ಬಂಟ್ವಾಳ: ಬಂಟ್ವಾಳ ತಾಲೂಕು ಬಿ. ಮೂಡ ಗ್ರಾಮದ ಬಿ.ಸಿರೋಡು ಬಳಿಯ ಅಲೆತ್ತೂರು ಎಂಬಲ್ಲಿ ಕಾರ್ಯ ನಿರ್ವಹಿಸುತ್ತಿರುವ ‘ಡ್ರೀಮ್ ಮೇಕರ್ಸ್ ಅಲೆತ್ತೂರು’ ಎಂಬ ಸಮಾಜಮುಖಿ ಯುವಕರ ತಂಡದಿಂದ ಬಡ ಕುಟುಂಬವೊಂದಕ್ಕೆ ಶೌಚಾಲಯ ವ್ಯವಸ್ಥೆಯನ್ನು ಒದಗಿಸಲಾಯಿತು.
ಗ್ರಾಮದ ಬಡಕುಟುಂಬಗಳ ನೆರವಿಗಾಗಿ ಹುಟ್ಟಿಕೊಂಡ ಸಂಘಟನೆಯಾಗಿರುವ ಡ್ರೀಮ್ ಮೇಕರ್ಸ್, ಈಗಾಗಲೇ ಹಲವಾರು ಬಡಕುಟುಂಬಗಳಿಗೆ ಆರ್ಥಿಕ ಮತ್ತು ಶ್ರಮದಾನದಂತಹ ಸಹಕಾರವನ್ನು ನೀಡಿದೆ. ಈಗ ನಂದರಬೆಟ್ಟುವಿನ ಗೀತ ಎಂಬುವರ ಮನೆಗೆ ಶೌಚಾಲಯವನ್ನು ಕಟ್ಟಿಕೊಟ್ಟಿದೆ. ಗೀತ ಮತ್ತು ಅವರ ಮಗಳು ಸಣ್ಣ ಮನೆಯಲ್ಲಿ ವಾಸಿಸುತ್ತಿದ್ದು ಇದಕ್ಕೆ ಸರಿಯಾದ ಶೌಚಾಲಯದ ವ್ಯವಸ್ಥೆ ಇರಲಿಲ್ಲ. ಇದೀಗ ಈ ಕುಟುಂಬಕ್ಕೆ ತಂಡದ ಸಹಕಾರದಿಂದ ಶೌಚಾಲಯ ನಿರ್ಮಾಣವಾಗಿದೆ. ಡ್ರೀಮ್ ಮೇಕರ್ಸ್ ತಂಡದ ಅಧ್ಯಕ್ಷ ಪವನ್ ಕೋಟ್ಯಾನ್ ಸಹಿತ ಪ್ರಮುಖರು ಹಾಗೂ ಪದಾಧಿಕಾರಿಗಳು ಹಸ್ತಾಂತರ ಸಂದರ್ಭ ಉಪಸ್ಥಿತರಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…