ಹಾವು ಜೈವಿಕ ಪರಿಸರದ ಒಂದು ಅವಿಭಾಜ್ಯ ಅಂಗವಾಗಿದ್ದು ಅವುಗಳ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ವಿದ್ಯಾರ್ಥಿ ಸಮೂಹ ಹೋಗಲಾಡಿಸಿ ಕೊಳ್ಳಬೇಕೆಂದು ವನ್ಯ ಜೀವಿ ಪ್ರೇಮಿ ಕಿರಣ್ ಪಿಂಟೊ ವಗ್ಗ ಅಭಿಪ್ರಾಯಪಟ್ಟರು.
ಬಿಮೂಡ ಸರಕಾರಿ ಪದವಿಪೂರ್ವ ಕಾಲೇಜಿನ ವಿಜ್ಞಾನ ಸಂಘ ಮತ್ತು ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಕಾಲೇಜಿನಲ್ಲಿ ನಡೆದ ಹಾವು ಮತ್ತು ಪರಿಸರ ಎಂಬ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಹಾವಿನ ಬಗ್ಗೆ ಇರುವ ಭಯ ಮತ್ತು ಆತಂಕಗಳನ್ನು ದೂರ ಮಾಡಲು ಜಾಗೃತಿ ಕರ್ಯಕ್ರಮಗಳು ಪೂರಕವಾಗಿದೆ ಎಂದು ಅವರು ಈ ಸಂದರ್ಭ ಹೇಳಿದರು.
ಕಾರ್ಯಕ್ರಮದಲ್ಲಿ ವಿಷ ರಹಿತ ಮತ್ತು ವಿಷಯುಕ್ತ ಹಾವುಗಳು, ಅವುಗಳ ಬದುಕು , ಸಂತಾನೋತ್ಪತ್ತಿ , ಆಹಾರ ಇವುಗಳ ಬಗ್ಗೆ ಪಿಪಿಟಿ ಮೂಲಕ ಪ್ರಾತ್ಯಕ್ಷಿಕೆ ನೀಡಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇತಿಹಾಸ ಉಪನ್ಯಾಸಕರಾದ ವೆಂಕಟೇಶ್ವರ ಭಟ್ ವಹಿಸಿದ್ದರು.
ಉಪನ್ಯಾಸಕಿ ಲವೀನಾ ಶಾಂತಿ ಲೋಬೊ ಉಪಸ್ಥಿತರಿದ್ದರು. ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿ ಬಾಲಕೃಷ್ಣ ನಾಯ್ಕ್ ಕೆ ಸ್ವಾಗತಿಸಿದರು. ವಿದ್ಯಾರ್ಥಿ ರಕ್ಷಿತ್ ಧನ್ಯವಾದ ನೀಡಿದರು. ವಿದ್ಯಾರ್ಥಿನಿ ಗೌಸಿಯಾ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕರಾದ ದಾಮೋದರ್, ಯಶೋಧ ಕೆ, ಅಬ್ದುಲ್ ರಝಾಕ್, ಸುಧೀರ್, ಗಿರೀಶ್ ಸಹಕರಿಸಿದರು.