ವಿಟ್ಲ

ನಂತೂರು ಭಾರತೀ ಪದವಿ ಕಾಲೇಜಿನ ಎನ್ನೆಸ್ಸೆಸ್ ಘಟಕದ ವಾರ್ಷಿಕ ವಿಶೇಷ ಶಿಬಿರ

ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ಶ್ರೀ ಭಾರತೀ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ವಿಶೇಷ ಶಿಬಿರದ ವಿಟ್ಲ ಸಮೀಪದ ಚಂದಳಿಕೆ ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯಲ್ಲಿ ಪ್ರತಿದಿನವೂ ಶೈಕ್ಷಣಿಕ, ಸಭಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಡಿ.12ರಂದು ಬೆಳಗ್ಗೆ ರವಿಚಂದ್ರ ಚಂದಳಿಕೆ ಅವರು ಧ್ವಜಾರೋಹಣ ನೆರವೇರಿಸಿದರು. ಶೈಕ್ಷಣಿಕ ಕಾರ್ಯಕ್ರಮದಲ್ಲಿ ವಿಟ್ಠಲ ಪಪೂ ಕಾಲೇಜಿನ ಉಪನ್ಯಾಸಕ ಅಣ್ಣಪ್ಪ ಸಾಸ್ತಾನ ವ್ಯಕ್ತಿತ್ವಕ್ಕೊಂದು ಕನ್ನಡಿ ಎಂಬ ವಿಚಾರದಲ್ಲಿ ತರಬೇತಿ ನೀಡಿದರು. ವಿಟ್ಲ ಪುಷ್ಪಕ್ ಕ್ಲಿನಿಕ್ ವೈದ್ಯಾಽಕಾರಿ ಡಾ.ವಿ.ಕೆ.ಹೆಗ್ಡೆ, ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ.ಟಿ.ಶ್ರೀಕೃಷ್ಣ ಭಟ್, ರೋಟರಿ ಕ್ಲಬ್ ಅಧ್ಯಕ್ಷ ಡಾ.ಚರಣ್ ಕಜೆ, ಸಂಜೀವ ಪೂಜಾರಿ, ವಸಂತ ಶೆಟ್ಟಿ, ನಂತೂರು ಶ್ರೀ ಭಾರತೀ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಿತೇಶ್ ದೇವಾಂಗ್ ಮತ್ತಿತರರು ಉಪಸ್ಥಿತರಿದ್ದರು. ಸ್ವಾತಿ ಸ್ವಾಗತಿಸಿ, ಅನುಷಾ ವಂದಿಸಿದರು. ಗಂಗಾ ಸತ್ಯನಾರಾಯಣ ಹೆಗ್ಡೆ ನಿರೂಪಿಸಿದರು.
ಸಂಜೆ ನಡೆದ ಸಭಾಕಾರ್ಯಕ್ರಮದಲ್ಲಿ ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ಅಧ್ಯಕ್ಷ ಹಾರಕರೆ ನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು. ವಿಟ್ಲ ಹವ್ಯಕ ವಲಯಾಧ್ಯಕ್ಷ ಚಂದ್ರಶೇಖರ ಭಟ್ ಅವರು ಸಂಘಟನೆ ಮತ್ತು ವ್ಯಕ್ತಿತ್ವ ವಿಕಸನದ ಬಗ್ಗೆ ದಿಕ್ಸೂಚಿ ಭಾಷಣ ಮಾಡಿದರು. ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸುಬ್ಬಪ್ಪ ಕೈಕಂಬ, ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ಸೇವಾ ಸಮಿತಿ ಸದಸ್ಯ ರಮೇಶ್ ಭಟ್ ಸರವು, ಮಂಗಳೂರು ಹವ್ಯಕ ಮಂಡಲ ಮಾತೃಪ್ರಧಾನ ಸುಮಾ ರಮೇಶ್, ಜಾಯ್ ಪ್ರವೀಣ್ ಡಿಸೋಜಾ ಬೂಡು, ಅಬೀರಿ ಯುವಕೇಸರಿ ಮಾಜಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಚಪುಡಿಯಡ್ಕ, ಚಂದಳಿಕೆ ವಿದ್ಯಾವರ್ಧಕ ಸಂಘದ ಸದಸ್ಯ ಲಕ್ಷ್ಮಣ ಆಚಾರ್ಯ, ಪದ್ಮಾ ಹೆಬ್ಬಾರ್, ಮುಖ್ಯ ಶಿಬಿರಾಽಕಾರಿ ಅಶೋಕ್ ಎಸ್. ಮತ್ತಿತರರು ಉಪಸ್ಥಿತರಿದ್ದರು. ಅಂಕಿತಾ ನೀರ್ಪಾಜೆ ಸ್ವಾಗತಿಸಿ, ದಾಕ್ಷಾಯಿಣಿ ವಂದಿಸಿದರು. ವೆಂಕಟೇಶ್ ಕೆ.ಎಂ. ನಿರೂಪಿಸಿದರು.

