ರಸ್ತೆ ಮಧ್ಯೆ ಸರಕಾರಿ ಬಸ್ ಒಂದು ಕೆಟ್ಟು ನಿಂತು ವಾಹನ ಸಂಚಾರಕ್ಕೆ ಅಡಚಣೆ ಉಂಟಾದ ಘಟನೆ ಬಂಟ್ವಾಳ ತಾಲೂಕಿನ ಮೇಲ್ಕಾರ್ ಸಮೀಪ ಬೋಳಂಗಡಿ ಎಂಬಲ್ಲಿ ಸೋಮವಾರ ನಡೆದಿದೆ.
ಇದರಿಂದ ಸಾರ್ವಜನಿಕರು ಸಾಕಷ್ಟು ತೊಂದರೆಗೆ ಒಳಗಾದರು. ಬಳಿಕ ಸ್ಥಳೀಯರು ಕಲ್ಲಡ್ಕ ಅಮ್ಟೂರ್ ಕ್ರಾಸ್ ಮೂಲಕ ಮಾರ್ನಬೈಲ್ ಮೂಲಕ ವಾಹನ ಸಂಚಾರಕ್ಕೆ ಸೂಚನೆ ನೀಡಿದನ್ವಯ ದಟ್ಟಣೆ ಕಡಿಮೆಯಾಯಿತು. ಸ್ಥಳಕ್ಕೆ ಪೊಲೀಸರು ಆಗಮಿಸಿ ಮುಂದಿನ ಕಾರ್ಯ ಕೈಗೊಂಡರು.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…