ಬಂಟ್ವಾಳ

ವಾರದ ಸಂತೆ, ಉದ್ಯೋಗಮೇಳ: ಸಜೀಪನಡು ಗ್ರಾಮದಲ್ಲಿ ಜ.6, 7ರಂದು ಕಾರ್ಯಕ್ರಮ

ಬಂಟ್ವಾಳನ್ಯೂಸ್ ವರದಿ Editor: Harish Mambady

ಬಂಟ್ವಾಳ:
ಸಜಿಪನಡು ಗ್ರಾಮ ಪಂಚಾಯತ್ ವತಿಯಿಂದ ಟಿ.ಆರ್. ಗ್ರೌಂಡ್ ಸಜಿಪ ಜಂಕ್ಷನ್ ಬಳಿ ವಾರದ ಸಜಿಪ ಸಂತೆ ಆರಂಭಗೊಳ್ಳಲಿದೆ. ಜನವರಿ 6ರಂದು ವಾರದ ಸಂತೆ ಸಹಿತ ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ಜ.7ರಂದು ಉದ್ಯೋಗಮೇಳ ಕಾರ್ಯಕ್ರಮಗಳು ನಡೆಯಲಿವೆ.

ರೈತರ ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಸಂತೆಯನ್ನು ಮತ್ತೆ ಪ್ರಾರಂಭಿಸಲಾಗುತ್ತಿದೆ ಸಾರ್ವಜನಿಕರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಗ್ರಾಮ ಪಂಚಾಯತ್ ಅಧ್ಯಕ್ಷ ಮುಹಮ್ಮದ್ ನಾಸಿರ್ ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಶುಕ್ರವಾರ ಸಂಜೆ ಕರೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಏನಿದೆ ಕಾರ್ಯಕ್ರಮ?
ಬೆಳಗ್ಗೆ 8 ಗಂಟೆಗೆ ಗ್ರಾಮದಲ್ಲಿ ಮತ್ತೆ ಆರಂಭಗೊಳ್ಳಲಿರುವ ವಾರದ ಸಂತೆಯನ್ನು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸೆಲ್ವಮಣಿ ಆರ್. ಉದ್ಘಟಿಸುವರು. ತಾಪಂ ಮಾಜಿ ಅಧ್ಯಕ್ಷ ಯಶವಂತ ದೇರಾಜೆ, ಗ್ರಾಪಂ ಮಾಜಿ ಅಧ್ಯಕ್ಷ ಎಸ್.ಕೆ.ಮಹಮ್ಮದ್, ಗುತ್ತಿಗೆದಾರ ಟಿ.ಆರ್.ಅಬ್ದುಲ್ ಖಾದರ್ ಎಸ್.ಡಿ.ಪಿ.ಐ. ಸಜಿಪನಡು ಅಧ್ಯಕ್ಷ ನವಾಝ್ ಸಜಿಪ ಕಾಂಗ್ರೆಸ್ ಸಜಿಪ ವಲಯ ಅಧ್ಯಕ್ಷ ಅಬೂಬಕ್ಕರ್.ಎಸ್ ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ದೀಪಕ್ ಕೊಂಕಣ್‌ತೋಟ, ಜೆಡಿಎಸ್ ಗ್ರಾಮ ಅಧ್ಯಕ್ಷ ಸತ್ತಾರ್ ಹಾಜಿ ಆಟೊ ಚಾಲಕ, ಮಾಲೀಕರ ಸಂಘದ ಅಧ್ಯಕ್ಷ ಎಸ್.ಕೆ.ಬಶೀರ್ ಮತ್ತು ಸಜಿಪನಡು ಹಾಗೂ ಇಸ್ಮಾಯಿಲ್ ಗೋಳಿಪಡ್ಪು ಇವರು ಭಾಗವಹಿಸಲಿದ್ದಾರೆ.
