ಬ್ರಾಂಡ್ ಮಂಗಳೂರು ಎಂಬ ಪರಿಕಲ್ಪನೆಯಡಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನಾನಾ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಹಾಗು ಸಂಘದ ಸದಸ್ಯರು ಮಂಗಳೂರಿನ ಇಮೇಜ್ ಗೆ ಧಕ್ಕೆಯಾಗದಂತೆ ವರ್ತಿಸಲು ಸಾರ್ವಜನಿಕ, ರಾಜಕೀಯ ಸಂಘ, ಸಂಸ್ಥೆಗಳಿಗೆ ವಿನಂತಿಸುತ್ತಿರುವುದು ನಡೆದೇ ಇದೆ. ಸುದ್ದಿಮಾಡುವುದರಲ್ಲೂ ಸ್ವಯಂಶಿಸ್ತು ರೂಪಿಸಿರುವ ಪತ್ರಕರ್ತರ ಕ್ರಮ ಸಾರ್ವತ್ರಿಕವಾಗಿ ಶ್ಲಾಘನೆಗೆ ಒಳಗಾಗಿರುವಂತೆಯೇ ಕರಾವಳಿ ಉತ್ಸವದಲ್ಲೂ ಇದಕ್ಕೆ ಪ್ರೋತ್ಸಾಹಕವಾಗಿ ಮರಳು ಶಿಲ್ಪ ರಚನೆಗೊಂಡಿದೆ.
ಪಣಂಬೂರು ಕಡಲ ಕಿನಾರೆಯಲ್ಲಿ ನಡೆಯುತ್ತಿರುವ ಬೀಚ್ ಉತ್ಸವದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಬ್ರ್ಯಾಂಡ್ ಮಂಗಳೂರು ಪರಿಕಲ್ಪನೆಯ ಕೋಮು ಸೌಹಾರ್ದತೆ ಸಾರುವ ಮರಳು ಶಿಲ್ಪ ಕಲಾಕೃತಿ ಗಮನ ಸೆಳೆಯಿತು. ಸಂದೇಶ ಮಡಪಾಡಿ, ರವಿ ಹಿರೇಬೆಟ್ಟು ಹಾಗೂ ಪುರಂದರ ತೊಟ್ಟಮ್ ಮರಳಿನ ಕಲಾಕೃತಿ ರಚಿಸಿದ್ದಾರೆ. ಆರು ಗಂಟೆಗಳ ಕಾಲ ಶ್ರದ್ಧೆಯಿಂದ ರೂಪಿಸಿದ ಈ ಮರಳುಶಿಲ್ಪವೀಗ ಆಕರ್ಷಣೆಯ ಕೇಂದ್ರ.