ಉದಯವಾಣಿ ಪತ್ರಿಕೆಯಲ್ಲಿ ಕುಂದಾಪುರದ ಮುಖ್ಯ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಬೆಳ್ತಂಗಡಿ ತಾಲೂಕಿನ ಮಚ್ಚಿನದ ಲಕ್ಷ್ಮೀನರಸಿಂಹ ಶಾಸ್ತ್ರಿ (ಲಕ್ಷ್ಮೀ ಮಚ್ಚಿನ) ಅವರಿಗೆ ಮಂಗಳೂರಿನ ಡಾನ್ ಬೊಸ್ಕೊ ಹಾಲ್ನಲ್ಲಿ ಬುಧವಾರ ಅರೆಹೊಳೆ ಪ್ರತಿಷ್ಠಾನದ ವತಿಯಿಂದ ನಡೆದ ಸದಾನಂದ ಸುವರ್ಣ ಗೌರವಾರ್ಥ ಅರೆಹೊಳೆ ರಂಗಹಬ್ಬದಲ್ಲಿ ಹರಿಕೃಷ್ಣ ಪುನರೂರು ಮಾಧ್ಯಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭ ಕಸಾಪ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ವಿಜಯ ಕರ್ನಾಟಕ ಸ್ಥಾನೀಯ ಸಂಪಾದಕ ಯು.ಕೆ.ಕುಮಾರನಾಥ್, ಡಾ. ಸುರೇಶ ನೆಗಳೆಗುಳಿ, ಸದಾನಂದ ಸುವರ್ಣ, ರಾಧಾಕೃಷ್ಣ ಭಟ್, ಅರೆಹೊಳೆ ಸದಾಶಿವ ರಾವ್, ಗೀತಾ ರಿತೇಶ್ ಮತ್ತಿತರರು ಉಪಸ್ಥಿತರಿದ್ದರು.