ಬೆಳಗ್ಗೆ ೯.೩೦ಕ್ಕೆ ಪಂಚಾಯತ್ ಆವರಣದಲ್ಲಿ ಸಂಜೀವಿನಿ ಕಟ್ಟಡವನ್ನು ಸಚಿವ ಯು.ಟಿ.ಖಾದರ್ ಶಂಕುಸ್ಥಾಪನೆ ನೆರವೇರಿಸುವರು. ವಿಧಾನಪರಿಷತ್ತು ಸದಸ್ಯ ಎಸ್.ಎಲ್.ಭೋಜೇಗೌಡ ಆಯುಷ್ಮಾನ್ ಭಾರತ್ ಕಾರ್ಡ್ ವಿತರಿಸುವರು. ಗ್ರಾಪಂ ಅಧ್ಯಕ್ಷ ಮಹಮ್ಮದ್ ನಾಸಿರ್ ಅಧ್ಯಕ್ಷತೆ ವಹಿಸುವರು. ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಘನತ್ಯಾಜ್ಯ ವಿಲೇವಾರಿ ವಾಹನ ಉದ್ಘಾಟಿಸುವರು. ಜನರೆಡೆಗೆ ಪಂಚಾಯತ್ ಯೋಜನೆಯನ್ನು ಮಂಗಳೂರಿನ ಕಾರ್ಪೊರೇಟರ್ ಆಯಾಜ್ ಕೃಷ್ಣಾಪುರ ಉದ್ಘಾಟಿಸುವರು.
ಗ್ರಾಪಂ ಸದಸ್ಯರಾದ ಎಸ್.ಎನ್ ಅಬ್ದುಲ್ ರಹಿಮಾನ್, ಅಬ್ದುಲ್ ರಶೀದ್, ಹಾಗೂ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವೀರಪ್ಪ ಗೌಡ.ಎಸ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಉದ್ಯೋಗ ಮೇಳ :
ಜ.7ರಂದು ಸೋಮವಾರ ಬೆಳಿಗ್ಗೆ 9ಗಂಟೆಗೆ ಗ್ರಾಮ ಪಂಚಾಯತ್ ಕಛೇರಿ ಆವರಣದಲ್ಲಿ ಉದ್ಯೋಗ ಮೇಳ ಆರಂಭಗೊಳ್ಳಲಿದ್ದು, 10 ಗಂಟೆವರೆಗೆ ನೋಂದಣಿ ನಡೆಯಲಿದೆ. ಆಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮುಹಮ್ಮದ್ ನಾಸಿರ್ ವಹಿಸಲಿದ್ದು, ತಾಪಂ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಉದ್ಘಾಟಿಸುವರು, ಮುಖ್ಯ ಅತಿಥಿಗಳಾಗಿ ರೆ|ಫಾ| ಲಾರೆನ್ಸ್ ಮಸ್ಕರೇನ್ಹಸ್ ಧರ್ಮಗುರುಗಳು, ಸಂತ ಥೋಮಸ್ ಇಗರ್ಜಿ, ಅಮ್ಮೆಂಬಳ ಚೇಳೂರು, ರಝಾಕ್ ಹಾಜಿ, ಅಧ್ಯಕ್ಷರು, ಕೆಂದ್ರ ಜುಮ್ಮಾ ಮಸೀದಿ ಸಜಿಪನಡು, ಮುಳ್ಳಿಂಜೆ ವೆಂಕಟೇಶ್ವರ ಭಟ್, ಮೊಕ್ತೇಸರರು, ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಸಜಿಪನಡು, ಎಸ್.ಇಬ್ರಾಹಿಂ, ಮಾಜಿ ಅಧ್ಯಕ್ಷರು ಗ್ರಾಮ ಪಂಚಾಯತ್ ಸಜಿಪನಡು, ಸೋಮನಾಥ ಭಂಡಾರಿ, ಮಾಜಿ ಅಧ್ಯಕ್ಷರು ಗ್ರಾಮ ಪಂಚಾಯತ್ ಸಜಿಪನಡು, ಇಕ್ಬಾಲ್ ಬೈಲಗುತ್ತು ನಿರ್ದೇಶಕರು ಮಾಹಿತಿ ಕೇಂದ್ರ ಸಜಿಪನಡು ಇವರು ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