ಬಂಟ್ವಾಳ ತಾಲೂಕಿನ ಲೋರೆಟ್ಟೊ ಮಾತಾ ಚರ್ಚ್ ನಲ್ಲಿ ಕ್ರಿಸ್ಮಸ್ ಸಂಭ್ರಮ ವಿಜೃಂಭಣೆಯಿಂದ ನಡೆಯಿತು.
ಸಾವಿರಾರು ಭಕ್ತಾದಿಗಳು ಭಕ್ತಿಯಿಂದ ಯೇಸು ಕ್ರಿಸ್ತರ ಜನನವನ್ನು ಬಲಿಪೂಜೆಯೊಂದಿಗೆ ಆಚರಿಸಿದರು. ಪ್ರಧಾನ ಧರ್ಮ ಗುರುಗಳಾಗಿ ವಂ.ಜೊಸ್ಸಿ ಲೋಬೊ, ಚರ್ಚ್ ಧರ್ಮಗುರುಗಳಾದ ವಂ.ಎಲಿಯಸ್ ಡಿಸೋಜಾ, ವಂ.ಸಿಪ್ರಿಯನ್ ಕಾರ್ಲೊ, ವಂ.ರೊಯ್ಸಟನ್ ಡಿಸೋಜಾ ಭಕ್ತಾದಿಗಳೊಂದಿಗೆ ಅರ್ಪಿಸಿದರು. ಬಲಿಪೂಜೆಗೆ ಸಹಕರಿಸಿದ ದಾನಿಗಳಿಗೆ ಗೌರವಪೂರ್ವಕವಾಗಿ ಅಲಂಕರಿಸಿದ ಮೇಣದ ಬತ್ತಿಗಳನ್ನು ವಿತರಿಸಲಾಯಿತು. ಇದೇ ಸಂದರ್ಭ ಏಸುಕ್ರಿಸ್ತರರ ಜನುಮ ದಿನಾಚರಣೆಯ ಪ್ರಾಮುಖ್ಯತೆಯನ್ನು ಪ್ರಧಾನ ಧರ್ಮಗುರುಗಳು ಪ್ರವಚನ ನೀಡಿದರು.
ಚರ್ಚ್ನ ಪರಮ ಪ್ರಸಾದದ ದಾರಿಯನ್ನು ಲೋರೆಟ್ಟೊ ಫ್ರೆಂಡ್ಸ್ ಪ್ರಾಯೋಜಕತ್ವ ದಿಂದ ವಿದ್ಯುದೀಪಾಲಂಕರದಿಂದ ಅಲಂಕಾರಗೊಂಡಿತ್ತು. ಚರ್ಚ್‌ಅನ್ನು ರಂಗು ರಂಗಿನ ವಿದ್ಯುದ್ದೀಪಾಲಂಕಾರದಿಂದ ಕಂಗೊಳಿಸಲಾಗಿತ್ತು. ಬಲಿಪೂಜೆಯ ಬಳಿಕ ಐಸಿವೈಮ್ ನಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಚರ್ಚ್ ಆವರಣದಲ್ಲಿ ಏಸುಕ್ರಿಸ್ತರ ಜನ್ಮದಿನ ಸಾರುವ ಗೋದಲಿಯನ್ನು ಐಸಿವೈಮ್ ಸದಸ್ಯರು ನಿರ್ಮಿಸಿದರು.