ನಾಗರಿಕ ಕ್ರಿಯಾ ಸಮಿತಿ ಸಂಚಯಗಿರಿ ವಾರ್ಷಿಕ ಸಹಮಿಲನ ಕಾರ್ಯಕ್ರಮವು ಸಂಚಯಗಿರಿ ಮೈದಾನದಲ್ಲಿ ಜರಗಿತು. ಪುರಸಭೆ ಸದಸ್ಯರಾದ ವಿದ್ಯಾವತಿ ಪ್ರಮೋದ್ ಕುಮಾರ್ ಹಾಗೂ ಜಯಂತಿ ಕುಲಾಲ್ ಭಾಗವಹಿಸಿದ್ದರು.
ನಾಗರಿಕ ಕ್ರಿಯಾ ಸಮಿತಿ ಅದ್ಯಕ್ಷ ಪ್ರಶಾಂತ್ ಕೋಟ್ಯಾನ್ ಜೇಷ್ಠಪಾಲ್ ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಕಾರ್ಯದರ್ಶಿ ಪ್ರಿಯಾಲತಾ ವಾಮನ್ , ಯುವ ವೇದಿಕೆಯ ಸಚಿನ್ ಉಪಸ್ಥಿತರಿದ್ದರು. ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರ ಸಂಚಾಲಕ ತುಕಾರಾಮ ಪೂಜಾರಿ, ಸುಧಾಕರ ಸಾಲ್ಯಾನ್, ನರಸಿಂಹ ರಾಜು ಮತ್ತು ನಯನಾ ಹೊಳ್ಳ ದಂಪತಿ ಕಲಿಕೆಯಲ್ಲಿ ಸಾಧನೆ ಮಾಡಿದ ಮಕ್ಕಳಾದ ಅಪೂರ್ವ, ವರ್ಷಿತ್, ಅಕ್ಷಯ್ ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕೋಶಾಧಿಕಾರಿ ಪ್ರದೀಪ್ ಕುಮಾರ್ ಸ್ವಾಗತಿಸಿದರು. ದಾಮೋದರ್ ಎ. ವಂದಿಸಿ, ನಿವೃತ್ತ ಶಿಕ್ಷಕ ಸಂಕಪ್ಪ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…