ದೇಶ ಹಾಗೂ ಸಮಾಜಕ್ಕೆ ಒಳತಾಗುವ ಕೆಲಸವನ್ನು ಮಾಡುವ ಮನಸ್ಸು ನಮ್ಮಲ್ಲಿದ್ದರೆ ಭಾರತ ವಿಶ್ವದಲ್ಲಿಯೇ ಅತ್ಯುನ್ನತ ಸ್ಥಾನಕ್ಕೆ ಏರಲು ಸಾಧ್ಯವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಚಿಣ್ಣರ ಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಬಂಟ್ವಾಳ ಇದರ ಆಶ್ರಯದಲ್ಲಿ ನಡೆಯುತ್ತಿರುವ ಕರಾವಳಿ ಕಲೋತ್ಸವದ ಮೂರನೇ ದಿನದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಜಿಲ್ಲೆಯ ಜಾನಪದ, ಕಲೆ, ಆಚಾರ ವಿಚಾರ ಸಂಸ್ಕೃತಿಗಳನ್ನು ಉಳಿಸುವುದರ ಜೊತೆಗೆ ಕಲೋತ್ಸವದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪ್ರತಿಭೆಗಳಿಗೆ ಅವಕಾಶವನ್ನು ನೀಡುವ ಕಾರ್ಯವನ್ನು ಚಿಣ್ಣರ ಲೋಕ ಸೇವಾ ಟ್ರಸ್ಟ್ ಮಾಡಿಕೊಂಡು ಬರುತ್ತಿರುವುದು ಅಭಿನಂದನೀಯ ಎಂದರು.
ಕರಾವಳಿ ಕಲೋತ್ಸವದ ಅಧ್ಯಕ್ಷ ಸುದರ್ಶನ ಜೈನ್ ಸಭಾಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಜಗನ್ನಾಥ ಚೌಟ, ಜಿಲ್ಲಾ ಪಂಚಾಯತಿ ಸದಸ್ಯ ಶಾಹುಲ್ ಹಮೀದ್, ತಹಶೀಲ್ದಾರ್ ಪುರಂದರ ಹೆಗ್ಡೆ, ಗೋಲ್ಡನ್ ಪಾರ್ಕ್ ಅಸೋಸಿಯೇಟ್ಸ್ನ ಪಾಲುದಾರ ವಲ್ಲಬೇಶ್ ಶೆಣೈ, ಒಡಿಯೂರು ಗ್ರಾಮ ವಿಕಾಸ ಯೋಜನೆಯ ಪ್ರಧಾನ ಸಂಚಾಲಕ ತಾರಾನಾಥ ಕೊಟ್ಟಾರಿ, ವಕೀಲರ ಸಂಘದ ಮಾಜಿ ಅಧ್ಯಕ್ಷ ಉಮೇಶ್ ಕುಮಾರ್ ವೈ, ನವೋದಯ ಸ್ವಸಹಾಯ ಗುಂಪುಗಳ ಮುಖ್ಯ ಪ್ರಬಂಧಕಿ ಪೂರ್ಣಿಮ ಶೆಟ್ಟಿ, ಚಿತ್ರನಟಿ ವಿನುತಾ ಡಿಸೋಜಾ, ಬಾಲ ಪ್ರತಿಭೆ ದೀಕ್ಷಾ ಡಿ. ರೈ, ಕಾಮಿಡಿ ಕಿಲಾಡಿಯ ಧೀರಜ್ ನೀರುಮಾರ್ಗ , ಲಿಯೋ ಫೆರ್ನಾಂಡೀಸ್, ಅಶೋಕ್ ಶೆಟ್ಟಿ ಸರಪಾಡಿ, ರಿಯಾಝ್ ಬಂಟ್ವಾಳ ಮೊದಲಾದವರು ಹಾಜರಿದ್ದರು.
ವಿದ್ವಾನ್ ವೆಂಕಟಕೃಷ್ಣ ಭಟ್, ಬಾಲಕೃಷ್ಣ ಶೆಟ್ಟಿ ಮಂಚಿ, ಪ್ರಜ್ವಲ್ ಕುಮಾರ್ ಮಣ್ಣಗುಡ್ಡೆ, ಅರುಣ್ ಕುಮಾರ್ ಧರ್ಮಸ್ಥಳ, ಸುದೀಪ್ ಕೆರ್ಕರಾ ಅವರಿಗೆ ಗುರುವಂದನೆ ಸಲ್ಲಿಸಲಾಯಿತು.
ನಿರ್ದೇಶಕ ಲೋಕೇಶ್ ಸುವರ್ಣ ಸ್ವಾಗತಿಸಿದರು, ರಾಜೇಶ್ ಕೊಟ್ಟಾರಿ ನಿರೂಪಿಸಿದರು. ಪ್ರಧಾನ ಸಂಚಾಲಕ ಮೋಹನದಾಸ ಕೊಟ್ಟರಿ ಉಪಸ್ಥಿತರಿದ್ದರು. ಇದಕ್ಕ್ಕೂ ಮುಂಚೆ ರೋಟರಿ ಕ್ಲಬ್ ಬಂಟ್ವಾಳದ ಸಂಯುಕ್ತ ಆಶ್ರಯದಲ್ಲಿ ರಾಜ್ಯಮಟ್ಟದ ನೃತ್ಯ ಪ್ರದರ್ಶನ ನಡೆಯಿತು.