ಅಕ್ಕಮಹಾದೇವಿ ವೀರಶೈವ ಮಹಿಳಾ ಸಂಘ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳೂರು 4ನೇ ವಚನ ಸಂಭ್ರಮ ಮತ್ತು ಮಕ್ಕಳ ಎರಡು ಕವನ ಸಂಕಲನ ಬಿಡುಗಡೆ ಕಾರ್ಯಕ್ರಮ ನೆಟ್ಲ ದ.ಕ.ಜಿ.ಸ..ಹಿ.ಪ್ರಾ.ಶಾಲೆಯಲ್ಲಿ ನಡೆಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅವರಿಗೆ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಹಾಯವಾಗಿದೆ, ಸಾರ್ಥಕ ಕಾರ್ಯವಾಗಿ ಮೂಡಿಬಂದಿದೆ ಎಂದರು. ಕನ್ನಡ ಶಾಲೆಗಳಲ್ಲಿ ಸಾಹಿತ್ಯ ಕಮ್ಮಟ ಕಾರ್ಯಕ್ರಮ ಗಳು ಹೆಚ್ಚು ನಡೆದರೆ ಕನ್ನಡ ಉಳಿಸಿ ಬೆಳೆಸಲು ಸಹಕಾರಿಯಾದೀತು.
ಕನ್ನಡ ಮಾಧ್ಯಮದ ಬಗ್ಗೆ ಕೀಳರಿಮೆ ಬೇಡ, ಬೇರೆ ಬೇರೆ ಕ್ಷೇತ್ರದ ಲ್ಲಿ ಸಾಧನೆ ಮಾಡಿದ ವ್ಯಕ್ತಿ ಗಳು ಕನ್ನಡ ಮಾಧ್ಯಮ ಶಾಲೆ ಯ ವಿದ್ಯಾರ್ಥಿ ಗಳು ಎನ್ನುವುದಕ್ಕೆ ಸಂತೋಷ ವಾಗುತ್ತದೆ. ಗುಣಮಟ್ಟದ , ಮೌಲ್ಯಗಳನ್ನು ಹೊಂದಿರುವ ಸಂಸ್ಕಾರ ಶಿಕ್ಷಣದಿಂದ ಮಾತ್ರ ದೊರಕುತ್ತದೆ ಎಂದರು.
ನೆಟ್ಲ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು ರಚಿಸಿದ ನಿಟಿಲಾಕ್ಷರ ಮತ್ತು ಕೊಡ್ಮಣ್ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು ರಚಿಸಿದ ಗರ್ಜನೆ ಕವನಸಂಕಲನವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಈ ಸಂದರ್ಭ ಬಿಡುಗಡೆಗೊಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಮಾಜ ಸೇವಕಿ ಡಾ. ಕಮಲಾ ಪ್ರಭಾಕರ ಭಟ್ ಮಾತನಾಡಿ ಮನೆಯಿಂದಲೇ ಸಂಸ್ಕಾರದ ಜೀವನ ಆರಂಭವಾಗಬೇಕು. ತಾಯಿ ಮತ್ತು ಶಾಲಾ ಶಿಕ್ಷಕಿ ಇಬ್ಬರು ಮಕ್ಕಳ ಸರ್ವಾಂಗೀಣ ಬೆಳವಣಿಗೆ ಗೆ ಕಾರಣೀಕರ್ತರಾಗುತ್ತಾರೆ ಎಂದರು.
ಗೋಳ್ತಮಜಲು ಗ್ರಾ.ಪಂ.ಅದ್ಯಕ್ಷೆ ಜಯಲಕ್ಮೀ , ಕೊಡ್ಮಾಣ್ ಕಾಂತಪ್ಪ ಶೆಟ್ಟಿ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಅದ್ಯಕ್ಷ ಡಾ ಕಾಸರಗೋಡು ಅಶೋಕ್ ಕುಮಾರ್, ಬಂಟ್ವಾಳ ಕ್ಷೇತ್ರ ಸಂಪನ್ಮೂಲ ಕೇಂದ್ರ ದ ಸಮನ್ವಯ ಅಧಿಕಾರಿ ರಾಧಾಕೃಷ್ಣ ಭಟ್, ಹಿರಿಯರಾದ ರಾಮಚಂದ್ರ ಬನ್ನಿಂತಾಯ, ನೆಟ್ಲ ಶಾಲೆಯ ಮುಖ್ಯೋಪಾಧ್ಯಾಯಿನಿ ಸೆಲಿನ್ ಪಿಂಟೋ, ಎಸ್. ಡಿ.ಎಂ.ಸಿ.ಅಧ್ಯಕ್ಷೆ ಚಂದ್ರಿಕಾ ದೇವಾಡಿಗ , ಉಪಾಧ್ಯಕ್ಷೆ ಆಶಾ ಜೈ ದೇವ್, ಕಾರ್ಯದರ್ಶಿ ಅನುಪಮ, ಸಹಕಾರ್ಯದರ್ಶಿ ಮಣಿಶಂಕರ್, ಖಜಾಂಚಿ ಉಮಾ ಪಾಲಕ್ಷಪ್ಪ, ಸಂಘಟನಾ ಕಾರ್ಯ ದರ್ಶಿ ನಿರ್ಮಲ ಚಂದ್ರಶೇಖರ್, ಸಾಂಸ್ಕೃತಿಕ ಕಾರ್ಯದರ್ಶಿ ಜಯಶ್ರೀ ಮಂಜುನಾಥ್, ಕ್ರೀಡಾ ಕಾರ್ಯದರ್ಶಿ ಸವಿತ ಬಾಗೇವಾಡಿ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಸಾಹಿತ್ಯ ದಲ್ಲಿ ವಿಶೇಷ ಸಾಧನೆ ಮಾಡಿದ ಡಾ. ನಾಗವೇಣಿ ಮಂಚಿ, ಜಿಲ್ಲಾ ಮಟ್ಟದ ನೃತ್ಯ ಪಟು ವಿಶೇಷ ಚೇತನ ವಿದ್ಯಾರ್ಥಿ ಕೌಶಿಕ್ ಅವರನ್ನು ಸನ್ಮಾನಿಸಲಾಯಿತು. ಸುಮಂಗಲಾ ಕಲಾ ತಂಡದ ವತಿಯಿಂದ ವಚನಗಾಯನ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಹಾಗೂ ಚಿತ್ರಕಲಾ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ ನಡೆಯಿತು.
ಮಂಗಳೂರು ಅಕ್ಕಮಹಾದೇವಿ ವೀರಶೈವ ಮಹಿಳಾ ಸಂಘದ ಅಧ್ಯಕ್ಷೆ ಸುಮಾ ಅರುಣ್ ಮಾನ್ವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಶಾ ಜೈದೇವ್ ಸ್ವಾಗತಿಸಿದರು. ಸವಿತಾ ಬಾಗೇವಾಡಿ ವಂದಿಸಿದರು. ಸುರೇಖಾ ಕಾರ್ಯಕ್ರಮ ನಿರೂಪಿದರು.