ಬಂಟ್ವಾಳನ್ಯೂಸ್ ವರದಿ, ತುಂಬೆ:
ತುಂಬೆ ಡ್ಯಾಂ ಬಳಿ ಶನಿವಾರ ನೇತ್ರಾವತಿ ನದಿಗೆ ಸ್ನಾನ ಮಾಡಲು ತೆರಳಿದ ಅಯ್ಯಪ್ಪ ವ್ರತದಾರಿಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಕಳ್ಳಿಗೆ ಗ್ರಾಮದ ಮಾಡಂಗೆ ನಿವಾಸಿ ರಾಜ ಎಂಬವರ ಪುತ್ರ ಹರಿಪ್ರಸಾದ್ (23) ಮೃತ ಅಯ್ಯಪ್ಪ ವ್ರತದಾರಿ. ತುಂಬೆ ಡ್ಯಾಂನ ಕೆಳಭಾಗದಲ್ಲಿ ಸ್ನಾನ ಮಾಡುವಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಎಸ್ಸೈ ಪ್ರಸನ್ನ ಹಾಗೂ ಸಿಬ್ಬಂದಿ ಜಯರಾಮ್ , ಪಾಣೆಮಂಗಳೂರು ಹೋಬಳಿ ಕಂದಾಯ ನಿರೀಕ್ಷಕ ರಾಮ ಕಾಟಿ ಪಳ್ಳ ಗ್ರಾಮ ಲೆಕ್ಕಾಧಿಕಾರಿ ಪ್ರಶಾಂತ್ ತಾಲೂಕು ಕಚೇರಿ ಸಿಬಂದಿ ಆಶೋಕ್ , ಸದಾಶಿವ ಕೈಕಂಬ ಸ್ಥಳ ಮಹಜರು ನಡೆಸಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…