ್ರೀ ದುರ್ಗಾ ಜಿಮ್ನಾಶಿಯಂ  ಬಾಲವಿಕಾಸ ಮಾಣಿ ದ್ವಿತೀಯ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts