ಬಂಟ್ವಾಳ

ಅಗ್ರಾರ್ ಚರ್ಚ್‌ನಲ್ಲಿ ಸಭಾಂಗಣ ಉದ್ಘಾಟನೆ

ಅಗ್ರಾರ್ ನಲ್ಲಿ ನೂತನವಾಗಿ ನಿರ್ಮಾಣಗೊಂಡ ಹೋಲಿಸೇವಿಯರ್ ಸಭಾಂಗಣ ದ ಉದ್ಘಾಟನಾ ಸಮಾರಂಭವನ್ನು ಅಗ್ರಾರ್ ಚರ್ಚ್ ವಠಾರದಲ್ಲಿ ವಿಶ್ರಾಂತ ಬಿಷಪ್ ರಾದ ಅತಿವಂದನೀಯ ರೆ.ಡಾ.ಅಲೋಶಿಯಸ್ ಪಾವ್ಲ್ ಡಿಸೋಜ ರವರು ನೆರವೇರಿಸಿದರು.

ಜಾಹೀರಾತು

ಅವರು ಸಭಾಂಗಣ ಶುದ್ದೀಕರಣಗೊಳಿಸಿ ದೇವರ ಆಶೀರ್ವಾದಗಳು ಭಕ್ತಾದಿಗಳಿಗೆ ದೊರೆಯಲಿ ಎಂದು ಹರಸಿ ಸಭಾಂಗಣವು ಎಲ್ಲಾ ಕ್ಷೇತ್ರದವರಿಗೂ ಎಲ್ಲಾ ಧರ್ಮದವರಿಗೂ ಉಪಯುಕ್ತ ವಾಗಲೆಂದು ಹಾರೈಸಿದರು.

ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಸಚಿವ ಬಿ.ರಮಾನಾಥ ರೈ ನೆರವೇರಿಸಿ ಅತೀ ಕಡಿಮೆ ಸಮಯದ ಅವಧಿಯಲ್ಲಿ ನಿರ್ಮಾಣಗೊಂಡ ಸಭಾಂಗಣ ದ ಕೆಲಸಕಾರ್ಯಗಳನ್ನು ಶ್ಲಾಘಿಸಿದರು.

ಸಭಾಂಗಣದ ಕೆಲಸದಲ್ಲಿ ವಿವಿಧ ಗುತ್ತಿಗೆ ನಿರ್ವಹಿಸಿದವರಿಗೆ ಸನ್ಮಾನಿಸಿದ ಶಾಸಕ ರಾಜೇಶ್ ನಾಯಕ್ ಉಳಿಪಾಡಿಗುತ್ತು ಮಾತನಾಡಿ ಹಲವಾರು ಅಡಚಣೆಗಳಿದ್ದರೂ ದೈವಾನುಗ್ರಹದಿಂದ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಹಾಗೂ ಶಾಸಕನಾಗಿ ಪ್ರಥಮ ವಾಗಿ ಇಲ್ಲಿ ಬರಲು ಸಾಧ್ಯವಾಯಿತು. ಶಾಂತಿ ಮತ್ತು ಅನ್ಯೋನ್ಯತೆ ಇದ್ದರೆ ಪ್ರಗತಿ ಸಾಧಿಸಲು ಸಾಧ್ಯ ಎಂದು ನುಡಿದರು.

ವೇದಿಕೆಯಲ್ಲಿ ಮಂಗಳೂರಿನ ಎಸ್‌ಆರ್‌ಎ ಪ್ರೊವಿನ್ಸಿಯಲ್ ಸುಪೀರಿಯರ್ ವಂದನೀಯ ಭಗಿನಿ ಝೀನಾ ಡಿಸೋಜ , ಪುರಸಭಾ ಸದಸ್ಯ ಗಂಗಾಧರ ಪೂಜಾರಿ, ಕೋ-ಓರ್ಡಿನೇಟರ್ ಫೆಡ್ರಿಕ್ ಡಿಸೋಜ ಉಪಸ್ಥಿತರಿದ್ದರು. ಪಾಲನಾ ಮಂಡಳಿ ಉಪಾಧ್ಯಕ್ಷ ಪಿಯೂಸ್ ಎಲ್ ರೋಡ್ರಿಗಸ್ ಪ್ರಸ್ತಾವನೆಗೈದರು. ಧರ್ಮಗುರು ರೆ.ಫಾ.ಗ್ರೆಗರಿ ಡಿಸೋಜ ಸ್ವಾಗತಿಸಿದರು. ಪಾಲನಾ ಮಂಡಳಿ ಕಾರ್ಯದರ್ಶಿ ವಿನ್ಸೆಂಟ್ ಕಾರ್ಲೋ ವಂದಿಸಿದರು. ಇಗ್ನೇಷಿಯಸ್ ಡಿಸೋಜ ಮತ್ತು ಆಡ್ರಿನ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.