ಡಿ.13ರಂದು ಬೆಳಗ್ಗೆ ಬೊಳ್ನಾಡು ಭಗವತೀ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಆನಂದ ಕಲ್ಲಕಟ್ಟ ಧ್ವಜಾರೋಹಣ ನೆರವೇರಿಸಿದರು. ಶೈಕ್ಷಣಿಕ ಕಾರ್ಯಕ್ರಮದಲ್ಲಿ ವಿಟ್ಲ ಸಿಪಿಸಿಆರ್‌ಐ ವಿಜ್ಞಾನಿ ಡಾ.ಎನ್.ಆರ್.ನಾಗರಾಜ್ ಅವರು ಕೃಷಿ ವೈವಿಧ್ಯದ ಬಗ್ಗೆ ತರಬೇತಿ ನೀಡಿದರು. ಚಂದಳಿಕೆ ವಾಣಿಶ್ರೀ ಯುವಕ ಮಂಡಲ ಅಧ್ಯಕ್ಷ ಪುರಂದರ ಕೂಟೇಲು ಉಪಸ್ಥಿತರಿದ್ದರು. ನಿಯಾರಿತಾ ಸ್ವಾಗತಿಸಿದರು. ಜಾಹ್ನವಿ ನಿರೂಪಿಸಿ, ವಂದಿಸಿದರು.

ಸಂಜೆ ನಡೆದ ಸಭಾಕಾರ್ಯಕ್ರಮದಲ್ಲಿ ಮಂಗಳೂರು ಹವ್ಯಕ ಮಂಡಲ ಅಧ್ಯಕ್ಷ ಸೇರಾಜೆ ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಸಿ.ಎಫ್.ಸಿಕ್ವೇರಾ ಅವರು ಸಾಮಾಜಿಕ ಸ್ವಾಸ್ಥ ರಕ್ಷಣೆಯಲ್ಲಿ ವಿದ್ಯಾರ್ಥಿಗಳ ಕೊಡುಗೆ ಎಂಬ ವಿಚಾರದ ಬಗ್ಗೆ ದಿಕ್ಸೂಚಿ ಭಾಷಣ ಮಾಡಿದರು. ವಿಟ್ಲ ವಿಟ್ಠಲ ಪಪೂ ಕಾಲೇಜಿನ ಪ್ರಾಂಶುಪಾಲ ಆದರ್ಶ ಚೊಕ್ಕಾಡಿ, ಬೆನಕ ಕ್ಲಿನಿಕ್ ವೈದ್ಯಾಽಕಾರಿ ಡಾ.ಅರವಿಂದ್, ಎಸ್‌ಡಿಎಂಸಿ ಸದಸ್ಯ ಚೆನ್ನಪ್ಪ ಪೂಜಾರಿ, ಪ್ರಗತಿಪರ ಕೃಷಿಕ ಗಿರಿಯಪ್ಪ ಗೌಡ ಗಿರಿನಿವಾಸ, ಶ್ರೀ ಭಾರತೀ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಈಶ್ವರಪ್ರಸಾದ್ ಎ., ಅಬೀರಿ ಯುವ ಕೇಸರಿ ಗೌರವಾಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಚಂದಳಿಕೆ ವಾಣಿಶ್ರೀ ಯುವಕ ಮಂಡಲ ಅಧ್ಯಕ್ಷ ಪುರಂದರ ಕೂಟೇಲು, ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷೆ ಜಯಾ ವಿ.ರೈ, ಮುಖ್ಯ ಶಿಬಿರಾಽಕಾರಿ ಅಶೋಕ್ ಎಸ್. ಮತ್ತಿತರರು ಉಪಸ್ಥಿತರಿದ್ದರು. ಸ್ನೇಹಾ ಸ್ವಾಗತಿಸಿ, ಗಾಯತ್ರಿ ವಂದಿಸಿದರು. ಸುಶ್ಮಿತಾ ನಿರೂಪಿಸಿದರು.
ಡಿ.೧೪ರಂದು ಬೆಳಗ್ಗೆ ಸೆಲೆಕ್ಟ್ ಫೂಟ್‌ವೇರ್ ಮಾಲಕ ಅಶ್ರಫ್ ಚಂದಳಿಕೆ ಧ್ವಜಾರೋಹಣ ನೆರವೇರಿಸಿದರು. ಶೈಕ್ಷಣಿಕ ಕಾರ್ಯಕ್ರಮದಲ್ಲಿ ರಂಗನಟ, ನಿರ್ದೇಶಕ, ಚಿತ್ರನಟ ಯೋಗೀಶ್ ಶೆಟ್ಟಿ, ಚೇತನ್ ಜಿ.ಪಿಲಾರ್ ಅವರು ರಂಗಭೂಮಿ ಮತ್ತು ಜೀವನದ ಬಗ್ಗೆ ತರಬೇತಿ ನೀಡಿದರು. ಮುಖ್ಯ ಶಿಬಿರಾಽಕಾರಿ ಅಶೋಕ್ ಎಸ್. ಮತ್ತಿತರರು ಉಪಸ್ಥಿತರಿದ್ದರು. ಶ್ರೇಯಾ ಸ್ವಾಗತಿಸಿ, ಹಿತಾಕ್ಷಿ ವಂದಿಸಿದರು. ವೆಂಕಟೇಶ್ ಕೆ.ಎಂ. ನಿರೂಪಿಸಿದರು. ಸಂಜೆ ಸಮಾರೋಪ ಸಮಾರಂಭ ನಡೆಯಿತು. ಬಳಿಕ ಶಿಬಿರಾಗ್ನಿ ನಡೆಯಿತು.

ಶಿಬಿರದ ವಿಶೇಷತೆಗಳು:

ಶಿಬಿರದ ಉದ್ಘಾಟನೆ ಸಮಾರಂಭದಿಂದ ಸಮಾರೋಪ ಸಮಾರಂಭದ ತನಕ ಅತಿಥಿಗಳಿಗೆ ಉಪಯುಕ್ತ ಗಿಡಗಳನ್ನು ಉಡುಗೊರೆಯಾಗಿ ನೀಡಿದ್ದು ವಿಶೇಷವಾಗಿತ್ತು. ಸುಮಾರು ೧೫೦ಕ್ಕೂ ಅಽಕ ಗಿಡಗಳನ್ನು ವಿತರಿಸಲಾಗಿತ್ತು. ಚಂದಳಿಕೆ ಶಾಲೆ ಹಳೆ ವಿದ್ಯಾರ್ಥಿ ಸಂಘದ ಪದಾಽಕಾರಿಗಳ ಸಹಕಾರದೊಂದಿಗೆ ಶಾಲೆಯ ೫ ತೆಂಗಿನ ಮರಗಳಿಗೆ ಶಿಬಿರಾರ್ಥಿಗಳು ಕಟ್ಟೆ ನಿರ್ಮಿಸಿದರು. ಕಳೆದ ಎರಡು ವರ್ಷಗಳ ಹಿಂದೆ ಶಾಲೆಯ ಹಿಂಭಾಗದಲ್ಲಿ ಭಾರೀ ಮಳೆಗೆ ಕುಸಿದು ಬಿದ್ದ ಮಣ್ಣನ್ನು ತೆರವುಗೊಳಿಸಲಾಯಿತು. ಸುತ್ತಲೂ ಸ್ವಚ್ಛಗೊಳಿಸಿ, ಅಂಗಳಕ್ಕೆ ಪ್ರತಿದಿನವೂ ಸೆಗಣಿ ಸಾರಿಸಲಾಗಿತ್ತು. ಶಾಲೆಯ ಆವರಣದಲ್ಲಿ ತೆಂಗಿನ ಗಿಡ ನೆಡಲಾಯಿತು. ಚಂದಳಿಕೆ ಶಾಲೆ ಮಕ್ಕಳಿಂದ ಹಾಗೂ ಅಂಗನವಾಡಿ ಪುಟಾಣಿಗಳಿಂದ, ಚಂದಳಿಕೆ ವೀರಾಂಜನೇಯ ವ್ಯಾಯಾಮ ಶಾಲೆಯ ಮಕ್ಕಳಿಂದ ತಾಲೀಮು ಪ್ರದರ್ಶನ, ಸ್ತ್ರೀಶಕ್ತಿ ಸ್ವಸಹಾಯ ತಂಡದವರಿಂದ, ಚಂದಳಿಕೆ ವಾಣಿಶ್ರೀ ಯುವಕ ಮಂಡಲದ ಸದಸ್ಯರಿಂದ ಮತ್ತು ಸಮಾರೋಪ ಸಮಾರಂಭದಂದು ನಂತೂರು ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮತ್ತು ಪಪೂ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಶಿಬಿರಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಈ ವಿಶೇಷ ಶಿಬಿರಕ್ಕೆ ೨೫ಕ್ಕೂ ಅಽಕ ಸಂಘ ಸಂಸ್ಥೆಗಳು ಸಹಕಾರ ನೀಡಿದ್ದವು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