ಬಂಟ್ವಾಳ

ಬಾಂಬಿಲ ಮುಬಾರಕ್ ಜುಮಾ ಮಸೀದಿ ವತಿಯಿಂದ ಸಾಮೂಹಿಕ ವಿವಾಹ

ಮುಬಾರಕ್ ಜುಮಾ ಮಸೀದಿ, ಬಾಂಬಿಲ ಇದರ ವತಿಯಿಂದ ದಾರುಸ್ಸಲಾಂ ಮದ್ರಸ ಮದ್ವಾ ಹಾಗೂ ಅನ್ಸಾರುಲ್ ಮುಸ್ಲಿಮೀನ್ ಇದರ ಜಂಟಿ ಆಶ್ರಯದಲ್ಲಿ ಬಡಹೆಣ್ಣುಮಕ್ಕಳ ಸಾಮೂಹಿಕ ಸರಳ ವಿವಾಹ ಕಾರ್ಯಕ್ರಮ . 6ರಂದು ಬೆಳಿಗ್ಗೆ 9ಕ್ಕೆ ಬಾಂಬಿಲ ಜಮಾಅತಿನ ಗೌರವಾಧ್ಯಕ್ಷ ಅಲ್ಹಾಜ್ ತ್ವಾಕ ಅಹ್ಮದ್ ಮುಸ್ಲಿಯಾರ್ ಅವರ ನೇತೃತ್ವದಲ್ಲಿ ಬಾಂಬಿಲ ಮಸೀದಿಯ ವಠಾರದಲ್ಲಿ ಜರಗಲಿದೆ ಎಂದು ಮಸೀದಿ ಆಡಳಿತದ ಅಧ್ಯಕ್ಷ ಬಿ.ಎಂ.ಬಾವ ಮುಸ್ಲಿಯಾರ್ ಹೇಳಿದ್ದಾರೆ.

ಜಾಹೀರಾತು

ಬುಧವಾರ ಬಿ.ಸಿ.ರೋಡಿನ ಪ್ರೆಸ್ಕ್ಲಬ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್ಕೆಜೆಯು ಉಪಾಧ್ಯಕ್ಷ ಕೆ.ಪಿ.ಅಬ್ದುಲ್ ಜಬ್ಬಾರ್ ಉಸ್ತಾದ್ ಮಿತ್ತಬೈಲ್ ಅವರು ಅಧ್ಯಕ್ಷತೆ ವಹಿಸುವರು. . ಮತ್ತು ರಂದು ರಾತ್ರಿ ಧಾರ್ಮಿಕ ಮತಪ್ರಭಾಷಣ ನಡೆಯಲಿದೆ ಎಂದು ಹೇಳಿದರು.

ಬಾರಿ ಜಮಾಅತ್ ಮೂರು ಬಡ ಜೋಡಿಗಳನ್ನು ಗುರುತಿಸಿದ್ದೇವೆ. ವಧುವಿಗೆ ಪವನ್ ಚಿನ್ನ, ೩೦ ಸಾವಿರ ರೂ. ಮೌಲ್ಯದ ಉಡುಪು ಹಾಗೂ ವರನಿಗೆ ವಾಚ್, ಉಡುಪುಗಳನ್ನು ಆಡಳಿತ ಸಮಿತಿಯಿಂದ ಉಡುಗೊರೆಯಾಗಿ ನೀಡಲಿದ್ದೇವೆ. ಕಾರ್ಯಕ್ರಮಕ್ಕೆ ಸುಮಾರು ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆಯಿದ್ದು, ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.

ಬಾಂಬಿಲ ಕೇಂದ್ರ ಜುಮಾ ಮಸೀದಿಯ ಖತೀಬ್ ಎನ್.ಅಬ್ದುಲ್ ಬಶೀರ್ ಯಮಾನಿ ಕಾರ್ಯಕ್ರಮವನ್ನು ಉದ್ಘಾಟಿಸುವರು. ಮಿತ್ತಬೈಲ್ ಮಸೀದಿಯ ಖತೀಬ್ ಅಶ್ರಫ್ ಮುಖ್ಯ ಪ್ರಭಾಷಣ ಮಾಡುವರು. . ೫ರಂದು ಮಗರಿಬ್ ನಮಾಝಿನ ಬಳಿಕ ಪಯ್ಯಕ್ಕಿ ಉಸ್ತಾದ್ ಇಸ್ಲಾಮಿಕ್ ಅಕಾಡಮಿಶಮೀಮೇ ಮದೀನಾತಂಡದಿಂದ ಬುರ್ದಾ ಆಲಾಪನೆ ನಡೆಯಲಿದೆ. ಕಣ್ಣೂರು ಮಸೀರಿಯ ಮುದರ್ರಿಸ್ ಅನ್ಸಾರುದ್ದೀನ್ ಬುರ್ಹಾನಿ ಫೈಝಿ ಮುಖ್ಯ ಪ್ರಭಾಷಣ ಮಾಡುವರು ಎಂದು ಮಾಹಿತಿ ನೀಡಿದರು.

. ೬ರಂದು ಬೆಳಿಗ್ಗೆ ೯ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಕೇರಳದ ಎನ್.ಪಿ.ಎಂ.ಸೈಯದ್ ಜಲಾಲುದ್ದೀನ್ ತಂಙಳ್ ಏಝ್ಮಲ ಅವರು ದುಆಃ ನೆರವೇರಿಸುವರು. ಚೊಕ್ಕಬೆಟ್ಟುವಿನ ಯು.ಕೆ.ಅಬ್ದುಲ್ ಅಝೀಝ್ ದಾರಿಮಿ ಮುಖ್ಯ ಪ್ರಭಾಷಣ ಮಾಡುವರು ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಸೀದಿ ಆಡಳಿತ ಸಮಿತಿಯ ಪದಾಧಿಕಾರಿಗಳಾದ ಬಿ.ಮುಸ್ತಫಾ, ಯೂಸುಫ್, ಆಸಿಫ್ ಉಪಸ್ಥಿತರಿದ್ದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts